17 ಜನವರಿ 2020, ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ ಶಂಕರಪುರ ಭಾಗ, ವಿದ್ಯಾಪೀಠ ನಗರದಲ್ಲಿ ಮಕರ ಸಂಕ್ರಾಂತಿ ಉತ್ಸವದ ಪ್ರಯುಕ್ತ ಶ್ರೀನಿವಾಸನಗರ ಮತ್ತು ಬ್ಯಾಂಕ್ ಕಾಲೋನಿಯ ಪ್ರಮುಖ ಬೀದಿಗಳಲ್ಲಿ ಸ್ವಯಂಸೇವಕರು ಪಥಸಂಚಲನ ನಡೆಸಿದರು.

ಉತ್ಸವಕ್ಕೆ ಅಧ್ಯಕ್ಷರಾಗಿ ಶ್ರೀಯುತ ಮರಿಯಪ್ಪ, ವಿದ್ಯಾರಣ್ಯ ಯುವಕರ ಸಂಘದ ಅಧ್ಯಕ್ಷರು ಇದ್ದರು. ಮುಖ್ಯ ವಕ್ತಾರರಾಗಿ ರಾ.ಸ್ವ.ಸಂ ಕರ್ನಾಟಕ ದಕ್ಷಿಣ ಪ್ರಾಂತ ಸಹ ಬೌಧಿಕ್ ಪ್ರಮುಖರಾದ ಶ್ರೀಯುತ ಕೃಷ್ಣ ಪ್ರಸಾದ್ ಇದ್ದರು.

“ಕೆಲವು ಹಬ್ಬಗಳು ಮನೆಯೊಳಗೆ ಆಚರಿಸಿದರೆ, ಇನ್ನು ಕೆಲವಕ್ಕೆ ಸಾರ್ವಜನಿಕ ಮುಖ. ಕೆಲವು ಸಂಸ್ಥೆಗಳಲ್ಲಿ, ಸಂಘಟನೆಗಳಲ್ಲಿ ಆಚರಣೆ ಮಾಡುವುದು ಉಂಟು. ಅವುಗಳಲ್ಲಿ ಸ್ವರೂಪವು ಬೇರೆ ಬೇರೆಯಾದರೆ, ಹಿಂದಿರುವ ಉದ್ದೇಶವು ಒಂದೇ.

ಅಕ್ಕಿಯನ್ನು ಬೆಳೆಯಲು ಅಕ್ಕಿ ಬಿತ್ತಿದರೆ  ಸಾಧ್ಯವಿಲ್ಲ, ಬತ್ತವನ್ನು ಬಿತ್ತಬೇಕು. ಆದರೆ ಆ ಬತ್ತದ ಹೊಟ್ಟಿಗೆ ಇರುವ ಬೆಲೆ ಕಮ್ಮಿ . ಕಟ್ಟಿಗೆ ಒಲೆಯಲ್ಲಿನ ಕಟ್ಟಿಗೆ ಸ್ವಲ್ಪ ಹೊತ್ತು ಉರಿದಮೇಲೆ ಅದು ಶಾಂತವಾಗಲು ಪ್ರಾರಂಭವಾಗುತ್ತೆ, ಆಗ ಆ ಕಟ್ಟಿಗೆಯನ್ನು ಎತ್ತಿ ಒಳಕ್ಕೆ ತೂರಿದರೆ, ಮತ್ತೆ ಉರಿಯಲು ಪ್ರಾರಂಭವಾಗುತ್ತೆ. ಅದೇರೀತಿ ಉತ್ಸವಗಳು ನಮ್ಮ ಸಂಘಟನೆಯ ಕಾರ್ಯ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ಹೊಂದಿವೆ.

ನಮ್ಮ ಪರಿವಾರದವರಲ್ಲಿ ಯಾರಿಗಾದರೂ ಸಮಸ್ಯೆ ಬಂದರೆ, ನಾವುಗಳು ಹೇಗೆ ಒಟ್ಟಾಗಿ ನಿಂತು ಆ ಸಮಸ್ಯೆಯ ಪರಿಹಾರ ಹುಡುಕುತ್ತೇವೆಯೋ, ಅದೇರೀತಿ ಇಡೀ ಹಿಂದು ಸಮಾಜ ಒಂದೇ ಪರಿವಾರ. ಅದರ ಸಮಸ್ಯೆಗಳನ್ನು ಎಲ್ಲರೂ ಸೇರಿ ಒಟ್ಟಾಗಿ ನಿಂತು ಪರಿಹರಿಸಬೇಕಾಗಿದೆ.” ಎಂದು ಶ್ರೀ ಕೃಷ್ಣ ಪ್ರಸಾದ್ ತಮ್ಮ ಬೌದ್ಧಿಕ ನಲ್ಲಿ ಮಾತನಾಡಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.