Ram Madhav addressing in Manthana Bengaluru event on THE ASSAM TRIUMPH on July 02, 2016

ಬೆಂಗಳೂರು 2 ಜುಲೈ 2016: ಭಾರತೀಯ ಜನತಾ ಪಾರ್ಟಿಯಂತಹ ರಾಷ್ಟ್ರವಾದಿ ಪಕ್ಷ ಆಸ್ಸಾಮಿನಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಸರ್ಕಾರ ರಚಿಸಿರುವುದಕ್ಕೆ ಒಂದು ವಿಶೇಷ ಅರ್ಥವಿದೆ. ಆಸ್ಸಾಮಿನ ಜನರು ಅಗಾಧಪ್ರಮಾಣದಲ್ಲಿ ಬಿಜೆಪಿಗೆ ಮತ ನೀಡಿದ್ದಾರೆ ಈ ಗೆಲುವಿನಿಂದಾಗಿ ಆಸ್ಸಾಮಿನ ಭವಿಷ್ಯ ರಾಷ್ಟ್ರೀಯವಾದಿ ನಾಯಕತ್ವದ ಕೈಯಲ್ಲಿ ಸುರಕ್ಷಿತವಾಗಿದೆಯೆಂದು ಇಂದು ಭಾರತೀಯರು ಸಂತುಷ್ಟರಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಇಂಡಿಯಾ ಫೌಂಡೇಶನ್ ನಿರ್ದೇಶಕ ಹಾಗೂ ಆರೆಸ್ಸೆಸ್ ಪ್ರಚಾರಕ ರಾಮ್ ಮಾಧವ್ ಹೇಳಿದ್ದಾರೆ. ಅವರು ಬೆಂಗಳೂರಿನ ರಾಷ್ಟ್ರೀಯ ವಿದ್ಯಾಲಯ ಟೀಚರ‍್ಸ್ ಕಾಲೇಜು ಸಭಾಂಗಣದಲ್ಲಿ ಆಸ್ಸಾಮ್ ವಿಕ್ರಮ – ಪೂರ್ವೋತ್ತರ ರಾಜ್ಯಗಳಲ್ಲಿ ಸೈದ್ಧಾಂತಿಕ ಒಪ್ಪಿಗೆಯಲ್ಲಿ ವರ್ಧನೆ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದರು. ರಾಷ್ಟ್ರೀಯವಾದಿ ವಿಚಾರ ವೇದಿಕೆ – ಮಂಥನ ಆಯೋಜಿಸಿದ ಕಾರ್ಯಕ್ರಮದಲ್ಲಿ ಇತ್ತೀಚಿನ ಆಸ್ಸಾಮ್ ಚುನಾವಣೆಯಲ್ಲಿ ಬಿಜೆಪಿ ಪಡೆದ ಗೆಲುವಿನ ಕುರಿತು ರಾಮ ಮಾಧವ ಅನುಭವಗಳನ್ನು ಹಂಚಿಕೊಂಡರು.

Ram Madhav addressing in Manthana Bengaluru event on THE ASSAM TRIUMPH on July 02, 2016
Ram Madhav addressing in Manthana Bengaluru event on THE ASSAM TRIUMPH on July 02, 2016

ರಾಮ್ ಮಾಧವ್ ಅವರ ಭಾಷಣದ ಸಾರಾಂಶ:
ಆಸ್ಸಾಮಿನಲ್ಲಿ ಬಿಜೆಪಿಯನ್ನು ಅರ್ಥೈಸಿಕೊಳ್ಳಬೇಕಾದರೆ ಅಲ್ಲಿನ ಜನಸಂಖ್ಯಾ ಹಂಚಿಕೆಯನ್ನು ತಿಳಿದುಕೊಳ್ಳುವುದು ಮಹತ್ವದ್ದಾಗಿದೆ. ಕೆಲವು ಜಿಲ್ಲೆಗಳಲ್ಲಿ ಶೇಕಡ 60-75ವರೆಗೆ ಮತದಾರರು ನುಸುಳುಕೋರರಾಗಿದ್ದಾರೆ. ಆದರೂ ಆಸ್ಸಾಮಿನ ಮತದಾರರು ಬಹುದೊಡ್ಡ ಪ್ರಮಾಣದಲ್ಲಿ ಬಿಜೆಪಿಗೆ ಮತನೀಡಿದ್ದಾರೆ.2011ರ ಚುನಾವಣೆಯಲ್ಲಿ ಬಿಜೆಪಿ ೧೧.೫ ಶೇ. ಮತ ಪಡೆದಿತ್ತು ೨೦೧೪ರ ಲೋಕಸಭಾ ಚುನಾವಣೆಯಲ್ಲಿ 36 ಶೇ. ಮತ ಪಡೆದಿತ್ತು ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ. 43 ಮತಪಡೆದು ಬಿಜೆಪಿ ನೇತೃತ್ವದ ಎನ್‌ಡಿಎ 86 ಸ್ಥಾನಗಳನ್ನು ಗೆದ್ದಿತು. ಕೇವಲ ಬಿಜೆಪಿ ಸ್ಪರ್ಧಿಸಿದ 89 ಸ್ಥಾನಗಳ ಪೈಕಿ 60ರಲ್ಲಿ ಗೆಲುವು ಸಾಧಿಸಿತು.

IMG_7954
ಈ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಜನಪ್ರಿಯತೆಯೂ ಒಂದು ಕಾರಣ. ಜೊತೆಗೆ ಮೂರು ಪ್ರಮುಖ ಕಾರಣಗಳಿಂದ ಇಂತಹ ಅಭೂತಪೂರ್ವ ಗೆಲುವು ಸಾಧ್ಯವಾಯಿತು.
ಮೊದಲನೆಯದಾಗಿ ಈ ಚುನಾವಣೆಯು ನಮಗೆ ಕೊನೆಯ ಅವಕಾಶ ಎಂದು ನಾವು ಅಂದುಕೊಂಡಿದ್ದೆವು. ಮೂರು ಕೋಟಿ ಜನಸಂಖ್ಯೆಯ ಆಸ್ಸಾಮಿನಲ್ಲಿ ಒಂದು ಕೋಟಿ ವಿದೇಶಿ ನುಸುಳುಕೋರರೆ ತುಂಬಿರುವಾಗ ಮುಂದಿನ ಐದು ವರ್ಷಗಳಲ್ಲಿ ಜನಸಂಖ್ಯೆ ಹಂಚಿಕೆಯಿಂದ ಏನಾಗಬಹುದು ಎನ್ನುವುದು ಊಹಿಸುವುದು ಕಷ್ಟ. ಆಸ್ಸಾಮಿ ಸಂಸ್ಕೃತಿ, ಸಂಪ್ರದಾಯ, ವೈವಿಧ್ಯಮಯ ಪದ್ಧತಿಗಳು, ಕಾಮಾಕ್ಯ ಮಂದಿರ, ಪವಿತ್ರ ಬ್ರಹ್ಮಪುತ್ರ ಒಟ್ಟಾರೆ ಆಸ್ಸಾಮಿನ ಅಸ್ಮಿತೆಗೇ ತೀವ್ರ ಸಂಕಷ್ಟ ಒದಗಿತ್ತು. ಆದ್ದರಿಂದ ಆಸ್ಸಾಮಿನ ಗುರುತನ್ನು ಉಳಿಸುವ ದೃಷ್ಟಿಯಿಂದ ಈ ಗೆಲುವು ಅತ್ಯಂತ ಪ್ರಮುಕವಾಗಿತ್ತು.
ಎರಡನೆಯದಾಗಿ ಹದಿನೈದು ವರ್ಷಗಳ ಕಾಂಗ್ರೆಸ್ ದುರಾಡಳಿತ. ಉದಾಹರಣೆಗೆ ಆಸ್ಸಾಮಿನ ಯುವಜನಾಂಗ ಬಿಎ, ನರ್ಸಿಂಗ್ ಮುಂತಾದ ಶಿಕ್ಷಣ ಪಡೆಯಲೂ ಕರ್ನಾಟಕದಂತಹ ದೂರದ ರಾಜ್ಯಗಳಿಗೆ ಹೋಗಬೇಕಾದ ಪರಿಸ್ಥಿತಿ ಇದ್ದು ಮೂಲಭೂತ ಶಿಕ್ಷಣ ಸೌಲಭ್ಯದ ವ್ಯವಸ್ಥೆಯೂ ಸರಿಯಾಗಿಲ್ಲ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಆಸ್ಸಾಂ ಕೊನೆಯ ನಾಲ್ಕು ರಾಜ್ಯಗಳಲ್ಲೊಂದಾಗಿದೆ. ಅಭಿವೃದ್ಧಿಯ ದೃಷ್ಟಿಯಿಂದ ತೀವ್ರ ನಿರ್ಲಕ್ಷಕ್ಕೊಳಗಾಗಿತ್ತು.

IMG_7786
ಮೂರನೆಯದಾಗಿ ಪೂರ್ವೋತ್ತರ ಭಾರತವನ್ನು ಕಾಂಗ್ರೆಸ್ ಮುಕ್ತಗೊಳಿಸುವ ಸಲುವಾಗಿ ಆಸ್ಸಾಮಿನಲ್ಲಿ ಗೆಲುವು ಅಗತ್ಯವಾಗಿತ್ತು.
ವಿದೇಶಿ ನುಸುಳುಕೋರ ವಿಷಯವನ್ನು ಸಂಪೂರ್ಣ ನಿರ್ಲಕ್ಷಿಸಿದ ಹಿಂದಿನ ಸರ್ಕಾರ ಅವರರನ್ನು ಮತಬ್ಯಾಂಕ್ ಆಗಿ ಕಂಡಿತ್ತು. ಈ ಗೆಲುವುದಿನಿಂದ ಅಂತಹ ನೀತಿ ಕೊನೆಗೊಳ್ಳಲಿದ್ದು ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗುವುದು. ಬಾಂಗ್ಲಾದೇಶದ ಸರ್ಕಾರದೊಂದಿಗೆ ಭಾರತ ಒಪ್ಪಂದ ಮಾಡಿಕೊಂಡಿದ್ದು ಗಡಿಗಳನ್ನು ಗುರುತಿಸಲಾಗಿದೆ. ೨೦೧೬ರ ಕೊನೆಯ ವೇಳೆಗೆ ಗಡಿಗಳಲ್ಲಿ ಬೇಲಿ ನಿರ್ಮಿಸಿ ಹಾಗೂ ಗಡಿಗುಂಟ ಭದ್ರತಾ ಪಡೆಯ ಕಣ್ಗಾವಲಿನ ಮೂಲಕ ನುಸುಳುವಿಕೆಯನ್ನು ಸಂಪೂರ್ಣ ತಡೆಯಲಾಗುವುದು. ಮುಂದಿನ ವರ್ಷದ ವೇಳೆಗೆ ಆಸ್ಸಾಮಿನಲ್ಲಿ ರಾಷ್ಟ್ರೀಯ ನಾಗರಿಕರ ರಿಜಿಸ್ಟರ್ ಕಾರ್ಯ ಕೂಡ ಪೂರ್ಣಗೊಳ್ಳಲಿದ್ದು ನುಸುಳುಕೊರರನ್ನು ಗುರುತಿಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.
ಆಸ್ಸಾಮಿನಲ್ಲಿ ಸ್ಥಾಪನೆಯಾಗಿರುವ ರಾಷ್ಟ್ರವಾದಿ ಸರ್ಕಾರ ದೇಶದ ಸಮಗ್ರತೆಗೆ ಕುಂದಾಗದಂತೆ ರಕ್ಷಿಸುವುದು.
ದಕ್ಷಿಣ ಏಷಿಯ ದೇಶಗಳ ವಿದೇಶಿ ಸಂಬಂಧದ ವಿಷಯದಲ್ಲಿ ಪೂರ್ವೋತ್ತರ ರಾಜ್ಯಗಳು ತುಂಬಾ ಮಹತ್ವವಾದ ಪಾತ್ರವನ್ನು ವಹಿಸುತ್ತವೆ. ಬಾಂಗ್ಲಾದೇಶ, ಮ್ಯಾನಮಾರ್ ಮೂಲಕ ದಕ್ಚಿಣ ಏಷಿಯ ದೇಶಗಳಿಗೆ ಭೂಸಂಪರ್ಕ ಕಲ್ಪಿಸಬಹುದು. ಈ ದೃಷ್ಟಿಯಿಂದ ಭಾರತದ ಲುಕ್ ಈಸ್ಟ್ ನೀತಿಗೆ ಪೂರ್ವೋತ್ತರ ರಾಜ್ಯಗಳು ತುಂಬ ಪ್ರಮುಖವಾದವು. ಆದರೆ ಈ ಪ್ರದೇಶದಲ್ಲಿನ ಹಿಂಸೆ ಮತ್ತು ಪ್ರಕ್ಷುಬ್ಧತೆಯಿಂದಾಗಿ ಇದಕ್ಕೆ ಹಿನ್ನೆಡಯಾಗಿತ್ತು. ಇಂದು ಪೂರ್ವೋತ್ತರ ರಾಜ್ಯಗಳ ರಹದಾರಿಯೆಂದೇ ಕರೆಯುವ ಆಸ್ಸಾಮಿನಲ್ಲಿ ರಾಷ್ಟ್ರವಾದಿ ಸರ್ಕಾರದ ಸ್ಥಾಪನೆಯಿಂದ ಈ ಕಾರ್ಯಕ್ಕೆ ವೇಗ ಸಿಗಲಿದೆ. ಆಸ್ಸಾಮ್ ದಕ್ಷಿಣ ಏಷಿಯಾ ರಾಷ್ಟ್ರಗಳ ಸಂಭಂಧದ ರಹದಾರಯಾಗಲಿದೆ. ಹಾಗೇಯೆ ಈ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಇದು ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಅನೇಕ ಚಟುವಟಿಕೆಗಳನ್ನು ನಾವು ಕಾಣಲಿದ್ದೇವೆ.
ಆಸ್ಸಾಮ್ ಗೆಲುವಿನ ನಂತರ ಪೂರ್ವೋತ್ತರ ರಾಜ್ಯಗಳ ರಾಜಕೀಯ ಪಕ್ಷಗಳನ್ನು ಒಂದುಗೂಡಿಸಿ ನಾರ್ಥ ಈಸ್ಟ್ ಡೆಮೊಕ್ರಾಟಿಕ್ ಅಲಾಯನ್ಸ್ (NEDA) ಸ್ಥಾಪಿಸಲಾಗಿದೆ. ಕೇವಲ ಆಸ್ಸಾಮಿನಲ್ಲಷ್ಟೇ ಅಲ್ಲದೇ ಅರುಣಾಚಲ ಪ್ರದೇಶದಲ್ಲಿ ಬಿಜೆಪಿಯ ಮಿತ್ರಪಕ್ಷ ಅಧಿಕಾರದಲ್ಲಿದೆ, ನಾಗಾಲ್ಯಾಂಡಿನ ಸರ್ಕಾರದಲ್ಲಿ ಬಿಜೆಪಿ ಪಾಲುದಾರನಾಗಿದೆ. ಸಿಕ್ಕಿಂನಲ್ಲಿ ಅಧಿಕಾರ ಹಿಡಿದ ಪಕ್ಚ ಒಕ್ಕೂಟದ ಸದಸ್ಯನಾಗಿದೆ. ಹಾಗೇ ಮೇಘಾಲಯದ ಪ್ರಮುಖ ರಾಜಕೀಯ ಪಕ್ಷಗಳು, ಮೀಜೋರಾಮ್‌ನ ಮೀಜೋ ಡೆಮೊಕ್ರಾಟಿಕ್ ಫ್ರಂಟ್ ಎನ್‌ಎಡಿಎನ ಸದಸ್ಯ ಪಕ್ಚಗಳಾಗಿವೆ. ಒಂದು ಕಾಲದಲ್ಲಿ ಪ್ರಾದೇಶಿಕ ಪ್ರತ್ಯೇಕತಾವಾದಿಗಳಾಗಿದ್ದ ಪಕ್ಷಗಳು ಇಂದು ಎನ್‌ಎಡಿಎನ ಸದಸ್ಯರಾಗಿವೆ. ಇದು ಭಾರತದೊಂದಿಗೆ ಪೂರ್ವೋತ್ತರ ರಾಜ್ಯಗಳ ಬಂಧವನ್ನು ಬಲಗೊಳಿಸಿ ರಾಷ್ಟ್ರೀಯ ಸಮಗ್ರತೆಯನ್ನು ಗಟ್ಟಿಗೊಳಿಸುತ್ತಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ ಕರ್ನಾಟಕ ದಕ್ಷಿಣ ಪ್ರಾಂತದ ಕಾರ್ಯವಾಹ ನಾ ತಿಪ್ಪೇಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೋಷಿಯಲ್ ಮೀಡಿಯಾ ಕಾರ್ಯಕರ್ತ ಕಿರಣಕುಮಾರ್ ಪರಿಚಯಿಸಿ ಸ್ವಾಗತಿಸಿದರು. ಮಂಥನದ ಡಾ. ರಘೋತ್ತಮ ನಿರ್ವಹಿಸಿ ವಂದಿಸಿದರು. ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಶಾಸಕ ಹಾಗೂ ಹಿರಿಯ ಬಿಜೆಪಿ ನಾಯಕ ಸುರೇಶ್‌ಕುಮಾರ, ಸಂಘ ಪರಿವಾರದ ಹಿರಿಯರು ಉಪಸ್ಥಿತರಿದ್ದರು.

IMG_7799

IMG_8021

IMG_7768 IMG_7957

62aacc1d-689e-4ec7-b161-d5f906dc5cae

IMG-20160703-WA0000

Leave a Reply

Your email address will not be published.

This site uses Akismet to reduce spam. Learn how your comment data is processed.