ಐಶ್ವರ್ಯ ಮಂಜುನಾಥ ಮಾನೇಗಾರ, ಬಿಕಾಂ ಅಂತಿಮ ವರ್ಷ, ಕೆಎಲ್ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯ, ಹಾವೇರಿ.

ಬನವಾಸಿಯ ಬಡ ಕುಟುಂಬದಲ್ಲಿ 1903ಲ್ಲಿ ಜನಿಸಿ. ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಶಿಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭ ಮಾಡಿದ ಒಬ್ಬ ಅಪೂರ್ವ ಅಪರೂಪದ ಸ್ವಾತಂತ್ರ  ಹೋರಾಟಗಾರ,  ಶ್ರೀ ಹರ್ಡೇಕರ್ ಮಂಜಪ್ಪ.

ಸ್ತ್ರೀ ಸಮಾನತೆ, ಗ್ರಾಮೋದ್ಧಾರ, ಉದ್ಯೋಗಶೀಲತೆ, ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಯಶಸ್ಸು ಕಂಡ ಉತ್ತಮ ನಾಯಕ. ಇವರು 12ನೇ ಶತಮಾನದ ಬೋಧನೆಗಳನ್ನ ತಿಳಿಸುವುದಕ್ಕಾಗಿ ಮತ್ತು ಜಾತೀಯತೆಯ ನಿರ್ಮೂಲನೆಯನ್ನ ಮಾಡುವ ಉದ್ದೇಶವನ್ನು ಇಟ್ಟುಕೊಂಡು ತಮ್ಮ 27ನೇ ವಯಸ್ಸಿನಲ್ಲಿಯೇ, ಅಂದರೆ 1913ರಲ್ಲಿ ಬಸವಣ್ಣನವರ ಬಗ್ಗೆ ಅಧ್ಯಯನ ಮಾಡಿಕೊಂಡು ಮೊಟ್ಟಮೊದಲ ಬಾರಿಗೆ ದಾವಣಗೆರೆಯಲ್ಲಿ ಬಸವ ಜಯಂತಿಯನ್ನು ಆಚರಿಸುವ ಮೂಲಕ ನಾಡಿನ ಅತ್ಯಂತ ಜನಪ್ರೀಯವಾದ ಬಸವ ತತ್ವ ಮತ್ತು ಬಸವ ಬೋಧಾನ್ತ್ವಗಳನ್ನ ಲಕ್ಷಾಂತರ ಜನರಿಗೆ ತಲುಪಿಸಿದ್ದಾರೆ.

ಹರ್ಡೇಕರ್ ಮಂಜಪ್ಪನವರು 18 ಫೆಬ್ರವರಿ, 1886 ರಂದು ಬನವಾಸಿಯಲ್ಲಿ ಜನಿಸಿದರು. ಕಾಲಕ್ರಮೇಣ ಎಲ್ಲರ ನೆಚ್ಚಿನ ಶಿಕ್ಷಕರಾಗುತ್ತಾರೆ ಭಾಷಣ ಕಲೆ, ಬರವಣಿಗೆ ಹಾಗೂ ಸಾಹಿತ್ಯದ ರುಚಿ ಅವರಿಗೆ ಬಾಲ್ಯದಿಂದಲೇ ಇತ್ತು. ಇವರು ಶಿಕ್ಷಕ ವೃತ್ತಿಯನ್ನು ತ್ಯಜಿಸಿ ಮುಂದೆ ಏನು ಮಾಡುವುದು ಎಂಬ ಪ್ರಶ್ನೆ ಅವರಿಗೆ ಮೂಡುತ್ತದೆ. ಅದೇ ಸಮಯಕ್ಕೆ ಭಾರತದಲ್ಲಿ ಬ್ರಿಟಿಷರನ್ನು ಹೊರಹಾಕುವ ಪ್ರಯತ್ನವು ಸಹ ನಡೆಯುತ್ತಿರುತ್ತದೆ. ಏಕೆಂದರೆ ಅವರ ಶೋಷಣೆಗಳನ್ನು ಸಹಿಸಲಾರದೆ ಭಾರತದ ತುಂಬೆಲ್ಲಾ  ಸ್ವಾತಂತ್ರ ಚಳುವಳಿಗಳು ಆರಂಭವಾಗಿದ್ದವು, ಅಣ್ಣನ ಸಹಕಾರದೊಂದಿಗೆ ಸ್ವಾತಂತ್ರ ಚಳುವಳಿಯಲ್ಲಿ ಭಾಗಿಯಾಗುತ್ತಾರೆ. ಜನರಲ್ಲಿ ಜಾಗೃತಿ ಮೂಡಿಸಲು 02 ಸಪ್ಟೆಂಬರ್, 1906 ರಲ್ಲಿ 10,000 ಕ್ಕೂ ಹೆಚ್ಚು ಚೆಂದಾದಾರರೊಂದಿಗೆ ‘ಸಾರ್ಥಕ ಧನುರ್ದಾರಿ’ ಎಂಬ ಜರ್ನಲ್ ಅನ್ನು ಪ್ರಾರಂಭಿಸಿದರು, ನಂತರ ಬ್ರಿಟಿಷ್ ಸರ್ಕಾರದ ವಿರುದ್ಧ ಉಗ್ರ ಲೇಖನ ಮತ್ತು ದೇಶಭಕ್ತಿಯ ಸ್ವಾತಂತ್ರ್ಯದ ಕಿಚ್ಚು ಹತ್ತಿಸುವ ಕ್ರಾಂತಿಕಾರಿ ಲೇಖನಗಳನ್ನ ಸಪ್ತಹಿಕ ಒಳಗೊಂಡಿತ್ತು. ಅಷ್ಟೇ ಅಲ್ಲದೆ ತನಿಖಾ ವರದಿಗಳನ್ನು ಸಹ ಪ್ರಕಟಿಸುತ್ತಿದ್ದರು. ಬ್ರಿಟಿಷ್ ಸರ್ಕಾರ ಎಷ್ಟೇ ತೊಂದರೆ ಮಾಡಿದರು ನಿರ್ಭೀತಿಯಿಂದ ಎದುರಿಸುತ್ತಾ ಮುಂದೆ ಸಾಗಿದರು ನಿಷ್ಪಕ್ಷಪಾತವಾಗಿ ವರದಿಗಳನ್ನು ನೀಡುತ್ತಾ ಬಂದರು, ದೇಶ ಸೇವೆ ಸಮಾಜ ಸೇವೆಯನ್ನ ಮುಂದುವರಿಸುತ್ತಾ ಹೋದರು.

ಅದೇ ಕಾಲದಲ್ಲಿ ಧರ್ಮ ಜಾಗೃತಿಯನ್ನು ಸಹ ಮೂಡಿಸುವಲ್ಲಿ ಯಶಸ್ವಿಯಾಗುತ್ತಾರೆ. 1924 ರಲ್ಲಿ ಮಹಾತ್ಮ ಗಾಂಧಿಯವರು ಬೆಳಗಾವಿ ಅಧಿವೇಶನದಲ್ಲಿ ಬಂದಿರುತ್ತಾರೆ, ಆ ಒಂದು ಸಂದರ್ಭದಲ್ಲಿ ‘ಸೇವಾದಳ’ ಎಂಬ ಸಂಘಟನೆಯನ್ನು ಕಟ್ಟಿ ಬೆಳೆಸುತ್ತಾರೆ. ಜನರಲ್ಲಿ ಐಕ್ಯತೆ ಹಾಗೂ ದೇಶಾಭಿಮಾನ ಮೂಡಿಸುವಲ್ಲಿ ಪರಿಣಾಮಕಾರಿಯಾಗಿ ಶ್ರಮಿಸುತ್ತಾರೆ ಹರ್ಡೇಕರ್ ಮಂಜಪ್ಪನವರು 1934 ರಲ್ಲಿ ಜ್ಞಾನ ಪ್ರಕಾಶ ಸಂಘವನ್ನ ಸ್ಥಾಪಿಸಿ, ಸರ್ವಸಮುದಾಯಗಳ ಉದ್ಧಾರಕ್ಕಾಗಿ ಪಣತೊಡುತ್ತಾರೆ. ಉತ್ತರ ಕರ್ನಾಟಕದ ನೂರಾರು ಹಳ್ಳಿಗಳನ್ನ ಸಂಚರಿಸುವುದರ ಮೂಲಕ ಗಾಂಧೀಜಿಯವರ ತತ್ವ ಮತ್ತು ಜೀವನ ತತ್ವಗಳನ್ನ ಪ್ರಚಾರ ಮಾಡುತ್ತಾ ಬರುತ್ತಾರೆ.

ಹಾವೇರಿಯಲ್ಲಿ ಜರುಗಿದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನ ವಹಿಸಿಕೊಂಡು ಅಸ್ಪೃಶ್ಯರ ಸೇವೆಗೆ ಕರೆಯನ್ನು ನೀಡಿದರು ಇವರ ಚತುರತೆ, ಸಂಘಟನಾ ಶಕ್ತಿ ಮತ್ತು ಅವರ ಬಹುಮುಖ ವ್ಯಕ್ತಿತ್ವವನ್ನು ಗುರುತಿಸಿ ‘ದಿ ಬಾಂಬೆ ಕ್ರೊನಿಕಲ್’ ಎಂಬ ಪತ್ರಿಕೆ ಒಂದು ಲೇಖನವನ್ನು ಪ್ರಕಟಿಸುತ್ತಾ, ಅದರಲ್ಲಿ ಹರ್ಡೇಕರ್ ಮಂಜಪ್ಪ ರವರನ್ನ ಲಿಂಗಾಯತ ನಾಯಕ ಎಂದು ಕರೆಯಲಾಗುತ್ತೆ, ಗಾಂಧೀಜಿಯವರಂತೆ ಸಬರ್ಮತಿ ಆಶ್ರಮವನ್ನು ನಿರ್ಮಾಣ ಮಾಡುವ ಪ್ರಯತ್ನವನ್ನು ಸಹ ಮಾಡುತ್ತಾರೆ. ಬಿಜಾಪುರದ ಬಾಗೇವಾಡಿಯಲ್ಲಿ ಕೃಷ್ಣ ತೀರದ ಮೇಲೆ ಒಂದು ಆಶ್ರಮವನ್ನು ನಿರ್ಮಾಣ ಮಾಡುತ್ತಾರೆ . ಆ ಆಶ್ರಮದಲ್ಲಿ ಗುರುಕುಲ ಮತ್ತು ಆಧುನಿಕ ಪದ್ಧತಿಗಳನ್ನು ಸಂಯೋಜನೆಗೊಳಿಸಿ ಯುವಕರಲ್ಲಿ ನೈತಿಕತೆ ಮನೋಸ್ಥೈರ್ಯ, ಸ್ವಾವಲಂಬನೆ , ಅಕ್ಷರ ಹಾಗೂ ಸಂಸ್ಕೃತಿಯ ಸಂಸ್ಕಾರವನ್ನು ಬಿತ್ತುತ್ತಾರೆ.1942ರಲ್ಲಿ ಹರ್ಡೇಕರ್ ಮಂಜಪ್ಪನವರು ಹಸ್ತ ನಿರ್ಮಿತ ಕಾಗದ ಪ್ರತಿಗಳನ್ನ ಬಳಸಿಕೊಂಡು ಸ್ವಾತಂತ್ರ ಮತ್ತು ಧರ್ಮ ಜಾಗೃತಿ ವಿಷಯಗಳನ್ನ ಪ್ರಕಟಿಸುತ್ತಾರೆ.ಇಂತಹ ಮಹಾನ್ ಚೇತನ 3 ಜನೇವರಿ, 1947 ರಲ್ಲಿ  ಐಕ್ಯರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.