ಪ್ರಾರ್ಥನಾ ವೃತಿಯ ಸಹಸ್ರಚಂದ್ರದರ್ಶನ

ಅಂದು ನವಲಗುಂದದ ಜೀವರಥಿಯಲ್ಲಿ ಸಂಭ್ರಮ ಸಡಗರ ಎಲ್ಲರ ಪ್ರೀತಿಯ ಕಾಕಾರ ಸಹಸ್ರಚಂದ್ರ  ದರ್ಶನದ ವಿಶೇಷ ಕಾರ್ಯಕ್ರಮ, ನವಲಗುಂದದ ಖ್ಯಾತ ವರ್ತಕರೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿ ಸಂಘಚಾಲಕರೂ ಆದ ಶ್ರೀ ಮಾಧವರಾವ್ ಜೀವಪ್ಪ ಆನೇಗುಂದಿಯವರ ನೂತನ ಗೃಹ ಜೀವರಥಿಯ ಪ್ರವೇಶ ಹಾಗೂ ಸಹಸ್ರಚಂದ್ರ ದರ್ಶನ ಕಾರ್ಯಕ್ರಮವೊಂದು ಸಾಂಸ್ಕ್ರತಿಕ ಸಂಗಮದಂತಿತ್ತು. ಸಹಸ್ರಚಂದ್ರ ದರ್ಶನದ ದಿನ ಸಂಘಟಿಸಿದ್ದ ಮಂಗಲನಿಧಿ ಕಾರ್ಯಕ್ರಮ ಆನೇಗುಂದಿ ಮನೆತನದ ಸಂಸ್ಕಾg, ಬಂಧುತ್ವ, ಸಮಾಜಮುಖೀ ವ್ಯಕ್ತಿತ್ವವನ್ನು ಬಿಂಬಿಸುವಂತಿತ್ತು.

RSS Sahasrachandra Darshana

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಮಾನ್ಯ ಶ್ರೀ.ನ. ಕೃಷ್ಣಪ್ಪನವರು ಹಾಗೂ ಮಾನ್ಯ ಶ್ರೀ ಸು.ರಾಮಣ್ಣನವರು ಉಪಸ್ಥಿತರಿದ್ದರು. ಶ್ರೀ ನ. ಕೃಷ್ಣಪ್ಪನವರು ಮಾತನಾಡುತ್ತಾ ಸಹಸ್ರಚಂದ್ರ ದರ್ಶನದಲ್ಲಿ ಮೊದಲು ಯಾವ ವ್ಯಕ್ತಿ ಸಹಸ್ರಚಂದ್ರ ದರ್ಶನ ಮಾಡುತ್ತಾನೊ ಅವನಿಗಿಂತ ಹಿರಿಯರು ಮೊದಲು ನೀರರೆಯಬೇಕು ಆಮೇಲೆ ಮಕ್ಕಳು, ಮೊಮ್ಮಮ್ಮಕ್ಕಳು, ಮರಿಮಕ್ಕಳು ನೀರರೆಯಬೇಕು. ಶ್ರೀ ಮಾಧವರಾಯರು ಈ ಭಾಗ್ಯ ಪಡೆದಿzರೆ. ಆದರೆ ಇಂದಿನ ಜನ ಮದುವೆಯಾಗುವುದೇ ೩೮-೪೦ ನೇ ವಯಸ್ಸಿಗೆ. ಅವರೆಲ್ಲಿ ಮೊಮ್ಮಕ್ಕಳನ್ನು ಕಾಣಬೇಕು? ಎಂದರು.ಕುಟುಂಬ ಜೀವನ ಶಿಥಿಲಗೊಳ್ಳುತ್ತಿದೆ. ಮನೆಯಲ್ಲಿ ಅಕ್ಕ-ತಮ್ಮ ಅಣ್ಣ- ತಂಗಿ ಇಂತಹ ಸಂಬಂಧಗಳು ಇಂದು ಮರೆಯಾಗುತ್ತಿವೆ.ನೈತಿಕ ಮೌಲ್ಯಗಳನ್ನು ಕುಟುಂಬ ಕಲಿಸಬೇಕು ಆದರೆ ಇಂದು ಅದು ಕುಟುಂಬದಲ್ಲೂ ಸಿಗುತ್ತಿಲ್ಲವೆಂದು ವಿಷಾದದಿಂದ ನುಡಿದರು ನಾವು ಆ ಕುಟುಂಬ ಜೀವನವನ್ನು ಮರಳಿ ಪಡೆಯಬೇಕಾಗಿದೆ ಎಂದರು.

ಮಂಗಲನಿಧಿ ಕಾರ್ಯಕ್ರಮವನ್ನುzಶಿಸಿ ಮಾತನಾಡಿದ ರಾ.ಸ್ವ.ಸಂಘದ ಇನ್ನೋಬ್ಬ ಹಿರಿಯ ಪ್ರಚಾರಕರಾದ        ಶ್ರೀ ಸು ರಾಮಣ್ಣನವರು, ಭಾರತೀಯ ಪರಂಪರೆ ದಾನಕ್ಕೆ ಹೆಸರಾಗಿದೆ, ಮಹಾಭಾರತದ ಕರ್ಣನು  ಬಾಣಶೂರನು ಹೌದು,  ಆದರೆ ಜನ ಅವನನ್ನು  ನೆನಪಿಟ್ಟಿರುವದು  ದಾನಶೂರನೆಂದು ಎಂದರು. ಕೊಡುವುದನ್ನು ಕಲಿಸಬೇಕು, ಕೊಡುವದರಲ್ಲಿರುವ ಆನಂದ ಇನ್ಯಾವುದರಲ್ಲಿಯೂ ಇಲ್ಲ. ಶ್ರೀ ಮಾಧವರಾಯರು ಎಂತಹ ಕಷ್ಟದಲ್ಲೂ ತಮ್ಮ ಜೀವನದಲ್ಲಿ ಕರ್ತವ್ಯಗಳಿಂದ ಸಮಾಜಮುಖಿ ಕಾರ್ಯಗಳಿಂದ ವಿಮುಖರಾದವರಲ್ಲ. ಅವರ ಅಂಗಡಿಯಲ್ಲಿ ಏನಾದರೂ ಖರೀದಿ ಮಾಡಿ ಅವರು ಮರಳಿಸಿದ ಉಳಿದ ಹಣವನ್ನು ಯಾರಾದರೂ ಎಣಿಸಿದರೆ ಇನ್ನೊಬ್ಬ ಗಿರಾಕಿ ಎಣಿಸಿದವರನ್ನೇ ಬಯುತ್ತಿದ್ದ. ಮಾಧವರಾಯರ ಅಂಗಡಿಯಲ್ಲಿ ಕೊಟ್ಟ ಹಣ ಎಣಿಸಿ ನೋಡುತ್ತಿzಯ? ಬುದ್ದಿ ಇದ್ಯಾನಿಂಗೆ ಅಂತಾ, ಅಂತಹ ವಿಶ್ವಾಸ ಅವರಲ್ಲಿ ಹಾಗೂ ಅವರ ವ್ಯಾಪಾರದಲ್ಲಿ. ಇಂದು ಹಲವು ಸಂಘ ಸಂಸ್ಥೆಗಳಿಗೆ ಮಾಧವರಾಯರು ದಾನಮಾಡಿzರೆ. ಅವರು ಶತಾಯುಶಿಗಳಾಗಲಿ , ಅವರ ಮಾರ್ಗದರ್ಶನ ಸಮಾಜಕ್ಕೆ ನಿರಂತರ ದೊರಕಲಿ, ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಯನ್ನು ವೃತದಂತೆ ನಡೆಸಿಕೊಂಡು ಬಂದವರು, ಇದು ಸಾಮಾನ್ಯ ಸಾಧನೆಯಲ್ಲ ಎಂದು ಶುಭ ಹಾರೈಸಿದರು.

ತಮ್ಮ ಅನಿಸಿಕೆ ವ್ಯಕ್ತಪಡಿಸಿದ ಶ್ರೀ ಮಾಧವರಾಯರು , ಇಂದು ಆನೇಗುಂದಿ ಕುಟುಂಬದವರೆಲ್ಲ. ಸೇರಿzವೆ.  ನಾವು ಶೀಘ್ರ ಕೋಪಿಗಳಾದರು ದೀರ್ಘ ದ್ವೇಷಿಗಳಲ್ಲ. ಅದಕ್ಕೆ ಬೇರೆಬೇರೆಯಾದರು ಎಲ್ಲ ಕಾರ್ಯಕ್ರಮಗಳಲ್ಲಿ ಮತ್ತೆ  ಸೇರುತ್ತೇವೆ, ಎಂದರು ನನ್ನ ತಂದೆ ೧೯೪೧ರಲ್ಲಿ ಮರಣಿಸುವಾಗ ತಲೆ ನೇವರಿಸಿ. ಸಿಟ್ಟು ಕಡಿಮೆ ಮಾಡಿಕೊಂಡು ಪ್ರೀತಿ ತೋರಿಸುವುದನ್ನು ಕಲಿ ಎಂದು ಹೇಳಿದ್ದರು , ಜೀವವಿರುವ ತನಕವೂ ಸಂಘದ ಪ್ರಾರ್ಥನೆ , ನಮಸ್ತೇ, ಸದಾ ವೃತ್ತಲೆ ಒಂದೂ ದಿನವು ತಪ್ಪಬಾರದೆಂಬುದನ್ನು ವೃತವನ್ನಾಗಿ ಸ್ವೀಕರಿಸಿzನೆ. ಪೂಜ್ಯ ಬಸವಣ್ಣನವರು ಮಾಡುತ್ತಿರುವ ಕೆಲಸವನ್ನೇ ಇಂದು ಜಂಗಮರೂಪಿ ಪ್ರಚಾರಕರು ಮಾಡುತ್ತಿzರೆ. ಎಂದರು.

ಕಾರ್ಯಕ್ರಮದಲ್ಲಿ ರಾ.ಸ್ವ ಸಂಘದ ೨ ಪ್ರಾಂತದ ಹಿರಿಯ ಪ್ರಚಾರಕರು, ಸಂಘಚಾಲಕರು, ಸ್ವಯಂಸೇವಕರು , ಹಾಗೂ ಸಮಾಜದ ಅನೇಕ ಗಣ್ಯರನ್ನೋಳಗೊಂಡಂತೆ ಸಾವಿರಾರು ಜನ ಪಾಲ್ಗೋಂಡಿದ್ದರು. ನವಲಗುಂದದ ಪೂಜ್ಯ ಸಿzಶ್ವರ ಶಿವಾಚಾರ್ಯರು, ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಶ್ರೀ ವೀರಯ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದ ಅಧ್ಯPತೆಯನ್ನು ಹುಬ್ಬಳ್ಳಿಯ ಹೆಬಸೂರ ಭವನದ ಮಾಲಿಕರಾದ ಶ್ರೀ ಬಸವರಾಜ ಹೆಬಸೂರ (ಹೇಮಾದ್ರಿ) ಇವರು ವಹಿಸಿದ್ದರು. ಆನೇಗುಂದಿ ಕುಟುಂಬದ ಎಲ್ಲ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದೇ ಕಾಯಕ್ರಮದಲ್ಲಿ ಸಮಾಜಕ್ಕೆ ಅನುಪಮ ಕೊಡುಗೆ ನೀಡಿದ ಶ್ರೀ ಸಂಗೀತವಿದ್ವಾನ್ ಕೆ.ಎಸ್.ಚಂದ್ರಶೇಖರಗುಪ್ತಾ, ಶಿವಮೊಗ್ಗ.ಶ್ರೀವಿಠ್ಠಲಸಾ ರಾ. ರಾಯಬಾಗಿ ಸಮಾಜ ಕಾರ್ಯಕರ್ತ ನವಲಗುಂದ. ಶ್ರೀ ಟಿ.ವ್ಹಿ.ಮಹಾಂತೇಶ ನಿವೃತ್ತ ಇಂಜಿನೀಯರ ನವಲಗುಂದ. ಡಾ||ಗೋವಿಂದ ಹ. ನೇರೆಗಲ್ಲ ಸಮಾಜ ಕಾರ್ಯಕರ್ತ ಹುಬ್ಬಳ್ಳಿ. ಶ್ರೀ ಸಕ್ರಪ್ಪ ಸ.ಹಳ್ಳದ ಪ್ರಗತಿಪರ ರೈತರು ನವಲಗುಂದ. ಶ್ರೀ ಅಣ್ಣಪ್ಪ ಶಂ.ಬಾಗಿ ಎ.ಪಿ.ಎಂ.ಸಿ ಅಧ್ಯPರು ನವಲಗುಂದ. ಶ್ರೀ ಲೋಕನಾಥ ಗೋ. ಹೆಬಸೂರ ಮಾಜಿ ಪುರಸಬಾ ಅಧ್ಯPರು ನವಲಗುಂದ. ಇವರೆಲ್ಲನ್ನು ಆತ್ಮೀಯವಾಗಿ ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ತಮ್ಮ ಧರ್ಮಪತ್ನಿ ದಿ.ವಿದ್ಯಾತಾಯಿ ಇವರ ಸ್ಮರಣಾರ್ಥ, ಶ್ರೀ ಶಿವಕೃಪಾ ಟ್ರಸ್ಟಗೆ, ವನವಾಸಿ ಕಲ್ಯಾಣ ಗೋರಕ್ಷಾ, ಆನೇಗುಂದಿ ಬಾಲವಿಕಾಸ ಮಂದಿರ, ಸೇವಾಭಾರತಿ ಸಂಸ್ಥೆಗಳಿಗೆ ಮಂಗಲನಿಧಿ ವಿತರಿಸಿದರು. ರಾ.ಸ್ವ ಸಂಘದ ಪ್ರಚಾರಕರಿಗೆ ಉಡುಗೊರೆ ವಿತರಿಸಲಾಯಿತು.

ಕಾರ್ಯಕ್ರಮದ ನಿರೂಪಣೆ ಶ್ರೀ ಸತೀಶ ಮೂರುರು. ಸ್ವಾಗತ ಶ್ರೀ ಎಸ್.ಆರ್.ನಾಗರಾಜಶೆಟ್ಟಿ, ಪ್ರಾಸ್ತಾವಿಕ ಹಾಗೂ ಪರಿಚಯ ಶ್ರೀ ಸುಹಾಸ ಮಾ. ಆನೇಗುಂದಿ, ವಂದನಾರ್ಪಣೆ ಶ್ರೀ  ಉಸ ಮಾ. ಆನೇಗುಂದಿ ಇವರು ಮಾಡಿದರು.ವರದಿ : ಸತೀಶ ಮೂರುರು,ಹುಬ್ಬಳ್ಳಿ

Leave a Reply

Your email address will not be published.

This site uses Akismet to reduce spam. Learn how your comment data is processed.