ಇಂಡಿಯಾ ಫೌಂಡೇಶನ್ ತನ್ನ ಏಳನೇ ‘ಇಂಡಿಯಾ ಐಡಿಯಾ ಕಾನ್ಕ್ಲೇವ್ -2022″ಅನ್ನು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ನಲ್ಲಿ ನಡೆಸಿತು.ಅದರ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹರಾದ ಶ್ರೀ ಮುಕುಂದ ಸಿ.ಆರ್ ಅವರು ಆನ್ಲೈನ್ ಮುಖಾಂತರ ಮಾತನಾಡಿದರು.
ಇತ್ತೀಚೆಗೆ ಎಕಾನಾಮಿಸ್ಟ್ ಟೆಕ್ನಾಲಜಿಯ ಕುರಿತು ಮಾತನಾಡುವಾಗ ಟೆಕ್ನಾಲಜಿ ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ಮಾಡುವ ಸಲುವಾಗಿ ನಡೆಯುತ್ತಿರುವ ಕ್ರಾಂತಿಯ ಪರಿಮಾಣದ ಕುರಿತು ಮಾಡುತ್ತಾ ಅದರ ವಾಸ್ತವವನ್ನು ತೆರೆದಿಟ್ಟಿದ್ದರು.ಬಯೋ ಸೆನ್ಸರ್ಸ್ ಸೇರಿದಂತೆ ಮುಂದಿನ ದಶಕದಲ್ಲಿ ಅತಿ ಮಹತ್ತರವಾದ ಬದಲಾವಣೆಯ ಕುರಿತು ಮಾತನಾಡಿದ್ದರು.
ಕೇವಲ ಆರೋಗ್ಯ ಕ್ಷೇತ್ರವೇ ಅಲ್ಲದೆ ಈ ರೀತಿಯಲ್ಲಿ ತಂತ್ರಜ್ಞಾನವು ವಿವಿಧ ಕ್ಷೇತ್ರದ ವಿವಿಧ ಆಯಾಮದಲ್ಲಿ ಕೆಲಸ ನಡೆಯುತ್ತಿದೆ.
ಇಂಡಿಯಾ ಫೌಂಡೇಶನ್ ಅವರು ಪ್ರಸ್ತುತ ಸಮಾಜಕ್ಕೆ ಅಗತ್ಯವಾಗಿರುವ, ಭವಿಷ್ಯದ ಕುರಿತಂತೆ ಅತ್ಯಂತ ಸಮಂಜಸವಾಗಿ ಚಿಂತಿಸಿದೆ.ಅವರಿಗೆ ಅಭಿನಂದನೆಗಳು.
ಭಾರತದಲ್ಲಿ ಅತಿ ದೊಡ್ಡ ಮಾನವ ಸಂಪನ್ಮೂಲ ಇದೆ.ಅದು ಈಗ ಡೆಮಾಗ್ರಫಿಕ್ ಡಿವಿಡೆಂಡ್ ಆಗಿ ಬದಲಾಗಿದೆ.ಅದರಲ್ಲೂ ಹೆಚ್ಚಿನ ಯುವ ಜನತೆ, ಟೆಕ್ನಾಲಜಿಯ ಕಡೆಗೆ ವಾಲಿದ್ದಾರೆ.ನಮ್ಮ ಸಂಸ್ಕೃತಿ,ಪರಂಪರೆಗಳ ಜೊತೆಗೆ ತಂತ್ರಜ್ಞಾನ ಮಿಳಿತಗೊಂಡಾಗ ನಾವು ಜಗತ್ತಿಗೆ ಹೆಚ್ಚು ಪ್ರಸ್ತುತವಾಗುತ್ತಾ ಬೆಳೆಯುತ್ತಿದ್ದೇವೆ.ಈಗ ನಾವು ಜಗತ್ತಿಗೆ ಬಹಳ ನಿರ್ಣಾಯಕವಾದ ಸ್ಥಾನದಲ್ಲಿದ್ದೇವೆ ಅದರಲ್ಲಿ ಕೂಡ ಎಲ್ಲ ಕ್ಷೇತ್ರದಲ್ಲಿ ವಿಶೇಷವಾಗಿ ಜಿಯೋ ಪೊಲಿಟಿಕಲ್ ಆದ ವಿಚಾರಗಳ ಮೂಲಕ ಅತ್ಯಂತ ಮಹತ್ತರವಾಗಿದ್ದೇವೆ.
ಆದರೆ ಡೆಮಾಗ್ರಫಿಕ್ ಡಿವಿಡೆಂಡ್ನ ಜೊತೆಗೆ ಸಾಂಸ್ಕೃತಿಕ ಆಯಾಮವೂ ಜೊತೆಯಾಗಿ,ಭಾರತ ಮತ್ತೆ ಜಗತ್ಯಿನ ಮುನ್ನೆಲೆಗೆ ಬರಲಿದೆ.ಸರಕಾರವೂ ಈ ಕುರಿತಾಗಿ ಹೆಚ್ಚಿನ ಶ್ರಮ ವಹಿಸಬೇಕಿದೆ.ಮೆಟಾ ಎರಾ ದಲ್ಲಿ ಈ ಎಲ್ಲ ಆಯಾಮವೂ ಮುಖ್ಯವಾಗುತ್ತದೆ,ಆದರೆ ನಾವು ಸಮಾಜವಾಗಿ ಅತ್ಯಂತ ಸೂಕ್ತವಾದ ಜನರನ್ನು ನಮ್ಮ ವ್ಯವಸ್ಥೆಯ ಒಳಗೆ ತಂದು ಆ ಮೂಲಕ ಸೃಜನಾತ್ಮಕವಾದ ಪ್ರಸ್ತುತವಾದ ತಂತ್ರಜ್ಞಾನದ ಉಪಯೋಗ ಮಾಡಿಕೊಳ್ಳಬೇಕಿದೆ.
ನಮ್ಮ ಸಂಸ್ಕೃತಿ ಅತ್ಯಂತ ಪುರಾತನವಾಗಿದ್ದರೂ ನಮ್ಮಲ್ಲಿ ಒಂದು ಬ್ಯಾಲೆನ್ಸ್ ಇದೆ.ಅಲ್ಲೊಂದು ಡೈನಾಮಿಕ್ ಈಕ್ಚಿಲಿಬ್ರಿಯಂ ಇದೆ.ಅದೊಂದು ಕಾಸ್ಮಿಕ್ ಬ್ಯಾಲೆನ್ಸ್. ಅದೇ ಧರ್ಮ.ಅದನ್ನೇ ನಾವು ಜಗತ್ತಿಗೆ ಅನೇಕ ಶತಮಾನಗಳಿಂದ ಹೇಳಿರುವುದು.ಅದು ಜಗತ್ತಿಗೆ ಭಾರತದ ಸಂದೇಶ. ಜಗತ್ತಿನ ಎಲ್ಲ ಸಂದರ್ಭಗಳಲ್ಲಿ ಉತ್ತರ ನೀಡುವ ಅದಕ್ಕೆ ಸೂಕ್ತವಾದ ಪರಿಹಾರ ನೀಡುವ ಆ ಡೈನಾಮಿಕ್ ಈಕ್ವಿಲಿಬ್ರಿಯಂ ಸದ್ಯದ ಜಗತ್ತಿನ ಅಗತ್ಯತೆ.
ಕಾಳಿದಾಸನ ರಘವಂಶದ ದಿಲೀಪ ಹೇಳುವ ವಾಕ್ಯ ಅತ್ಯಂತ ಸಮಂಜಸವೆನ್ನುತ್ತದೆ.ಅವನು ಹೇಳುತ್ತಾನೆ, “ಮನುಷ್ಯನೆಂದರೆ ಹೇಗಿರಬೇಕು? ಅವನಿಗೆ ಸಾವಿನ ಭಯವಿಲ್ಲ, ಆದರೆ ದೇಹವನ್ನು ಸಜ್ಜಾಗಿಡುತ್ತಾನೆ,ನರಕದ ಭಯವಿಲ್ಲ ಆದರೂ ಸತ್ಕಾರ್ಯ ಮಾಡುತ್ತಾನೆ, ಅವನಿಗೆ ದುಡ್ಡಿನ ಮೋಹವಿಲ್ಲ ಆದರೂ ದುಡಿಯುತ್ತಾನೆ, ಅವನು ಅತಿಭೋಗಿಯಲ್ಲ,ಆದರೆ ಜೀವನದ ಸುಖವನ್ನು ಅನುಭವಿಸುತ್ತಾನೆ.ಮನುಷ್ಯ ಹೀಗಿರಬೇಕು” ಇದು ನಮ್ಮ ಜೀವನದ ಮೌಲ್ಯ,ಇದು ಮನುಷ್ಯನನ್ನು ಭಾರತೀಯ ಚಿಂತನೆ ನೋಡುತ್ತಿರುವ ರೀತಿ, ಅದನ್ನು ಭಾರತೀಯ ಸಮಾಜ ಕಾಪಾಡಿಕೊಂಡು ಹೋಗಬೇಕಿದೆ.
ತಂತ್ರಜ್ಞಾನ,ಶಸ್ತ್ರ,ಕೋವಿಡ್ ಪ್ಯಾಂಡಮಿಕ್ ಯಾವುದೇ ಎಷ್ಟೇ ಸಮಸ್ಯೆಗಳು ಇದ್ದರೂ ಕೂಡ ನಮ್ಮ ಪುರಾತನ ಸಂಸ್ಕೃತಿಯನ್ನು ಹಾಗೇ ಇರಿಸಲಿದೆ.ನಾವು ತಂತ್ರಜ್ಞಾನದ ಜೊತೆಗೆ ಮೌಲ್ಯಗಳನ್ನು ಮಿಳಿತಗೊಳಿಸಿಕೊಂಡು ನಾವು ಸಂಸ್ಕೃತಿಯನ್ನು ಉಳಿಸಿಕೊಳ್ಳಲಿದ್ದೇವೆ.ಇದು ಹೊಸ ಜಗತ್ತಿಗೆ ಭಾರತದ ಕೊಡುಗೆ. ಇದು ಭಾರತ ತೋರಿಸುತ್ತಿರುವ ಹಾದಿ.
ಸಮಾರೋಪ ಸಮಾರಂಭದಲ್ಲಿ ಇಂಡಿಯಾ ಫೌಂಡೇಶನ್ ನ ಶ್ರೀ ರಾಮ್ ಮಾಧವ್, ಮಾಜಿ ರಾಜ್ಯ ಸಭಾ ಸದಸ್ಯರಾದ ಶ್ರೀ ಸ್ವಪನ್ ದಾಸ್ ಗುಪ್ತಾ ಅವರು ಭಾಗವಹಿಸಿ ಮಾತನಾಡಿದರು.