AHMEDABAD: A special court has postponed the verdict on quantum of punishment for the 31 accused in the Godhra train burning case. The 2002 tragedy had left 59 people dead and triggered violence in Gujarat that claimed the lives of over 1,200 people, mainly Muslims.

ಗೋಧ್ರಾ ಹತ್ಯಾಕಾಂಡ : ಮಾರ್ಚ್ 1 ಕ್ಕೆ 31 ಅಪರಾಧಿಗಳಿಗೆ ಶಿಕ್ಷೆ ಪ್ರಕಟ

ಬಹುಚರ್ಚಿತ ಗೋಧ್ರಾ ಹತ್ಯಾಕಾಂಡ ಪ್ರಕರಣದ ತೀರ್ಪು ಕೊನೆಗೂ ಹೊರಬಿದ್ದಿದೆ. 31ಜನರು ಅಪರಾಧಿಗಳೆಂದು ವಿಶೇಷ ತ್ವರಿತ ನ್ಯಾಯಾಲಯ ಘೋಷಿಸಿದೆ. ಮಾರ್ಚ್ 1 ಕ್ಕೆ 31 ಅಪರಾಧಿಗಳಿಗೆ ಶಿಕ್ಷೆ ಪ್ರಕಟ ವಾಗಲಿದೆ.

ಗೋಧ್ರಾ ರೈಲು ದಹನ ಪ್ರಕರಣದಲ್ಲಿ 59 ಮಂದಿ ಅಮಾಯಕ ಶ್ರೀರಾಮಭಕ್ತರು ಬಲಿಯಾಗಿದ್ದು, ಇದು 2002ರ ಗುಜರಾತ್ ಕೋಮುಗಲಭೆಗೆ ಕಾರಣವಾಗಿತ್ತು. ಇದರೊಂದಿಗೆ ಗೋಧ್ರಾ ಹತ್ಯಾಕಾಂಡ ‘ಆಕಸ್ಮಿಕ’ ಎಂದು ಬಿಂಬಿಸಲು ಹುನ್ನಾರ ನಡೆಸಿದ್ದ ಶಕ್ತಿಗಳ ಬಣ್ಣ ಬಯಲಾಗಿದೆ.

ಗೋಧ್ರಾ ಹತ್ಯಾಕಾಂಡವು ಪೂರ್ವ ಯೋಜಿತ ಸಂಚು ಎಂದಿರುವ ನ್ಯಾಯಾಲ ಯವು ೩೧ ಆರೋಪಿಗಳು ಕ್ರಿಮಿನಲ್ ಓಳಸಂಚಿನಲ್ಲಿ ಭಾಗಿಯಾಗಿದ್ದರು ಎಂದು ಬೊಟ್ಟು ಮಾಡಿದೆ. ಇತರ 63 ಆರೋಪಿ ಗಳನ್ನು ಅದು ದೋಷಮುಕ್ತಗೊಳಿಸಿದೆ. ಕರಸೇವಕರು ಅಯೋಧ್ಯೆಯಿಂದ ವಾಪಸಾ ಗುತ್ತಿದ್ದ ವೇಳೆ ಮತಾಂಧ ಮುಸ್ಲಿಮರ ಗುಂಪೊಂದು ಈ ಹತ್ಯಾಕಾಂಡದ ಸಂಚು ರೂಪಿಸಿದ್ದು ಈಗ ದೃಢಪಟ್ಟಿದೆ.

ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯವು ಮಾರ್ಚ್ 1 ಕ್ಕೆ ಪ್ರಕಟಿಸಲಿದೆ. ತೀರ್ಪಿನ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಭದ್ರತೆಯನ್ನು ಏರ್ಪಡಿಸ ಲಾಗಿತ್ತು. 2002ರ ಫೆ. 27ರಂದು ಮುಂಜಾನೆ 7.43ಕ್ಕೆ ಶ್ರೀರಾಮಭಕ್ತರು ಸಾಬರಮತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಆಗಮಿಸುತ್ತಿದ್ದ ವೇಳೆ ಗೋಧ್ರಾದ ಸಿಗ್ನಲ್ ಫಾಡಿಯಾದಲ್ಲಿ ರೈಲ್ವೆ ಬೋಗಿಗೆ (ಎಸ್೬) ಪೆಟ್ರೋಲ್ ಸುರಿದು ೫೯ ಮಂದಿ ಶ್ರೀರಾಮ ಭಕ್ತರನ್ನು ಸಜೀವ ದಹನಗೊಳಿಸಲಾಗಿತ್ತು. ಬಲಿಯಾದವರಲ್ಲಿ ಬಹುತೇಕ ವೃದ್ಧರು, ಮಹಿಳೆಯರು, ಮಕ್ಕಳು ಸೇರಿದ್ದರು.

ಈ ಪೈಕಿ ನ್ಯಾಯಾಲಯವು ಪ್ರಮುಖ ಆರೋಪಿಗಳಾದ ಮೌಲಾನಾ ಉಮರ್ ಜೀ, ಗೋಧ್ರಾ ನಗರ ಪಂಚಾಯತ್ ಮುಖ್ಯಸ್ಥ ಮೊಹಮ್ಮದ್ ಅಬ್ದುಲ್ ರಹೀಮ್ ಕಲೋಟಾ, ನಾನ್ನು ಮಿಯಾನ್ ಚೌಧರಿ, ಮೊಹಮ್ಮದ್ ಅನ್ಸಾರಿ ಅವರನ್ನು ಖುಲಾಸೆಗೊಳಿಸಿದ್ದರೂ, ಮುಖ್ಯ ಆರೋಪಿಗಳಾದ ಹಾಜಿ ಬಿಲ್ಲಾ ಮತ್ತು ರಜಾಕ್ ಕುರ್ಕುರ್ ಅವರನ್ನು ಅಪರಾಧಿ ಗಳೆಂದು ದೃಢಪಡಿಸಿದೆ.

ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಪಿ.ಆರ್. ಪಟೇಲ್ ಅವರು ಇಲ್ಲಿಯ ಸಾಬರಮತಿ ಜೈಲಿನ ಆವರಣದಲ್ಲಿಯ ವಿಶೇಷ ನ್ಯಾಯಾಲಯದಲ್ಲಿ ತೀರ್ಪನ್ನು ಪ್ರಕಟಿಸಿದರು. ಗೋಧ್ರಾ ಹತ್ಯಾಕಾಂಡ ಒಂದು ಪೂರ್ವಯೋಜಿತ ಸಂಚು ಎಂಬುದನ್ನು ನ್ಯಾಯಾಲಯವು ಒಪ್ಪಿಕೊಳ್ಳುತ್ತದೆ ಎಂದು ಅವರು ಹೇಳಿದರು. ವೈಜ್ಞಾಜಿಕ ಸಾಕ್ಷ್ಯಗಳು, ಸಾಕ್ಷಿಗಳು ಹೇಳಿಕೆ, ಸಾಂದರ್ಭಿಕ ಮತ್ತು ದಾಖಲೆಯ ಆಧಾರದಲ್ಲಿ ಈ ತೀರ್ಪು ನೀಡುತ್ತಿರುವುದಾಗಿ ನ್ಯಾಯಾಧೀಶರು ಹೇಳಿದರು.

ಪ್ರಕರಣದಲ್ಲಿ ಒಟ್ಟು 104ಜನರನ್ನು ವಿಚಾರಣೆಗೊಳಪಡಿಸಲಾಗಿತ್ತು. ಈ ಪೈಕಿ 86 ಜನರು ಅಹ್ಮದಾಬಾದ್‌ನ ಸಾಬರಮತಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಾಗಿದ್ದರು. 13 ಆರೋಪಿಗಳು ಜಾಮೀನು ಪಡೆದಿದ್ದರೆ, ಇತರ ಐವರು ಬಾಲ ಆರೋಪಿಗಳಾಗಿದ್ದರು.

2002, ಫೆ. 27ರಂದು ಗೋಧ್ರಾ ರೈಲು ನಿಲ್ದಾಣದ ಬಳಿ ಸುಮಾರು 900 ರಿಂದ 1೦೦೦ದಷ್ಟಿದ್ದ ಅಪರಿಚಿತ ವ್ಯಕ್ತಿಗಳು ಸಾಬರಮತಿ ಎಕ್ಸ್‌ಪ್ರೆಸ್ ರೈಲಿನ 56ಬೋಗಿಯ ಮೇಲೆ ದಾಳಿ ನಡೆಸಿ, ಅದಕ್ಕೆ ಹೊರಗಿನಿಂದ ಬೆಂಕಿ ಹಚ್ಚಿದ್ದು, 59ಜನರು ಸಜೀವ ದಹನಗೊಂಡಿದ್ದರು ಎಂದು ಪ್ರಕರಣದಲ್ಲಿ ಸಲ್ಲಿಸಲಾಗಿದ್ದ ದೋಷಾ ರೋಪಣ ಪಟ್ಟಿಯಲ್ಲಿ ಹೇಳಲಾಗಿತ್ತು.

Leave a Reply

Your email address will not be published.

This site uses Akismet to reduce spam. Learn how your comment data is processed.