ಸಿಬಿಐ ವಿಶೇಷ  ನ್ಯಾಯಾಲಯ ಚಿದಂಬರಂ ಅವರನ್ನು ಬಿಟ್ಟದ್ದು ಸರಿಯೇ?

ಸುದ್ದಿ:

2G ತರಂಗ ಹಂಚಿಕೆಯಲ್ಲಿ ನಡೆದಿರುವ ಹಗರಣದ ವಿಚಾರಣೆಗಾಗಿ ಯುಪಿಎ ಸರಕಾರದಲ್ಲಿ ಗೃಹ ಮಂತ್ರಿಯಾಗಿರುವ ಪಿ. ಚಿದಂಬರಂ ಅವರನ್ನು ಕರೆಸಬೇಕು ಎಂದು ಜನತಾ ಪಕ್ಷದ ಅಧ್ಯಕ್ಷ ಡಾ|| ಸುಬ್ರಮಣ್ಯಂ ಸ್ವಾಮಿಯವರು ಸರ್ವೋಚ್ಚ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಇದೇ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಇಂ?ಂ ನ್ಯಾಯಾಲಯದ ತೀರ್ಪೊಂದು ಬಾಕಿಯಿರುವುದರಿಂದ, ಚಿದಂಬರಂಗೆ ಸಂಬಂಧಿಸಿದಂತೆಯೂ ಅದೇ ನ್ಯಾಯಾಲಯ ತೀರ್ಪು ನೀಡಲಿ ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿತ್ತು. ಇದಕ್ಕೆ ೨ ದಿನ ಮೊದಲು, ಅಂದರೆ ೨ನೇ ಫ಼ೆಬ್ರವರಿಯಂದು ಸರ್ವೋಚ್ಚ ನ್ಯಾಯಾಲಯ ೧೨೨ ೨ಉ ಪರವಾನಗಿಗಳನ್ನು ರದ್ದು ಮಾಡುವಂತೆ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ವಿಇಂ?ಂ ನ್ಯಾಯಾಲಯದ ತೀರ್ಪಿಗೆ ಇನ್ನಿಲ್ಲದ ಮಹತ್ವ ಬಂದಿತ್ತು. ಆದರೆ, ಫ಼ೆಬ್ರುವರಿ ೪ರಂದು ಬಂದ ಈ ತೀರ್ಪು ನ್ಯಾಯಕ್ಕಾಗಿ ಕಾದಿದ್ದ ಎಲ್ಲರನ್ನೂ ನಿರಾಶೆಗೊಳಿಸಿತು. “ಗೃಹ ಸಚಿವ ಚಿದಂಬರಂ ವಿರುದ್ಧದ ದೂರು ಗಂಭೀರವಾಗಿಲ್ಲ. ಹೀಗಾಗಿ ಅವರನ್ನು ವಿಚಾರಣೆಗೊಳಪಡಿಸುವಂತಿಲ್ಲ ಮತ್ತು ಅವರನ್ನು ಸಹಆರೋಪಿ ಮಾಡಲಾಗದು” ಎಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಒ. ಪಿ. ಸೈನಿ ತೀರ್ಪು ನೀಡಿದರು. ಈ ತೀರ್ಪಿನ ಅರ್ಥ ಚಿದಂಬರಂ ನಿರ್ದೋಷಿಯೇ? ಎಂಬುದು ಎಲ್ಲರ ಪ್ರಶ್ನೆಯಾಗಿದೆ.

ಹಿನ್ನೆಲೆ:

2G ತರಂಗಗುಚ್ಛ ಹಂಚಿಕೆಯಲ್ಲಿ ಆಗಿರುವ ಹಗರಣ ಭಾರತ ಇಲ್ಲಿಯವರೆಗೆ ಕಂಡಿರುವ ಹಗರಣಗಳಲ್ಲೇ ಅತ್ಯಂತ ದೊಡ್ಡ ಮೊತ್ತದ ಹಗರಣ. ಈ ಹಗರಣದ ಸಂಬಂಧ ಯುಪಿಎ ಸರಕಾರದ ಓರ್ವ ಮಂತ್ರಿ ಜೈಲು ಸೇರಿದ್ದಾರೆ. 2G ತರಂಗ ಹಂಚಿಕೆಯಲ್ಲಿ ಹಗರಣ ನಡೆದಿದೆ ಎಂದು ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ದೂರು ನೀಡಿ ಮತ್ತು ಮುಂದೆ ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದವರು ಡಾ|| ಸುಬ್ರಮಣ್ಯಂ ಸ್ವಾಮಿಯವರು. ಈ ಹಗರಣ ನಡೆದ ಸಮಯದಲ್ಲಿ ವಿತ್ತ ಸಚಿವರಾಗಿದ್ದ ಪಿ. ಚಿದಂಬರಂ ಅವರೂ 2G ತರಂಗ ಹಂಚಿಕೆಯ ಶುಲ್ಕ ನಿರ್ಧಾರದಲ್ಲಿ ಭಾಗಿಯಾಗಿದ್ದರು. ಹೀಗಾಗಿ ಅವರನ್ನೂ ವಿಚಾರಣೆಗೆ ಕರೆಸಬೇಕು ಎಂದು ಡಾ|| ಸುಬ್ರಮಣ್ಯಂ ಸ್ವಾಮಿಯವರು ನ್ಯಾಯಾಲಯದಲ್ಲಿ ಕೋರಿದ್ದಾರೆ.

ಡಾ|| ಸ್ವಾಮಿಯವರು ಹಾಕಿದ್ದ ರಿಟ್ ಅರ್ಜಿಯಲ್ಲಿ, ಚಿದಂಬರಂ ಅವರನ್ನು ವಿಚಾರಣೆಗೆ ಕರೆಸಬೇಕು ಎಂzಂ?ಇಔಂ ಕೇಳಿಕೊಳ್ಳಲಾಗಿತ್ತು. ಅವರನ್ನೇನ್ನೂ ತಪ್ಪಿತಸ್ತರ ಪಟ್ಟಿಯಲ್ಲಿ ಸೇರಿಸಬೇಕೆಂಬ ಕೋರಿಕೆ ಇರಲಿಲ್ಲ. ಈ ಸಂಬಂಧವಾಗಿ ಫ಼ೆಬ್ರವರಿ ೪ರಂದು ಸಿಬಿಐ ವಿಇಂ?ಂ ನ್ಯಾಯಾಲಯದ ನ್ಯಾಯಾಧೀಶ ಓ. ಪಿ. ಸೈನಿ ತೀರ್ಪಿತ್ತಿದ್ದಾರೆ. ಚಿದಂಬರಂ ಅವರು ನಿರ್ದೋಷಿ ಎಂಬ ಅರ್ಥ ಬರುವಂತೆ ನ್ಯಾಯಾಲಯ ತೀರ್ಪು ನೀಡುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಸ್ವತಃ ಯುಪಿಎ ಸರಕಾರ ಹಾಗೂ ಚಿದಂಬರಂ ಅವರೂ ಇದನ್ನು ನಿರೀಕ್ಷಿಸಿರಲಿಲ್ಲ. ಈಗ ಕಾನೂನಿನ ಬೀಸುವ ದೊಣ್ಣೆ ತಪ್ಪಿರುವುದರಿಂದ ಯುಪಿಎ ಸರಕಾರಕ್ಕೆ ಸ್ವಲ್ಪ ನಿರಾಳವಾದಂತಾಗಿದೆ. ೨೦೦೮ರಲ್ಲಿ ಚಿದಂಬರಂ ಅವರು ವಿತ್ತ ಮಂತ್ರಿಯಾಗಿದ್ದರು. 2G ತರಂಗ ಹಂಚಿಕೆಯ ಶುಲ್ಕವನ್ನು ಅಂದಿನ ದೂರಸಂಪರ್ಕ ಸಚಿವ ಎ. ರಾಜಾ ಅವರು ಅಂದಿನ ವಿತ್ತ ಸಚಿವ ಪಿ. ಚಿದಂಬರಂ ಅವರನ್ನು ಸಮಾಲೋಚಿಸಿಯೇ ನಿರ್ಧಾರ ಕೈಗೊಂಡಿದ್ದರು. ಚಿದಂಬರಂ ಅವರು ಜನವರಿ ೧೫, ೨೦೦೮ರಂದು ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ, “2G ತರಂಗ ಹಂಚಿಕೆಯ ಶುಲ್ಕವನ್ನು, ದೂರಸಂಪರ್ಕ ಇಲಾಖೆ ಮತ್ತು ವಿತ್ತ ಸಚಿವಾಲಯಗಳು ಚರ್ಚಿಸಿ ನಿರ್ಧರಿಸಲಾಗುವುದು” ಎಂದು ಬರೆದಿದ್ದಾರೆ.

ಏಪ್ರಿಲ್ ೨೧, ೨೦೦೮ರಂದು ಚಿದಂಬರಂ ಅವರು ಎ. ರಾಜಾ ಅವರಿಗೆ ಬರೆದಿರುವ ಪತ್ರದಲ್ಲಿ, “(2G ತರಂಗ ಶುಲ್ಕ) ವಿ?ಂಂiಂಂವನ್ನು ಪರಾಮರ್ಶಿಸಿದ ನಂತರ ನಾವು ಭೇಟಿಯಾಗಿ ಒಂದು ನಿರ್ಧಾರ ಕೈಗೊಳ್ಳೋಣ. ನಂತರ ಈ ನಿರ್ಣಯವನ್ನು ಮಾನ್ಯ ಪ್ರಧಾನ ಮಂತ್ರಿಗಳಿಗೆ ತಿಳಿಸೋಣ” ಎಂದು ತಿಳಿಸಿದ್ದಾರೆ. ಪಿ. ಚಿದಂಬರಂ ಮತ್ತು ಎ. ರಾಜಾ ಅವರು 2G ತರಂಗ ಹಂಚಿಕೆಯ ಶುಲ್ಕದ ಬೆಲೆ ನಿರ್ಧರಿಸಲು ಮೂರು ಬಾರಿ ಭೇಟಿಯಾಗಿದ್ದರು. ಈ ಭೇಟಿಗೆ ಸಂಬಂಧಿಸಿದಂತೆ ದಾಖಲಿಸಿರುವ ಅಧಿಕೃತ ವರದಿಯಲ್ಲಿ, “ತರಂಗ ಹಂಚಿಕೆಯ ಶುಲ್ಕವನ್ನು ಂರಿ?ಂIರಿಸುವ ಯೋಚನೆ ಇಲ್ಲವೆಂದು ವಿತ್ತ ಸಚಿವರು ತಿಳಿಸಿದರು” ಎಂದು ಬರೆಯಲಾಗಿದೆ.

ವಿಇeಂ?ಂuಇ:

೧. ಸರಕಾರದ ವಾದವೆಂದರೆ, ತರಂಗ ಹಂಚಿಕೆಯ ಶುಲ್ಕದ ನಿರ್ಧಾರಕ್ಕೂ ಚಿದಂಬರಂ ಅವರಿಗೂ ಯಾವುದೇ ಸಂಬಂಧವಿಲ್ಲ. ಆದರೆ, ಮೇಲೆ ತಿಳಿಸಿದ ಪುರಾವೆಗಳಿಂದ ಚಿದಂಬರಂ ಅವರು ಶುಲ್ಕ ನಿರ್ಧಾರದ ಪ್ರತಿಯೊಂದು ಹಂತದಲ್ಲಿಯೂ ಭಾಗಿಯಾಗಿದ್ದಾರೆ ಎಂದು ತಿಳಿಯುತ್ತದೆ. ಅವರನ್ನು ವಿಚಾರಣೆಗೆ ಕರೆಯುವುದು, ಸಿಬಿಐ ಮಾಡಬಹುದಾದ ಕನಿ?ಂ~ ಕಾರ್ಯ. ಈ ಪುರಾವೆಗಳನ್ನು ಸಿಬಿಐ ಪರಿಗಣಿಸದಿರುವುದು ಆಶ್ಚರ್ಯ ಉಂಟುಮಾಡುತ್ತದೆ.

೨. ೨ಉ ತರಂಗ ಹಂಚಿಕೆಯ ಶುಲ್ಕವನ್ನು ಚಿದಂಬರಂ ಅವರು ೨೦೦೧ರ ಬೆಲೆಗೇ ನಿರ್ಧರಿಸಿದ್ದರಲ್ಲಿ ದುರುದ್ದೇಶವೇನೂ ಕಾಣುತ್ತಿಲ್ಲ, ಎಂಬುದು ಸಿಬಿಐನ ವಾದ. ಸರಕಾರ ತಪ್ಪು ಮಾಡಿಲ್ಲದಿದ್ದರೆ, ಯುಪಿಎ ಸರಕಾರದ ಮಂತ್ರಿಮಂಡಲದಲ್ಲಿ ದೂರಸಂಪರ್ಕ ಮಂತ್ರಿಯಾಗಿದ್ದ ಎ. ರಾಜಾ ಅವರನ್ನು ಸೆರೆಯಲ್ಲಿಟ್ಟಿರುವುದು ಏಕೆ? ಫ಼ೆಬ್ರವರಿ ೨ರಂದು ಸರ್ವೋಚ್ಚ ನ್ಯಾಯಾಲಯ ೧೨೨ ೨ಉ ಪರವಾನಗಿ ರದ್ದು ಮಾಡಿದ್ದು ಸಹ ಈ ನಿರ್ಧಾರಕ್ಕೆ ಸಂಬಂಧಿಸಿದಂತೆಯೇ. ಆ ನಿರ್ಧಾರದಲ್ಲಿ ತಪ್ಪಿಲ್ಲದಿದ್ದರೆ, ದುರುದ್ದೇಶವಿಲ್ಲದಿದ್ದರೆ ಪರವಾನಗಿಗಳನ್ನು ರದ್ದುಗೊಳಿಸುವ ಆವಶ್ಯಕತೆಯೇನಿತ್ತು?

೩. ಚಿದಂಬರಂ ಅವರು ವೈಯಕ್ತಿಕ ಲಾಭಕ್ಕಾಗಿ ಈ ನಿರ್ಧಾರ ಕೈಗೊಂಡಿಲ್ಲದೇ ಇರಬಹುದು (ಇದರ ಸತ್ಯಾಸತ್ಯತೆ ವಿಚಾರಣೆಯ ನಂತರವೇ ಹೊರಬರುವುದು). ಆದರೆ, ೨೦೦೧ರ ಶುಲ್ಕ ನೀಡಿ ಪರವಾನಗಿ ಖರೀದಿಸಿದ ಸಂಸ್ಥೆಗಳು ಅತಿಸ್ವಲ್ಪ ಸಮಯದಲ್ಲಿಯೇ ತಮ್ಮ ಪರವಾನಗಿಗಳನ್ನು ೨೦೦೮ರ ಬೆಲೆಗೆ ಮಾರಿಕೊಂಡು ದೊಡ್ಡ ಪ್ರಮಾಣದ ಲಾಭ ಮಾಡಿಕೊಂಡದ್ದು ಎಲ್ಲರಿಗೂ ತಿಳಿದ ವಿ?ಂಂiಂಂವೇ. ಹೀಗಾಗಿ ತಮ್ಮ ಈ ನಿರ್ಧಾರದಿಂದ ಸರಕಾರಕ್ಕೆ ದೊಡ್ಡ ಂ?ಂಔವಾಗಿದೆ ಎನ್ನುವುದು ಚಿದಂಬರಂ ಅವರಿಗೆ ತಿಳಿದಿತ್ತು. ಹೀಗಿದ್ದಾಗ್ಯೂ ಅವರು ಸುಮ್ಮನಿದ್ದುದು ತಪ್ಪಲ್ಲವೇ? ದೇಶದ ವಿತ್ತ ಸಚಿವರಾದ ಇವರು ದೇಶದ ಆಸ್ತಿಯನ್ನು ಕಾಪಾಡುವ ಜವಾಬ್ದಾರಿ ಹೊತ್ತಿರುವವರು. ಯಾರಾದರೂ ದೇಶವನ್ನು ಲೂಟಿ ಮಾಡುತ್ತಿದ್ದಾರೆ ಎಂದು ತಿಳಿದಾಗ, ಅದನ್ನು ಕೂಡಲೇ ನಿಲ್ಲಿಸುವುದು ಅವರ ಕರ್ತವ್ಯವೇ.

೪. ಬ್ಯಾಂಕುಗಳಲ್ಲಿ ಅತ್ಯಂತ ಸಣ್ಣ ಆರ್ಥಿಕ ಅವ್ಯವಹಾರ ನಡೆದರೂ (ಅದು ಕೇವಲ ಉದಾಸೀನತೆಯಿಂದ ಆಗಿದ್ದರೂ ಸಹ), ಅದರಲ್ಲಿ ಭಾಗಿಯಾಗಿರಬಹುದೆಂದು ಅನುಮಾನವಿರುವ ಯಾರೊಬ್ಬರ ವಿ?ಂಂiಂಂzಂಯೂ ಸ್ವಲ್ಪ ಮೃದುತ್ವವನ್ನೂ ಸಿಬಿಐ ತೋರುವುದಿಲ್ಲ. ಹೀಗಿರುವಾಗ, ಇ?ಇಂಔಂzಂಂ ದೊಡ್ಡ ಆರ್ಥಿಕ ಅವ್ಯವಹಾರದ ಆರೋಪವನ್ನು ವಿಚಾರಿಸುವಾಗ ವಿತ್ತ ಸಚಿವರನ್ನು ವಿಚಾರಿಸಲು ಸಿಬಿಐ ಹಿಂದೆಮುಂದೆ ನೋಡುತ್ತಿರುವುದು ಅನೇಕ ಅನುಮಾನಗಳಿಗೆ ಎಡೆ ಮಾಡುತ್ತದೆ.

೫. ಪ್ರಕರಣದ ಸಂಬಂಧ ಸಿಬಿಐ ವಿಇಂ?ಂ ನ್ಯಾಯಾಲಯದ ತೀರ್ಪು ಅಂತಿಮವೇನಲ್ಲ. ಕಳೆದ ಮೂರು ಂ?ಂಜUಂಳಿಂದ ಪಟ್ಟುಬಿಡದ ತ್ರಿವಿಕ್ರಮನಂತೆ, ೨ಉ ತರಂಗಗುಚ್ಛ ಹಂಚಿಕೆಯಲ್ಲಿನ ಅಕ್ರಮಗಳ ವಿ?ಂಂiಂಂವನ್ನು ಹಿಡಿದು, ಯುಪಿಎ ಸರಕಾರದ ವಿರುದ್ಧ ಸಮರ ಸಾರಿರುವ ಸುಬ್ರಮಣ್ಯಂ ಸ್ವಾಮಿಯವರು, ವಿಇಂ?ಂ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಹೀಗಾಗಿ ಕಾನೂನು ಸಮರ ಮುಂದುವರೆಯುತ್ತದೆ. ಸರಕಾರಕ್ಕೆ ಸದ್ಯಕ್ಕೆ ಮುಜುಗರ ತಪ್ಪಿದೆ ಅ?ಇಔಂ. ಸರ್ವೋಚ್ಚ ನ್ಯಾಯಾಲಯವು ಸಿಬಿಐ ವಿಇಂ?ಂ ನ್ಯಾಯಾಲಯದ ತೀರ್ಪನ್ನು ಸರಿಪಡಿಸದಿದ್ದರೆ, 2G ಹಗರಣದ ಸತ್ಯವು ಹೊರಬರದೆ ಮುಚ್ಚಿ ಹೋಗುವುದರಲ್ಲಿ ಸಂಶಯವಿಲ್ಲ.

೬. ಕೆಲವು ದಿನಗಳ ಹಿಂದೆ ನಡೆದ ಒಂದು ಘಟನೆಯ ಪ್ರಸ್ತಾಪ  ಪ್ರಸ್ತುತವೆನಿಸುತ್ತದೆ. ಫ಼ೆಬ್ರವರಿ 3, 2012ರಂದು ಇಂಗ್ಲೆಂಡಿನ ಮಂತ್ರಿ ಕ್ರಿಸ್ ಹುಹ್ನೆ ಅವರು ತಮ್ಮ ಪದವಿಗೆ ರಾಜೀನಾಮೆ ನೀಡಿದರು. 2003ರಲ್ಲಿ ಅವರು ವೇಗಮಿತಿಗಿಂತ ಹೆಚ್ಚಿನ ವೇಗದಲ್ಲಿ ಕಾರು ಚಲಾಯಿಸಿದ್ದರು. ಅವರನ್ನು ಪೊಲೀಸರು ಹಿಡಿದಾಗ, ಕಾರನ್ನು ಚಲಾಯಿಸುತ್ತಿದ್ದುದು ತಮ್ಮ ಪತ್ನಿ ಎಂಬುದಾಗಿ ಅವರು ತಿಳಿಸಿದ್ದರು. ವಿಚಾರಣೆಯ ನಂತರ ಕ್ರಿಸ್ ಅವರೇ ಕಾರು ಚಲಾಯಿಸುತ್ತಿದ್ದುದು ಮತ್ತು “ನ್ಯಾಯದ ದಾರಿ ತಪ್ಪಿಸುವ ಪ್ರಯತ್ನ ನಡೆಸಿದರು” ಎಂದು ನ್ಯಾಯಾಲಯ ತೀರ್ಪಿಟ್ಟಿತು. ತಮ್ಮ ತಪ್ಪನ್ನು ಒಪ್ಪಿಕೊಂಡು, ಅವರು ರಾಜೀನಾಮೆ ನೀಡಿದರು. ಕೇವಲ ವೇಗಮಿತಿ ಮೀರಿ ಕಾರು ಚಲಾಯಿಸಿದ್ದಕ್ಕೂ ಜವಾಬ್ದಾರಿ ಹೊತ್ತವರು ಪದತ್ಯಾಗ ಮಾಡಿರುವುದು ನಡೆದಿರುವಾಗಲೇ, ಇಲ್ಲಿ ಬೃಹತ್ ಆರ್ಥಿಕ ಹಗರಣ ನಡೆದಾಗ ಮಂತ್ರಿಯಾಗಿದ್ದು ಅದರ ಜವಾಬ್ದಾರಿಯನ್ನು ಒಪ್ಪದೆ ನಮ್ಮ ಮಂತ್ರಿಗಳು ತಮ್ಮ ಸ್ಥಾನದಲ್ಲಿ ಮುಂದುವರೆದಿರುವುದು ವಿಷಾದಕರ .

ಮುಸ್ಲಿಮರ ಮತಕ್ಕಾಗಿ ಚುನಾವಣಾ ಸಂಹಿತೆಯನ್ನೇ ಧಿಕ್ಕರಿಸಿರುವ ಕಾಂಗ್ರೆಸ್ ನಾಯಕರು

ಸುದ್ದಿ:

ಕೇಂದ್ರ ಕಾನೂನು ಸಚಿವ ಶ್ರೀ ಸಲ್ಮಾನ್ ಖುರ್ಷಿದ್ ಅವರು ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಪ್ರಚಾರ ಸಭೆಯೊಂದರಲ್ಲಿ ಮುಸ್ಲಿಮರಿಗೆ ಶೇ ೯% gಂ?ಂಂಔ ಮೀಸಲಾತಿ ನೀಡುವ ಭರವಸೆಯನ್ನು ನೀಡಿದರು. ಚುನಾವಣಾ ಆಯೋಗವು ಈ ಹೇಳಿಕೆಯನ್ನು ನೀತಿ ಸಂಹಿತೆಯ ಉಲ್ಲಂಘನೆಯೆಂದು ಪರಿಗಣಿಸಿ ತನ್ನ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿತು. ಇದಕ್ಕೆ ಪ್ರತಿಯಾಗಿ ಸಲ್ಮಾನ್ ಖುರ್ಷಿದ್ ಅವರು ತಮ್ಮ ಭರವಸೆಯನ್ನು ಪುನರುಚ್ಚರಿಸಿದರಲ್ಲದೇ, ತಾವು ಮುಸ್ಲಿಂರ ಹಿತರಕ್ಷಣೆಯನ್ನು ಮಾಡಲು ನೇಣಿಗೇರಲೂ ಸಿದ್ಧ ಎಂದು ಹೇಳಿದರು. ಚುನಾವಣಾ ಆಯೋಗವು ಈ ಹೇಳಿಕೆಗಳನ್ನು gಂ?ಂಔಛಿ\ತಿಯವರ ಗಮನಕ್ಕೆ ತಂದು ಸಚಿವರ ವಿರುದ್ಧದ ಕ್ರಮಕ್ಕೆ ಚಾಲನೆ ನೀಡಿದರು. ಇದರ ಫಲವಾಗಿ ಪ್ರಧಾನ ಮಂತ್ರಿಗಳು ಸಲ್ಮಾನ್ ಖುರ್ಷಿದ್ ಅವರಿಗೆ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಲು ಸೂಚಿಸಿದರು. ನಂತರ ಸಲ್ಮಾನ್ ಖುರ್ಷಿದ್ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಕ್ಷಮಾಪಣೆ ಕೋರಿದರು.

ಇದಾದ ನಂತರ ಕೆಲದಿನಗಳಲ್ಲೇ, ಕೇಂದ್ರ ಉಕ್ಕು ಖಾತೆ ಸಚಿವ ಬೇಣೀ ಪ್ರಸಾದ್ ವರ್ಮ ಅವರು ಉತ್ತರ ಪ್ರದೇಶದ ಮತ್ತೊಂದು ಚುನಾವಣಾ ಪ್ರಚಾರ ಸಭೆಯಲ್ಲಿ ಮುಸ್ಲಿಂ ಮೀಸಲಾತಿಯ ಭರವಸೆ ನೀಡಿದರು. ಪುನಃ ಚುನಾವಣಾ ಅಯೋಗ ಇದನ್ನು ನೀತಿ ಸಂಹಿತೆಯ ಉಲ್ಲಂಘನೆಯ ಮತ್ತೊಂದು ಘಟನೆಯೆಂದು ಪರಿಗಣಿಸಿದೆ.

೧. ಭಾರತದ ಮುಸ್ಲಿಂ ಜನಾಂಗ ಮುಖ್ಯವಾಹಿನಿಯಿಂದ ಪ್ರತ್ಯೇಕವಾಗಿಯೇ ಉಳಿದುಕೊಂಡಿದೆ. ಮುಸ್ಲಿಮರನ್ನು ರಾಷ್ಟ್ರೀಯ ಮುಖ್ಯವಾಹಿನಿಗೆ ಸೇರಿಸುವ ಪ್ರಕ್ರಿಯೆ ಅಗತ್ಯವಾಗಿ ಆಗಬೇಕಿದೆ. ಆದರೆ, ಮುಸ್ಲಿಂ ಮೀಸಲಾತಿ ಈ ಉದ್ದೇಶವನ್ನು ಈಡೇರಿಸಲಾರದು. ಇದು ಸ್ವಾತಂತ್ರ್ಯಪೂರ್ವದ ಘಟನಾವಳಿಗಳಿಂದ ಸಾಬೀತಾಗಿದೆ. ಆದರೆ ಕಾಂಗ್ರೆಸ್ ಪಕ್ಷವು ಇತಿಹಾಸದಿಂದ ಪಾಠ ಕಲಿತಿಲ್ಲ. ಅದು ಮುಸ್ಲಿಮರ ತುಷ್ಟೀಕರಣದ ನೀತಿಯನ್ನು ಇಂದಿಗೂ ಆಚರಿಸಿಕೊಂಡು ಬರುತ್ತಲೇ ಇದೆ. ಹಿರಿಯ ಕಾಂಗ್ರೆಸ್ ನಾಯಕರ ಮೀಸಲಾತಿ ಪರ ಹೇಳಿಕೆಗಳು ಮುಸ್ಲಿಮರ ತುಷ್ಟೀಕರಣ ನೀತಿಯ ಒಂದು ನೂತನ ಉದಾಂgಂuಇಂiಂಂ?ಇಔಂ ಆಗಿದೆ.

೨. ಸ್ವಾತಂತ್ರ್ಯ ಬಂದಂದಿನಿಂದಲೂ ಕಾಂಗ್ರೆಸ್ ಪಕ್ಷವೇ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದೆ. ಆದರೆ ಮುಸ್ಲಿಮರ ನಿಜವಾದ ಸಮಸ್ಯೆಗಳನ್ನು ಅದು ಬಗೆಹರಿಸಿಲ್ಲ; ಅವರನ್ನು ಮತ ಬ್ಯಾಂಕ್‌ಗಳಂತೆ ಮಾತ್ರ ಪರಿಗಣಿಸಿದೆ ಎಂಬ ಆರೋಪ ಅದರ ಮೇಲಿದೆ. ಚುನಾವಣೆಯ ಸಂದರ್ಭದಲ್ಲಿ ಮಾತ್ರ ಮುಸ್ಲಿಮರ ಮತಗಳನ್ನುಸೆಳೆಯುವ Wಇಂಂ?ಂuಇUಂಳನ್ನು ಕಾಂಗ್ರೆಸ್ ನಾಯಕರು ಮಾಡುತ್ತಾರೆ. ಮುಸ್ಲಿಂ ಮೀಸಲಾತಿಯ ಹೇಳಿಕೆಗಳನ್ನು ಉತ್ತರ ಪ್ರದೇಶದ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂzಂ?ಇಔಂ ಮಾಡಲಾಗಿದೆ.

೩. ಚುನಾವಣೆಯನ್ನು ಗೆಲ್ಲಲು ಕಾನೂನುಬದ್ಧವಾದ ತಂತ್ರಗಳಂs?ಇಔಂ ಬಳಸಬೇಕಾದುದು ನ್ಯಾಯ. ಆದರೆ ಸಲ್ಮಾನ್ ಖುರ್ಶಿದ್ ಅಂತಹ ಹಿರಿಯ ನಾಯಕರು ಅನುಸರಿಸುತ್ತಿರುವ ಮಾರ್ಗ ನಿಜಕ್ಕೂ ವಿಷಾದಕರ . ಅಧಿಕಾರದಲ್ಲಿರುವ ಸಲ್ಮಾನ್ ಖುರ್ಷಿದ್ ಮತ್ತುಬೇಣಿ ಪ್ರಸಾದ್ ವರ್ಮಾ ಅವರುಗಳು ತಮ್ಮ ಅಧಿಕಾರದ ಪ್ರಭಾವವನ್ನು ಮತಗಳಿಕೆಗೆ ಉಪಯೋಗಿಸಬಾರದು. ಚುನಾವಣೆ Wಇಂಂ?ಂuಇ ಆದ ನಂತರ ಭರವಸೆಗಳನ್ನುನೀಡುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆ. ಅದರೆ ಸಚಿವದ್ವಯರು ಒಬ್ಬರಾದ ಮೇಲೆ ಒಬ್ಬರು ಚುನಾವಣಾ ನೀತಿ ಸಂಹಿತೆಯನ್ನು ವಿಂಂರಿzಂಂzಂ?ಇಔಂ ಅಲ್ಲ ಅದನ್ನು ಸಮರ್ಥಿಸಿಕೊಂಡು ಚುನಾವಣಾ ಆಯೋಗವನ್ನೇ ಧಿಕ್ಕರಿಸುವ ಮಟ್ಟಕ್ಕೆ ಹೋದರು. ಅನಿವಾರ್ಯ ಪರಿಸ್ಥಿತಿ ಬಂದಾಗ ಮಾತ್ರ ತಮ್ಮ ಮಾತನ್ನು ಹಿಂತೆಗೆದುಕೊಂಡರು.

೪. ಮತೀಯ ಭಾವನೆಗಳನ್ನು ಪ್ರಚೋದಿಸಿ ಮತಯಾಚನೆ ಮಾಡುವುದು ಭಾರತದಲ್ಲಿ ಶಿಕ್ಷಾರ್ಹ ಅಪರಾಧ. ಆದರೆ, ಕಾಂಗ್ರೆಸ್ ನಾಯಕರಿಬ್ಬರೂ ಆ ಅಪರಾಧವನ್ನು ಉದ್ದೇಶಪೂರ್ವಕವಾಗಿಯೇ ಎಸಗಿದ್ದಾರೆ. ಅದರ ಮೂಲಕ ಒಂದು ಅಪಾಯಕಾರೀ ಪದ್ಧತಿಯನ್ನು ಪ್ರಾರಂಭಿಸಿದ್ದಾರೆ. ಕೋಮುವಾದೀ ರಾಜಕಾರಣದ ಕಾರಣಕ್ಕಾಗಿಯೇ ಭಾರತ 1947ರಲ್ಲಿ ವಿಭಜನೆಗೊಳಗಾಯಿತು. ಕಾಂಗ್ರೆಸ್ ಸಂಸ್ಥೆಯ ಪಾಲು ಅದರಲ್ಲಿ ಗಮನಾರ್ಹವಾಗಿಯೇ ಇತ್ತು. ಅದೇ ರೀತಿಯ ತಪ್ಪನ್ನೇ ಕಾಂಗ್ರೆಸ್ ಈಗಲೂ ಮುಂದುವರೆಸುತ್ತಿದೆ. ಇದೀಗ, ಬೇಜವಬ್ದಾರೀ ಕೋಮುವಾದಿ ಹೇಳಿಕೆಗಳನ್ನು ನೀಡಿದ ತನ್ನ ಪಕ್ಷದ ಹಿರಿಯ ನಾಯಕರ ಬೆಂಬಲಕ್ಕೆ ಪಕ್ಷ ನಿಂತಿದೆ.

೫. ಹಿಂದೆ ಮಿಜೋರಾಂ ಚುನಾವಣೆಯಲ್ಲಿ ರಾಜೀವ್ ಗಾಂಧಿ ಅವರು “ಕ್ರಿಸ್ತನ ರಾಜ್ಯ ಸ್ಥಾಪನೆಯ” ಭರವಸೆ ನೀಡಿದ್ದರು. ನಂತರ ತಮ್ಮ ಹೇಳಿಕೆಯನ್ನು ನಿರಾಕರಿಸಿದರೂ ಸಹ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅವರ ಹೇಳಿಕೆಯ ಪ್ರಭಾವದಿಂದ ಜಯಗಳಿಸಿತು. ಅದೇ ರೀತಿ ಮುಸ್ಲಿಂ ಜನಾಂಗದ ಮೇಲೆ ಪ್ರಭಾವ ಬೀರಿ ಚುನಾವಣೆಯಲ್ಲಿ ಗೆಲ್ಲುವ ತಂತ್ರ ಕಾಂಗ್ರೆಸ್ ಮಾಡಿದೆ.

೬. ಹಿಂದೆ ಕೇಂದ್ರ ಸರ್ಕಾರವು ನೇಮಿಸಿದ್ದ ಸಾಚಾರ್ ಸಮಿತಿಯು ಮುಸ್ಲಿಮರ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ದುಸ್ಥಿತಿಯ ಬಗ್ಗೆ ವಿವರವಾದ ವರದಿ ಸಲ್ಲಿಸಿದೆ ಮತ್ತು ಅವರನ್ನು ಮೇಲೆತ್ತಲು ತೆಗೆದುಕೊಳ್ಳಬೇಕಾದ ಕಾರ್ಯಕ್ರಮಗಳ ಕುರಿತಾಗಿಯೂ ಚರ್ಚಿಸಿದೆ. ಆ ವರದಿಯಲ್ಲಿ ಹಲವಾರು ಅಂಕಿ-ಅಂಶಗಳನ್ನು ನೀಡಲಾಗಿದೆ. ಈ ವರದಿಗಳ ಆಧಾರದ ಮೇಲೆ ಮೀಸಲಾತಿ ನೀಡಬೇಕೆಂಬ ವಾದ ಬಲವಾಗುತ್ತಿದೆ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಒಂದು ಅಂಶ ಮನದಟ್ಟಾಗುತ್ತದೆ – ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದ ತರಲಾಗುವ ಮೀಸಲಾತೀ ಇತ್ಯಾದೀ ಕಾರ್ಯಕ್ರಮಗಳಿಂದ ಮುಸ್ಲಿಮರ ಅಭಿವೃದ್ಧಿ ಅಸಾಧ್ಯ. ಏಕೆಂದರೆ, ಮುಸ್ಲಿಮರು ಸಂಕುಚಿತ ಮತೀಯ ಕಟ್ಟುಪಾಡುಗಳಿಗೆ ಒಳಗಾಗಿದ್ದಾರೆ.

ಅವರನ್ನು ಅವುಗಳಿಂದ ಬಿಡಿಸದೇ ನೀಡಲಾಗುವ ಯಾವುದೇ ಆರ್ಥಿಕ ಸವಲತ್ತುಗಳು ಅವರನ್ನು ಪ್ರತಿಗಾಮೀ ವಾತಾವರಣಕ್ಕೆ ತಳ್ಳುತ್ತದೆ. ಆದ್ದರಿಂದ, ಮುಸ್ಲಿಮರನ್ನು ಮೂಲಭೂತವಾದದಿಂದ ಪಾರುಮಾಡಲು ಬೇಕಾದ ನೀತಿಗಳನ್ನು ರೂಪಿಸುವ ನಿಟ್ಟಿನಲ್ಲಿ ಸಾಚಾರ್ ವರದಿಯನ್ನು ಉಪಯೋಗಿಸಿಕೊಳ್ಳಬೇಕು.

Leave a Reply

Your email address will not be published.

This site uses Akismet to reduce spam. Learn how your comment data is processed.