ರಾಷ್ಟ್ರ ಸೇವಿಕಾ ಸಮಿತಿಯ ಅಖಿಲ ಭಾರತ ಕಾರ್ಯಕಾರಿಣಿ ಮತ್ತು ಪ್ರತಿನಿಧಿ ಮಂಡಳಿಯ 2 ದಿನಗಳ ಅರ್ಧವಾರ್ಷಿಕ ಬೈಠಕ್  ವಾರಣಾಸಿಯ ಅತುಲಾನಂದ ಕಾನ್ವೆಂಟ್ ಶಾಲೆಯಲ್ಲಿ ನಡೆಯಿತು.


ಬೈಠಕ್ಕಿನಲ್ಲಿ ವಂದನಿಯ ಪ್ರಮುಖ ಸಂಚಾಲಿಕಾ ವಿ ಶಾಂತಾಕುಮಾರಿ ಮತ್ತು ಪ್ರಮುಖ ಕಾರ್ಯವಾಹಿಕಾ ಮಾ. ಸೀತಾ ಗಾಯತ್ರಿ ಉಪಸ್ಥಿತರಿದ್ದರು. ಬೈಠಕ್ ನಲ್ಲಿ 35 ಪ್ರಾಂತ್ಯಗಳ 115 ಪ್ರತಿನಿಧಿಗಳ ಭಾಗವಹಿಸಿದ್ದರು.

ಮೊದಲ ದಿನದ ಬೈಠಕ್ ಆರಂಭದಲ್ಲಿ ಅಗಲಿದ ಗಣ್ಯರು, ಸೈನಿಕರು ಮತ್ತು ದುರಂತದಲ್ಲಿ ಮಡಿದ ದೇಶ ಬಂಧುಗಳಿಗೆ ಹಾಗೂ ಕಾರ್ಯಕರ್ತಾ ಬಂಧು ಭಗಿನಿಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಬೈಠಕ್ ಉದ್ಘಾಟನಾ ಅಧಿವೇಶನದಲ್ಲಿ ಕಳೆದ ಅರ್ಧವಾರ್ಷಿಕ ಸಭೆಯಲ್ಲಿ ನಿರ್ಣಯಿಸಲಾದ ವಿಷಯಗಳ ಮೌಲ್ಯಮಾಪನ ನಡೆಯಿತು.


ಬೈಠಕ್ಕಿನ ಮಾಹಿತಿಯ ಅನುಸಾರ ದೇಶಾದ್ಯಂತ 12 ಕ್ಷೇತ್ರಗಳು, 38 ಪ್ರಾಂತಗಳಲ್ಲಿ 3700ಕ್ಕೂ ಹೆಚ್ಚು ಸಮಿತಿಯ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ದೇಶಾದ್ಯಂತ ಒಟ್ಟು 1042 ಜಿಲ್ಲೆಗಳ ಪೈಕಿ 810 ಜಿಲ್ಲೆಗಳಲ್ಲಿ ಸಮಿತಿ ಕಾರ್ಯ ನಡೆಯುತ್ತಿದೆ. ಸಮಿತಿಯ ಸೇವಿಕೆಯರು ದೇಶಾದ್ಯಂತ ಸುಮಾರು 1500 ಸೇವಾ ಕಾರ್ಯಗಳನ್ನು ನಡೆಸುತ್ತಿದ್ದಾರೆ.


ಎರಡನೆಯ ದಿನ ಸಮಿತಿಯ ಶಿಕ್ಷಾ ವರ್ಗ, ವೈಚಾರಿಕ ವಿಮರ್ಶೆಯ ವೇಗ ಹಾಗೂ ದೇಶಾದ್ಯಂತ ನಡೆದ ಮಹಿಳಾ ಸಮ್ಮೇಳನಗಳ ಅನುಸರಣೆ ಕುರಿತು ಚರ್ಚೆ ನಡೆಯಿತು. ಜೊತೆಗೆ ಮಹಿಳೆಯರ ಪ್ರಸ್ತುತ  ಸಾಮಾಜಿಕ ಸ್ಥಿತಿ ಹಾಗೂ ಕೆಲವು ಆಕಸ್ಮಿಕ ವಿಷಯಗಳ ಕುರಿತು ಚಿಂತನೆ ನಡೆಯಿತು.

Leave a Reply

Your email address will not be published.

This site uses Akismet to reduce spam. Learn how your comment data is processed.