ಸಂಸ್ಕಾರ ಭಾರತಿಯ ಸ್ಥಾಪಕರು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ವರಿಷ್ಠ ಪ್ರಚಾರಕರು,ಪದ್ಮಶ್ರೀ ಬಾಬಾ ಯೋಗೇಂದ್ರ ಜೀಯವರ ನೆನಪಿನಲ್ಲಿ ಸತ್ಯಸಾಯಿ ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಶ್ರೀ ಮೋಹನ್ ಭಾಗವತ್ರವರು, ಕೇಂದ್ರೀಯ ರಕ್ಷಾ ಮಂತ್ರಿ ಶ್ರೀ ರಾಜನಾಥ್ ಸಿಂಗ್ ಮತ್ತು ರಾಜ್ಯಸಭಾ ಸದಸ್ಯರು ಮತ್ತು ಪ್ರಸಿದ್ಧ ನೃತ್ಯಕಲಾವಿದೆ ಶ್ರೀಮತಿ ಸೋನಲ್ ಮಾನ್ಸಿಂಗ್ ಅವರು ಉಪಸ್ಥಿತರಿದ್ದರು.
ಸಂಸ್ಕಾರ ಭಾರತಿ ಪರಿವಾರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಶೋಕಸಂದೇಶವನ್ನು ತಲುಪಿಸಿದ್ದಾರೆ.ಅವರು ಬಾಬಾ ಯೋಗೇಂದ್ರಜೀಯವರ ನಿಧನದಿಂದ ಕಲಾ ಜಗತ್ತಿಗೆ ಆವರಿಸಿರುವ ಅಪೂರ್ಣತೆಯನ್ನು ಕುರಿತು ಹಾಗು ಶೋಕ ತಪ್ತ ಕಾರ್ಯಕರ್ತರ ಜೊತೆಗೆ ತಮ್ಮ ಸಂವೇದನೆಯನ್ನು ವ್ಯಕ್ತಪಡಿಸಿದ್ದರು.
ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಡಾ.ಮೋಹನ್ ಭಾಗವತ್ರವರು ಬಾಬಾ ಯೋಗೇಂದ್ರಜೀಯವರ ದೇಹಾಂತದಿಂದ ಕಲಾ ಜಗತ್ತಿಗಾದ ದೊಡ್ಡ ಹಾನಿಯ ಕುರಿತು ಹೇಳಿದರು.ಅವರು ಮಾತನಾಡುತ್ತಾ “ಸಂಘದ ಆದರ್ಶಪ್ರಾಯ ಪ್ರಚಾರಕರು ಹೇಗಿರಬೇಕು ಎಂಬುದಕ್ಕೆ ನೀಡುತ್ತಿದ್ದ ಇವರ ಉದಾಹರಣೆ ಇನ್ನು ನಮ್ಮ ಕಣ್ಣೆದುರು ಕಾಣುವುದಿಲ್ಲ.ಅವರ ಜೀವನದ ಚರಿತಾರ್ಥ ಆದರ್ಶ ನಮ್ಮೆಲ್ಲರ ಎದುರಿದೆ. ಮತ್ತು ಅವರ ಆ ಪಾವನ ಪರಂಪರೆಯನ್ನು ನಾವು ಮುಂದುವರೆಸಬೇಕಿದೆ.ಇದೇ ಅವರ ಅಸ್ತಿತ್ವವನ್ನು ಅಮರರನ್ನಾಗಿಸಲಿದೆ.ಕಲಾ ಕ್ಷೇತ್ರದಲ್ಲಿ ಸತ್ಯಂ – ಶಿವಂ – ಸುಂದರಂನ ಭಾವ ಸ್ಥಾಪಿಸುವುದೇ ಬಾಬಾ ಯೋಗೇಂದ್ರಜೀ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ” ಎಂದರು.
ರಾಜ್ಯಸಭಾ ಸಂಸದೆ ಸೋನಲ್ ಮಾನ್ಸಿಂಗ್ ಅವರು ಮಾತನಾಡಿ “ಸಂಸ್ಕಾರ ಭಾರತಿಗೆ ಅಡಿಪಾಯವನ್ನು ಹಾಕಿದ ಕಲಾವಿದರು ಬಾಬಾ ಯೋಗೇಂದ್ರ ಅವರು.ಅವರು ಸದಾ ಜನರ ಮಧ್ಯೆ ಉದ್ದೇಶವನ್ನು ಮತ್ತು ಉತ್ಸಾಹವನ್ನು ತುಂಬುತ್ತಾ ಹೋದರು.ಇವರ ವಿಚಾರವನ್ನು ಮುಂದುವರೆಸುತ್ತಾ ಹೋದರೆ ಸಂಸ್ಕಾರ ಭಾರತಿಯು ಇನ್ನು ಅಧಿಕ ಸುಸಂಸ್ಕೃತ ಸಮಾಜದಲ್ಲು ಪ್ರಸಾರಿತವಾಗುವುದರಲ್ಲಿ ಸಂಶಯವೇ ಇಲ್ಲ” ಎಂದರು.
ಸಂಸ್ಕಾರ ಭಾರತಿಯ ರಾಷ್ಟ್ರೀಯ ಅಧ್ಯಕ್ಷರಾದ ವಾಸುದೇವ ಕಾಮತ್ರವರು ಮಾತನಾಡುತ್ತಾ “ಹೊಸದಾಗಿ ಕಲಾಕ್ಷೇತ್ರದಲ್ಲಿ ತೊಡಗಿಕೊಂಡ ಕಲಾವಿದರಿಗೆ ವಿಶೇಷ ಗಮನವನ್ನು ಬಾಬಾಜೀ ವಹಿಸುತ್ತಿದ್ದರು.ಅವರು ‘ಮೆ ನಹಿ ತು ಹೀ’ ಭಾವದಲ್ಲಿ ಕಲಾವಿದರನ್ನು ಕಾಳಜಿ ಮಾಡುತ್ತಿದ್ದ ಕಲಾಋಷಿಯಾಗಿದ್ದರು.ಅವರ ತಮ್ಮ ಕೊನೆಯ ಘಳಿಗೆಯಲ್ಲೂ ಕಲಾವಿದರನ್ನು ಹುಡುಕುವ ಅವರ ಜೊತೆ ಜೋಡಿಸಿಕೊಳ್ಳುವ ಕೆಲಸವನ್ನು ಮಾಡಿದರು” ಎಂದರು.