ಅಂತರರಾಷ್ಟ್ರೀಯ ವ್ಯಾಪಾರ ಮತ್ತು ರಾಷ್ಟ್ರದ ಆರ್ಥಿಕತೆಯಲ್ಲಿ ನೌಕಾಯಾನದ ಪ್ರಾತದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಏಪ್ರಿಲ್‌ 5 ರಂದು ರಾಷ್ಟ್ರೀಯ ಕಡಲ ದಿನವನ್ನಾಗಿ ಆಚರಿಸಲಾಗುತ್ತದೆ. ದೇಶದ ಆರ್ಥಿಕ ಅಭಿವೃದ್ಧಿಗೆ ನೌಕೆಯಾನದ ಕೊಡುಗೆ ಅಪಾರ. ದೇಶೀಯ ಸರಕುಗಳನ್ನು ರಪ್ತು ಮಾಡಲು ನೌಕಯಾನದ ಪಾತ್ರ ಮಹತ್ವದಾಗಿದೆ.

ಕಡಲ ದಿನದ ಇತಿಹಾಸ
ಸಮುದ್ರದ ಆರಂಭವು ಕ್ರಿ.ಪೂ. 3ನೇ ಸಿಂಧೂ ಕಣಿವೆಯ ಜನರು ಮೆಸಪೊಟೇಮಿಯದೊಂದಿಗೆ ಕಡಲ ವ್ಯಾಪಾರದಿಂದ ಆರಂಭಿಸಿದರು. 1919 ರ ಸಮಯದಲ್ಲಿ ಭಾರತ ಬ್ರಿಟಿಷ್‌ ಆಳ್ವಿಕೆಯಲ್ಲಿತ್ತು. ಆಗ ಏಪ್ರಿಲ್‌ 5 ರಂದು ಎಸ್‌ ಎಸ್‌ ಲಾಯಲ್ಟಿ ಎಂಬ ಹಡಗು ಮುಂಬೈನಿಂದ ಲಂಡನ್‌ ಗೆ ಪ್ರಯಾಣ ಬೆಳೆಸಿತು. ಆ ಹಡಗು ಸಿಂಧಿಯಾ ಸ್ಟೀಮ್‌ ನ್ಯಾವಿಗೇಷನ್‌ ಕಂಪನಿ ಲಿಮಿಟೆಡ್‌ ಒಡೆತನದಲ್ಲಿತ್ತು. ಆ ಸಮಯದಲ್ಲಿ ಭಾರತದ ಬಹುತೇಕ ಎಲ್ಲ ಜಲಮಾರ್ಗಗಳು ಹಾಗೂ ಸಾಧನಗಳು ಬ್ರಿಟಿಷರ ಕೈಯಲ್ಲಿತ್ತು. ವ್ಯಾಪಾರಕ್ಕೆ ಸಂಬಂಧಿಸಿದಂತೆ ಅಂದು ಭಾರತ ಒಂದು ಪ್ರಮುಖ ತಾಣವಾಗಿತ್ತು. ಈ ಸಂದರ್ಭದಲ್ಲಿ ಭಾರತೀಯರ ಒಡೆತನದ ಹಡುಗು ಏಪ್ರಿಲ್ 5ರಂದು ಪ್ರಯಾಣಿಸಿದ್ದು ಎಲ್ಲಾ ಭಾರತೀಯರಿಗೂ ಒಂದು ಮಹತ್ವದ ವಿಷಯವಾಗಿತ್ತು. ಹಾಗಾಗಿ ಆ ವರ್ಷದಿಂದ ಈ ದಿನವನ್ನು ರಾಷ್ಟ್ರೀಯ ಕಡಲ ದಿನವನ್ನಾಗಿ ಆಚರಿಸಲಾಗುತ್ತಿದೆ.


ಮಹತ್ವ
ಭಾರತೀಯ ಆರ್ಥಿಕತೆಯ ಬೆಳವಣಿಗೆಗೆ ಕಡಲ ಉದ್ಯಮವು ನೀಡುವ ಮಹತ್ವದ ಕೊಡುಗೆಯನ್ನು ಗುರುತಿಸುವುದು ಈ ದಿನದ ಮಹತ್ವ. ಭಾರತೀಯ ಆರ್ಥಿಕತೆಯ ಉತ್ಕರ್ಷ ಮತ್ತು ಪೋಷಣೆಯಲ್ಲಿ ಕಡಲ ಉದ್ಯಮವು ವಹಿಸುವ ಪಾತ್ರ ಪ್ರಮುಖವಾಗಿದೆ. ಭಾರತ ಕಡಲ ವಲಯ – ಬಂದರುಗಳು, ಒಳನಾಡು ಜಲ ಸಾರಿಗೆ, ಹಡಗು ಮರುಬಳಕೆಗೆ ಸಂಬಂಧಿಸಿದ ವಿಭಾಗಗಳನ್ನು ಒಳಗೊಂಡಿರುವ ಭಾರತೀಯ ಕಡಲ ವಲಯದ ಸಂಕ್ಷಿಪ್ತ ಅವಲೋಕನವನ್ನು ನೀಡುತ್ತದೆ. ಜಾಗತಿಕವಾಗಿ ಹಡಗು ನಿರ್ಮಾಣದಲ್ಲಿ ಭಾರತವು 21 ನೇ ಸ್ಥಾನದಲ್ಲಿದೆ. ಜಾಗತಿಕ ಕಡಲ ವಲಯದಲ್ಲಿ ತರಬೇತಿ ಪಡೆದ ಮಾನವಶಕ್ತಿಯ ಪೂರೈಕೆ ಭಾರತವು 5 ನೇ ಸ್ಥಾನದಲ್ಲಿದೆ. ಭಾರತದಲ್ಲಿ 12 ಪ್ರಮುಖ ಬಂದರುಗಳಿವೆ.ಅಷ್ಟೇ ಅಲ್ಲದೆ ಭಾರತದಲ್ಲಿ 200 ಕ್ಕೂ ಹೆಚ್ಚು ಪ್ರಮುಖವಲ್ಲದ ಬಂದರುಗಳಿವೆ.ಕಡಲ ವಲಯವು ಭಾರತದ ವ್ಯಾಪಾರ ಮೌಲ್ಯದ 65% ಅನ್ನು ಹೊಂದಿದೆ.ಭಾರತದ ವ್ಯಾಪಾರ ಪ್ರಮಾಣದ 95% ಕಡಲ ವಲಯದ ಮೂಲಕ ನಡೆಯುತ್ತದೆ. ಭಾರತದ ಬಂದರುಗಳಲ್ಲಿ ನಿರ್ವಹಿಸಲಾಗುವ ಒಟ್ಟು ಸರಕುಗಳಲ್ಲಿ 54% ಸರಕುಗಳನ್ನು 12 ಪ್ರಮುಖ ಬಂದರುಗಳು ನಿರ್ವಹಿಸುತ್ತವೆ.

ಭಾರತದಲ್ಲಿ ಒಳನಾಡಿನ ಜಲ ಸಾರಿಗೆ ಕಳೆದ ಕೆಲವು ವರ್ಷಗಳಿಂದ ಉತ್ತಮ ಬೆಳವಣಿಗೆಯನ್ನು ಕಾಣುತ್ತಿದೆ. ಭಾರತದಲ್ಲಿ 5,000 ಕಿ.ಮೀ.ಗೂ ಹೆಚ್ಚು ಒಳನಾಡಿನ ಜಲಮಾರ್ಗಗಳು ಅಭಿವೃದ್ಧಿ ಹಂತದಲ್ಲಿವೆ.


ಮ್ಯಾರಿಟೈಮ್ ಇಂಡಿಯಾ ವಿಷನ್ – 2030
ಜಾಗತಿಕ ಕಡಲ ವಲಯದಲ್ಲಿ ಪ್ರಮುಖ ಸ್ಥಾನವನ್ನು ಪಡೆಯಲು ಮ್ಯಾರಿಟೈಮ್ ಇಂಡಿಯಾ ವಿಷನ್ 2030 ರಲ್ಲಿ ಪ್ರಮುಖ ವಿಷಯಗಳನ್ನು ಒಳಗೊಂಡಿದೆ.

  1. ಹಡಗು ನಿರ್ಮಾಣ, ದುರಸ್ತಿ ಮತ್ತು ಮರುಬಳಕೆಯಲ್ಲಿ ಜಾಗತಿಕ ಪಾಲನ್ನು ಹೆಚ್ಚಿಸುವುದು.
  2. ಎಲ್ಲಾ ಮಧ್ಯಸ್ಥಗಾರರನ್ನು ಬೆಂಬಲಿಸಲು ನೀತಿ ಮತ್ತು ಸಾಂಸ್ಥಿಕ ಚೌಕಟ್ಟನ್ನು ಬಲಪಡಿಸುವುದು.
  3. ತಂತ್ರಜ್ಞಾನ ಮತ್ತು ನಾವೀನ್ಯತೆಯ ಮೂಲಕ ಲಾಜಿಸ್ಟಿಕ್ಸ್ ದಕ್ಷತೆಯನ್ನು ಹೆಚ್ಚಿಸುವುದು.
  4. ಅತ್ಯುತ್ತಮ ದರ್ಜೆಯ ಬಂದರು ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿವುದು.
  5. ಭಾರತದ ಜಾಗತಿಕ ಸ್ಥಾನಮಾನ ಮತ್ತು ಕಡಲ ಸಹಕಾರವನ್ನು ಹೆಚ್ಚಿಸುವುದು.
  6. ಸುರಕ್ಷಿತ, ಸುಸ್ಥಿರ ಮತ್ತು ಹಸಿರು ಕಡಲ ವಲಯದಲ್ಲಿ ಮುನ್ನಡೆ.

Leave a Reply

Your email address will not be published.

This site uses Akismet to reduce spam. Learn how your comment data is processed.