ತಾರಾ ರಾಣಿ ಶ್ರೀವಾಸ್ತವ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದವರು. ಮಹಾತ್ಮ ಗಾಂಧಿಯವರು ಕಾಂಗ್ರೆಸ್‌ನಿಂದ ಆರಂಭಿಸಿದ ಕ್ವಿಟ್ ಇಂಡಿಯಾ ಚಳುವಳಿಯ ಭಾಗವಾಗಿದ್ದ ಅವರು ಮತ್ತು ಅವರ ಪತಿ, ಫುಲೇಂದು ಬಾಬು, ಮೂಲತಃ ಬಿಹಾರದ ಸರನ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದವರು. 1942ರಲ್ಲಿ, ತಾರಾರಾಣಿ ಮತ್ತು ಅವರ ಪತಿ ಸಿವಾನ್‌ನಲ್ಲಿ ಪೊಲೀಸ್ ಠಾಣೆಯ ಕಡೆಗೆ ನಡೆದ ಮೆರವಣಿಗೆ ಅವರ ಜೀವನದ ದಿಕ್ಕನ್ನೇ ಬದಲಾಯಿಸಿಬಿಟ್ಟಿತ್ತು.

ತಾರಾರಾಣಿ ಅವರು ಪಾಟ್ನಾ ನಗರದ ಸಮೀಪದ ಸರನ್‌ನಲ್ಲಿ ಜನಿಸಿದರು . ಅವರು ಚಿಕ್ಕ ವಯಸ್ಸಿನಲ್ಲೇ ಫುಲೇಂದು ಬಾಬು ಅವರನ್ನು ವಿವಾಹವಾದರು. ಲಿಂಗ ಅಸಮಾನತೆಯ ಅನೇಕ ವಿಚಾರಗಳಿಗೆ ಎಡೆ ಮಾಡಿಕೊಡಬಹುದಾದ ಬಗರಿಟಿಷ್ ಸರಕಾರದ ಕಾಯ್ದೆಗಳನ್ನು ಸಾರ್ವಜನಿಕವಾಗಿ ವಿರೋಧಿಸಿ, ತಾರಾ ರಾಣಿ ತನ್ನ ಹಳ್ಳಿಯ ಮತ್ತು ಸುತ್ತಮುತ್ತಲಿನ ಮಹಿಳೆಯರಿಗೆ ಬ್ರಿಟಿಷ್ ಸತ್ತೆಯ ವಿರುದ್ಧ ಪ್ರತಿಭಟನಾ ಮೆರವಣಿಗೆಗಳನ್ನು ಸೇರಲು ಪ್ರೇರೇಪಿಸುತ್ತಿದ್ದರು‌.

ಅದು 12 ಆಗಸ್ಟ್ 1942 ರಂದು, ಮಹಾತ್ಮಾ ಗಾಂಧಿಯವರು ಸತ್ಯಾಗ್ರಹಕ್ಕೆ ಕರೆ ನೀಡಿದ್ದರು. ತಾರಾರಾಣಿ ಮತ್ತು ಅವರ ಪತಿ ಇಬ್ಬರೂ ಹೋರಾಟದ ಮುಂಚೂಣಿಯಲ್ಲಿದ್ದರು. ಬಿಹಾರದ ಸಿವಾನ್‌ನಲ್ಲಿ ಪೊಲೀಸ್ ಠಾಣೆಯ ಮುಂದೆ ಭಾರತದ ಧ್ವಜವನ್ನು ಹಾರಿಸುವ ಮೆರವಣಿಗೆಯನ್ನು ಆಯೋಜಿಸಿದರು. ಪೊಲೀಸರು, ಧ್ವಜಾರೋಹಣವನ್ನು ತಡೆಯುವಲ್ಲಿ , ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡಿದರು.

ಹೋರಾಟಗಾರರ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗದಿದ್ದಾಗ ಪೊಲೀಸರು ಗುಂಡು ಹಾರಿಸಿದರು. ಇದೇ ಸಂದರ್ಬದಲ್ಲಿ ಮುಂಚೂಣಿಯಲ್ಲಿದ್ದ ಫುಲೇಂದು ಬಾಬು ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿರು. ಇದರಿಂದ ವಿಚಲಿತರಾಗದ ತಾರಾರಾಣಿಯವರು, ತನ್ನ ಸೀರೆಯಿಂದ ಸೆರಗಿನ ಒಂದು ತುಂಡು ಹರಿದು ಬಟ್ಟೆಯ ಪಟ್ಟಿಗಳಿಂದ ಬಾಬು ಅವರ ಗಾಯಗಳಿಗೆ ಬ್ಯಾಂಡೇಜ್ ಮಾಡುತ್ತಾರೆ.ಆಗ ಫುಲೇಂದು ಬಾಬು ತನ್ನ ಚಿಂತೆ ಬಿಟ್ಟು ಹೋರಾಟ ಮುಂದುವರೆಸುವಂತೆ ಹೇಳುತ್ತಾರೆ. ನಂತರ, ತಾರಾ ರಾಣಿ ಮೆರವಣಿಗೆಯನ್ನು ಮುಂದುವರೆಸಿ ಪೊಲೀಸ್ ಠಾಣೆಯ ಎದುರು ಧ್ವಜ ಹಾರಿಸಲು ಪ್ರಯತ್ನ ಮುಂದುವರೆಸಿದರು, ಅಲ್ಲಿ ಅವರು ಧ್ವಜಾರೋಹಣ ಮಾಡಲು ಸಫಲರಾಗುತ್ತಾರೆ.

ಅಲ್ಲಿನ ವಿಜಯದ ನಂತರ ಹಿಂದಿರುಗಿ ನೋಡಿದರೆ, ತನ್ನ ಪತಿ ತನ್ನ ಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಯುತ್ತದೆ. 15 ಆಗಸ್ಟ್ 1942 ರಂದು, ಅವರ ಸ್ಮರಣಾರ್ಥವಾಗಿ ಛಾಪ್ರಾದಲ್ಲಿ ಒಂದು ಪ್ರಾರ್ಥನಾ ಸಭೆ ನಡೆಯಿತು. ದೇಶಕ್ಕಾಗಿ  ತಮ್ಮ ಪತಿಯನ್ನೂ ತ್ಯಾಗ ಮಾಡಿದ ವೀರ ಮಹಿಳೆ ತಾರಾರಾಣಿ.

Leave a Reply

Your email address will not be published.

This site uses Akismet to reduce spam. Learn how your comment data is processed.