ಧಾರವಾಡ: ವಿಜಯದಶಮಿ ಉತ್ಸವ ನಿಮಿತ್ಯರಾಷ್ಟ್ರೀಯ ಸ್ವಯಂಸೇವಕ ಸಂಘ ಧಾರವಾಡ ನಗರದ ಗಣವೇಷಧಾರಿಗಳ ಆಕರ್ಷಕ ಪಥಸಂಚಲನ ಭಾನುವಾರ ಅತ್ಯಂತ ವಿಜೃಂಬಣೆಯಿಂದ ಜರುಗಿತು.

ತೆರೆದ ವಾಹನದಲ್ಲಿ ರಾಷ್ಟ್ರೀ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಡಾ. ಹೆಡಗೆವಾರ, ದ್ವಿತೀಯ ಸರಸಂಘಚಾಲಕ ಗುರೂಜಿ ಭಾವಚಿತ್ರ, ಭಗವಾ ಧ್ವಜ ಭವ್ಯ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಇದೇ ಮೊದಲ ಬಾರಿಗೆ ಗಣವೇಷಧಾರಿಗಳ ಪಥಸಂಚಲನ ಎರಡು ಮಾರ್ಗದಲ್ಲಿ ಜರುಗಿದ್ದು ವಿಶೇಷ. ಮೆರವಣಿಗೆ ಸಂಚರಿಸುವ ದಾರಿಯುದ್ದಕ್ಕೂ ಸಾರ್ವಜನಿಕರ ಹಾಗೂ ಯುವಕರಿಂದ ಜಯಘೋಷ ಮೊಳಗಿದವು.

ಸಂಚಲನದ ಮಾರ್ಗದಲ್ಲಿ ರಂಗೋಲಿ ಹಾಗೂ ಪುಷ್ಪಮಳೆ, ತಳಿರು ತೋರಣಗಳ ಅಲಂಕಾರ ಗಣವೇಷಧಾರಿಗಳನ್ನು ಸ್ವಾಗತಿಸಿದವು. ಎರಡು ಗಣವೇಷಧಾರಿಗಳ ತಂಡ ಕೆಸಿಸಿ ಬ್ಯಾಂಕ್ ಸರ್ಕಲ್‌ನಲ್ಲಿ ಸಂಗಮಗೊಂಡವು. ಒಟ್ಟು‌1210 ಸ್ವಯಂಸೇವಕರು ಸಂಚಲನದಲ್ಲಿ ಪಾಲ್ಗೊಂಡಿದ್ದರು.‌

ಒಂದು ತಂಡ ಭಾರತ ಹೈಸ್ಕೂಲ್ ಮೈದಾನ ಮೂಲಕ ರಿಗಲ್ ವೃತ್ತ, ಸೂಪರ್ ಮಾರ್ಕೆಟ್, ಗಾಂಧಿಚೌಕ, ಹೆಬ್ಬಳ್ಳಿ ಅಗಸಿ, ಮಂಗಳವಾರಪೇಟೆ, ಕಾಮನಕಟ್ಟಿ, ಕೆಸಿಸಿ ಬ್ಯಾಂಕ್ ಮೂಲಕ ಭಾರತ್ ಹೈಸ್ಕೂಲ್‌ಗೆ ಮುಕ್ತಾಯಗೊಂಡಿತು.

ಮತ್ತೊಂದು ತಂಡ ಭಾರತ ಹೈಸ್ಕೂಲ್‌ನಿಂದ ರಿಗಲ್ ವೃತ್ತ, ಮಹಾರಾಣ ಪ್ರತಾಪ ವೃತ್ತ, ಆಝಾದ್ ಪಾರ್ಕ್, ಜ್ಯುಬ್ಲಿ ವೃತ್ತ, ಹಳೇ ಬಸ್ ನಿಲ್ದಾಣ, ಬೂಸಪ್ಪ ಚೌಕ್, ಕೆಸಿಸಿ ಬ್ಯಾಂಕ್ ಮೂಲಕ ಭಾರತ್ ಹೈಸ್ಕೂಲ್‌ಗೆ ಮುಕ್ತಾಯಗೊಂಡಿತು.

ನಂತರ ಸಂಪೂರ್ಣ ಭಾರತೀಯ ರಾಗ-ತಾಳ, ಮೇಳ ಮೇಳೈಸಿದ ಆಕರ್ಷಕ ಘೋಷ ಪ್ರದರ್ಶನ ಜರುಗಿತು. ಅಲ್ಲದೇ, ಸ್ವಯಂಸೇವಕರಿಂದ ಶಾರೀರಿಕ, ದಂಡ ವ್ಯಾಯಾಮ, ವಿವಿಧ ಆಟಗಳು ಪ್ರದರ್ಶನಗೊಂಡವು.

Leave a Reply

Your email address will not be published.

This site uses Akismet to reduce spam. Learn how your comment data is processed.