ಪಾಣಿಪತ್ : ಸಮಲ್ಕಾದ ಪಟ್ಟಿಕಲ್ಯಾಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರತಿನಿಧಿ ಸಭಾದಲ್ಲಿ ಗ್ರಾಮ ವಿಕಾಸ ಕೇಂದ್ರದ ವತಿಯಿಂದ ‘ಸೇವಾ ಸಾಧನಾ’ ಎಂಬ ಪ್ರದರ್ಶಿನಿಯನ್ನು ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯರಾದ ಭಯ್ಯಾಜಿ ಜೋಷಿಯವರು ಶನಿವಾರ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿ ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟನೆ ನಡೆಸಿದರು. ಇದೇ ಸಂದರ್ಭದಲ್ಲಿ ಸಂಘದ ಉತ್ತರ ಕ್ಷೇತ್ರದ ಸಂಘಚಾಲಕರಾದ ಸೀತಾರಾಮ್ ವ್ಯಾಸ, ಹರಿಯಾಣ ಪ್ರಾಂತ ಸಂಘಚಾಲಕ ಪವನ್ ಜಿಂದಲ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಉದ್ಘಾಟಿಸಿ ಮಾತನಾಡಿದ ಭಯ್ಯಾಜಿ ಜೋಷಿಯವರು, ” ಈ ರೀತಿಯ ಪ್ರದರ್ಶಿನಿ ನಮ್ಮ ಮುಂದಿನ ಪೀಳಿಗೆಗೆ ಪ್ರೇರಣೆ ನೀಡುವ ಕೆಲಸ ಮಾಡುತ್ತದೆ. ಈ ಯುವ ಪೀಳಿಗೆಗೆ ತಮ್ಮ ಐತಿಹಾಸಿಕ ಧಾರ್ಮಿಕ ಸ್ಥಳಗಳ ಕುರೊತಾಗಿ, ಅದರ ಇತಿಹಾಸದ ಕುರಿತಾಗಿ ಅರಿತುಕೊಳ್ಳಲು ಸಹಾಯಕವಾಗುತ್ತದೆ” ಎಂದರು.

ಪ್ರದರ್ಶಿನಿಯಲ್ಲಿ ಸ್ಥಳೀಯ ಸಾಂಸ್ಕೃತಿಕ ಇತಿಹಾಸವನ್ನು ಬಿಂಬಿಸುವ ವಿವಿಧ ವಸ್ತುಗಳ ಪ್ರದರ್ಶನ, ಅಲ್ಲಿನ ಐತಿಹಾಸಿಕ ಮತ್ತು ಸಾಮಾಜಿಕ ಚಿತ್ರಣಗಳನ್ನು ತೋರಿಸುವ ವಿವಿಧ ಕಲಾ ಪ್ರಾಕಾರಗಳ ಪ್ರದರ್ಶನ ಅಲ್ಲದೆ ಸ್ಥಳೀಯ ಊಟೋಪಚಾರ,ವೇಷಭೂಷಣ, ಹಬ್ಬ ಹರಿದಿನ, ಲೋಕಕಲಾ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ.

ವಿಶೇಷವಾಗಿ ಹರಿಯಾಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಮೊದಲು ಕಟ್ಟಿ ಬೆಳೆಸಿದ ಹಿರಿಯರು, ಅವರ ಜೀವನ ಸ್ಮರಣೆ, ಐತಿಹಾಸಿಕ ಕಾರ್ಯಕ್ರಮಗಳು ಹೀಗೆ ಅನೇಕ ವಿಚಾರಗಳ ಕುರಿತಾದ ವಸ್ತುಪ್ರದರ್ಶನ ಹಾಗೂ ಡಿಜಿಟಲ್ ರೂಪದಲ್ಲಿ ಸಾದರಪಡಿಸಲಾಗಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.