ಇಂದು ಪುಣ್ಯಸ್ಮರಣೆ

ಬಂಕಿಮ್‌ ಚಂದ್ರ ಚಟರ್ಜಿ ಅವರು ಭಾರತದ ಶ್ರೇಷ್ಠ ಕಾದಂಬರಿಕಾರರು ಮತ್ತು ಕವಿಗಳಾಗಿ ಪ್ರಸಿದ್ಧಿ ಹೊಂದಿದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗುವುದಕ್ಕೆ ಸಹಸ್ರಾರು ಮಂದಿಗೆ ಪ್ರೇರಣೆಯನ್ನೊದಗಿಸಿದ ಭಾರತದ ರಾಷ್ಟ್ರೀಯ ಗೀತೆ ವಂದೇ ಮಾತರಂ ಬರೆದು ಜನಮಾನಸದಲ್ಲಿ ಗುರುತಿಸಿಕೊಂಡವರು. ಇಂದು ಅವರ ಪುಣ್ಯತಿಥಿ.

ಪರಿಚಯ
ಬಂಕಿಮ್‌ ಚಂದ್ರ ಚಟರ್ಜಿ ಅವರು ಜೂನ್‌ 27, 1838 ರಂದು ಬಂಗಾಳದ ಕಾಂತಲ್ಪಾರಾ ಗ್ರಾಮದಲ್ಲಿ ಜನಿಸಿದರು. ತಂದೆ ಯಾದವ್ ಚಂದ್ರ ಚಟರ್ಜಿ, ತಾಯಿ ದುರ್ಗಾದೇವಿ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಚಿನ್ಸುರಾದಲ್ಲಿನ ಮೊಹ್ಸಿನ್‌ ಕಾಲೇಜಿನಲ್ಲಿ ಮುಗಿಸಿದರು. ನಂತರ ಅವರು ಪ್ರೆಸಿಡೆನ್ಸಿ ಕಾಲೇಜಿನ ಕಲಾವಿಭಾಗದಲ್ಲಿ ಪದವಿ ಪಡೆದಿದ್ದು, ಕೊಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದರು. ಚಟರ್ಜಿ ಅವರಿಗೆ ಸಂಸ್ಕೃತದಲ್ಲಿ ಬಹಳ ಆಸಕ್ತಿಯನ್ನು ಹೊಂದಿದರು.

ಬಂಕಿಮ್‌ ಚಂದ್ರ ಚಟರ್ಜಿ ಅವರು ವಿದ್ಯಾಭ್ಯಾಸದ ನಂತರ 1859 ರಂದು ಕೊಲ್ಕತ್ತಾದ ಡೆಪ್ಯೂಟಿ ಕಲೆಕ್ಟರ್‌ ಆಗಿ ನೇಮಕಗೊಂಡರು. ನಂತರ ಅವರು ಮೂವತ್ತು ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿ 1891 ರಲ್ಲಿ ನಿವೃತ್ತರಾದರು.


ಸಾಹಿತ್ಯ ಕ್ಷೇತ್ರದ ಕೊಡುಗೆ
ಬಂಕಿಮ್‌ ಚಂದ್ರ ಚಟರ್ಜಿ ಅವರು ಸಾಹಿತ್ಯದ ಕಡೆಗೆ ಹೆಚ್ಚು ಆಸಕ್ತಿ ಹೊಂದಿದವರು. ಅವರು ಪದ್ಯಗಳ ಬರಹಗಾರರಾಗಿ ತಮ್ಮ ಸಾಹಿತ್ಯ ವೃತ್ತಿಯನ್ನು ಪ್ರಾರಂಭಿಸಿದರು. 1865ರಲ್ಲಿ ದುರ್ಗೇಶನಂದಿನಿ ಮೊದಲ ಬಂಗಾಳಿ ಕಾದಂಬರಿ ಪ್ರಕಟವಾಯಿತು. ಇವರು ಬರೆದಂತಹ ಈ ಕಾದಂಬರಿ ಇಂದಿಗೂ ಸಹ ಪ್ರಸಿದ್ಧಿ ಪಡೆದಿದೆ. 1866ರಲ್ಲಿ ಕಪಾಲಕುಂಡಲ, 1869ರಲ್ಲಿ ಮೃಣಾಲಿನಿ, 1877ರಲ್ಲಿ ಚಂದ್ರೇಖರ ಮತ್ತು ರಜನಿ, 1881ರಲ್ಲಿ ರಾಜಸಿಂಹ ಹಾಗೂ 1884ರಲ್ಲಿ ದೇವಿ ಚೌಧುರಾಣಿ ಕಾದಂಬರಿಗಳನ್ನು ರಚಿಸಿದರು. 1882ರಲ್ಲಿ ವಂದೇ ಮಾತರಂ ಹಾಡನ್ನು ರಚಿಸಿದ್ದರು. ನಂತರ ಅದು ರಾಷ್ಟ್ರೀಯ ಗಾನವನ್ನಾಗಿ  ಸ್ವೀಕರಿಸಲಾಗಿದೆ.


ಬಂಕಿಮ್ ಚಂದ್ರ ಚಟರ್ಜಿಯವರು ಸಾಹಿತ್ಯ ಪ್ರಚಾರದ ಮೂಲಕ ಬಂಗಾಳಿ ಮಾತನಾಡುವುದರ ಜೊತೆಗೆ ಬಂಗಾಳದ ಸಾಂಸ್ಕೃತಿಕ ಪುನರುಜ್ಜೀವನವನ್ನು ತರಲು ಬಯಸಿದ್ದರು. ಈ ಉದ್ದೇಶದಿಂದ ಅವರು 1872 ರಲ್ಲಿ ಬಂಗದರ್ಶನ ಎಂಬ ಮಾಸಪತ್ರಿಕೆಯನ್ನು ಆರಂಭಿಸಿದರು. 18 ನೇ ಶತಮಾನದ ಉತ್ತರಾರ್ಧದ ‘ಸನ್ಯಾಸಿ ಬಂಡಾಯ’ವನ್ನು ಆಧರಿಸಿದ ಆನಂದಮಠ ಎಂಬ ಕಾದಂಬರಿಯನ್ನು ಬರೆಯುವ ಮೂಲಕ ರಾಷ್ಟ್ರೀಯತೆಯ ಕಲ್ಪನೆಗೆ ಉತ್ತಮ ಕೊಡುಗೆಯನ್ನು ನೀಡಿದ್ದಾರೆ. ಅನೇಕ ಸ್ವಾತಂತ್ರ್ಯ ಹೋರಾಟಗಾರರು ಆನಂದಮಠದಿಂದ ಪ್ರೇರಿತರಾಗಿದ್ದರು.


ಬಂಕಿಮ್‌ ಚಂದ್ರ ಚಟ್ಟೋಪಾಧ್ಯಾಯ ಅವರು ಏಪ್ರಿಲ್‌ 8, 1894 ರಲ್ಲಿ ತಮ್ಮ 55 ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.