ದೇವರು-ಧರ್ಮದ ನಂಬಿಕೆಗಳು ಕಂದಾಚಾರವಲ್ಲ

ಶಿವಮೊಗ್ಗ: ದೇವರು ಹಾಗೂ ಧರ್ಮದ ಬಗೆಗಿನ ನಂಬಿಕೆ ಕಂದಾಚಾರವಲ್ಲ. ಅದು ನೆಮ್ಮದಿ ನೀಡುವ ಸಂಗತಿಗಳಾಗಿವೆ ಎಂದು ಬೆಕ್ಕಿನಕಲ್ಮಠದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ವಾಸವಿ ಶಾಲಾ ಆವರಣದಲ್ಲಿ ಭಾನುವಾರ ಬೆಳಿಗ್ಗೆ ಆಯೋಜಿಸಿದ್ದ ಹಿಂದು ಸಮಾವೇಶದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಪ್ರಸ್ತಿತ ಸಂದರ್ಭದಲ್ಲಿ ನಮ್ಮ ಸಮಾಜದ ಮಾತೆಯರಲ್ಲಿ ಧಮ್ದ ಬಗ್ಗೆ ನಂಬಿಕೆ ಹಾಗೂ ಶ್ರದ್ಧೆ ಹೆಚ್ಚುತ್ತಿದೆ. ಇದು ನಿಜಕ್ಕೂ ಆಶಾದಾಯಕ ಬೆಳವಣಿಗೆಯಾಗಿದೆ. ಇಂದಿನ ಸಂದರ್ಭದಲ್ಲಿ ಮಾತೆಯರ ಮೇಲಿನ ಜವಬ್ದಾರಿಯೂ ಹೆಚ್ಚಿದೆ. ತನ್ನ ಮಕ್ಕಳು ಹಾಗೂ ಕುಟುಂಬವನ್ನು ಸರಿ ದಾರಿಯಲ್ಲಿ ಕೊಂಡೊಯ್ಯವ ಹಾಗೂ ಸತತವಾಗಿ ಧಾರ್ಮಿಕ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಹಾಗೂ ಅವಶ್ಯಕತೆ ಮಹಿಳೆಯರಿಗಿದೆ ಎಂದು ನುಡಿದರು.

ಇಂದು ಎಲ್ಲರಲ್ಲೂ ಅತಂತ್ರ ಭಾವ ಕಾಡುತ್ತಿದೆ. ಜೀವನ ಯಾಂತ್ರಿಕವಾಗಿದೆ. ಆಧುನಿಕ ಸಮಾಜದಲ್ಲಿ ನಡೆಯುತ್ತಿರುವ ಕೆಲವು ವಿದ್ಯಮಾನಗಳು ಆತಂಕ ಮೂಡಿಸುತ್ತಿವೆ. ನಮ್ಮ ಉದ್ದೇಶದ ಈಡೇರಿಕೆಗಾಗಿ ಜೀವನ ನಡೆಸಬೇಕು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಲ್ಲೂ ಧರ್ಮ ಜಾಗೃತಿ ಹೆಚ್ಚಬೇಕು ಎಂದರು.

ಧರ್ಮವೆಂಬುದು ನಮ್ಮ ನಡವಳಿಕೆಯಲ್ಲಿ ವ್ಯಕ್ತವಾಗಬೇಕೇ ಹೊರತು ಅಂಧಾನುಕರಣೆಯಾಗಬಾರದು. ಇಂದಿನ ಸನ್ನಿವೇಶದಲ್ಲಿ ನಮ್ಮ ಸ್ವಾಭಿಮಾನವನ್ನು ಕೆಣಕುವಂತಹಾ ಘಟನೆಗಳು ನಡೆಯುತ್ತಿವೆ. ಇತ್ತೀಚೆಗಷ್ಟೇ ನಮ್ಮ ದೇಶದ ರಾಯಬಾರಿ ಮಹಿಳೆಯೊಬ್ಬರನ್ನು ಅಮೇರಿಕಾದಲ್ಲಿ ತೀವ್ರ ತಪಾಸಣೆಗೆ ಒಳಪಡಿಸುವ ಮೂಲಕ ಇಡೀ ದೇಶಕ್ಕೆ ಅವಮಾನ ಮಾಡಲಾಗಿದೆ. ಇಂತಹ ಗಟನೆಗಳ ವಿರುದ್ಧ ನಾವು ಸಿಡಿದೇಳಬೇಕಾದ ಅವಶ್ಯಕತೆಯಿದೆ ಎಂದು ಕಿವಿ ಮಾತು ಹೇಳಿದರು.

ಸರ್ವಧರ್ಮ ಸಹಿಷ್ಣುತೆ, ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರದಿಂದಾಗಿ ಭಾರತೀಯರು ಎಂದರೆ ಇಡೀ ವಿಶ್ವದಲ್ಲೇ ವಿಶೇಷ  ಸ್ಥಾನಮಾನವಿದೆ. ನಾವೂ ಸಹಾ ಎಲ್ಲಾ ಕೀಳರಿಮೆ ಬಿಟ್ಟು ಪರೋಪಕಾರಿ ಜೀವನವನ್ನು ರೂಡಿಸಿಕೊಳ್ಳಬೇಕು ಎಂದು ಶ್ರೀಗಳು ತಿಳಿಸಿದರು.

ರಾಮನಿಗೆ ಸೇರಿದ ಜಾಗವನ್ನು ರಹೀಮನಿಗೆ ನೀಡಲು ಸಾದ್ಯವಿಲ್ಲ

ಸಹನೆಗೂ ಒಂದು ಮಿತಿ ಇದೆ. ಹಿಂದು ಸಮಾಜದ ಸಹನೆ ದೌರ್ಬಲ್ಯವಲ್ಲ. ಕೇವಲ ರಾಮ ಮಂದಿರ ಮಾತ್ರವಲ್ಲ, ಮಥುರಾದಲ್ಲಿ ಕೃಷ್ಣನ ಹಾಗೂ ಕಾಶಿ ವಿಶ್ವನಾಥನ ದೇವಾಲಯವನ್ನೂ ನಿರ್ಮಿಸುತ್ತೇವೆ. ಇದಕ್ಕಾಗಿ ಹಿಂದು ಸಮಾಜ ಎಂತಹಾ ತ್ಯಾಗ-ಬಲಿದಾನಕ್ಕೂ ಸಿದ್ದವಿದೆ. ಸರ್ಕಾರಗಳು ಮುಸ್ಲಿಂ ತುಷ್ಟೀಕರಣ ನೀತಿಯನ್ನು ಕೈಬಿಡಿದ್ದರೆ ಹಿಂದು ಸಮಾಜ ಸಿಡಿದೇಳಬೇಕಾಗುತ್ತದೆ.

ಶಿವಮೊಗ್ಗ:  ಅಯೋಧ್ಯೆಯ ರಾಮಜನ್ಮಭೂಮಿಯಲ್ಲೇ ರಾಮಮಂದಿರವನ್ನು ನಿರ್ಮಾಣ ಮಾಡುತ್ತೇವೆ. ಮಂದಿರ ನಿರ್ಮಾಣದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ. ಅದೇ ರೀತಿ ರಾಮನಿಗೆ ಸೇರಿದ ಜಗವನ್ನು  ರಹೀಮನಿಗೆ ಬಿಟ್ಟುಕೊಡಲೂ ಸಾಧ್ಯವಿಲ್ಲ ಎಂದು ಧರ್ಮಜಗರಣ ಸಮಿತಿಯ ಪ್ರಾಂತ ಸಂಚಾಲಕ ಮುನಿಯಪ್ಪ ಹೇಳಿದ್ದಾರೆ.

ನಗರದ ವಾಸವಿ ಶಾಲಾ ಆವರಣದಲ್ಲಿ ಭಾನುವಾರ  ಹನೂಮತ್ ಶಕ್ತಿ ಜಗರಣ ಸಮಿತಿ ವತಿಯಿಂದ ಏರ್ಪಡಿಸಿದ್ದ ಹಿಂದೂ ಸಮಾವೇಶದಲ್ಲಿ ಪ್ರಮುಖ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಅಲಹಾಬಾದ್ ಕೋರ್ಟ್ ಅಯೋಧ್ಯೆ ರಾಮನ ಜನ್ಮಭೂಮಿ ಎಂದು ಒಪ್ಪಿಕೊಂಡಿರುವುದು ಸಂತಸ ತಂದಿದೆ. ಆದರೆ ಆ ಜಗವನ್ನು ಭಾಗ ಮಾಡಿರುವುದು ಬೇಸರವುಂಟುಮಾಡಿದೆ ಎಂದು ಇದೇ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಹಿಂದುಗಳ ಶತಮಾನದ ಹೋರಾಟಕ್ಕೆ ಅಲಹಾಬಾದ್ ಕೋರ್ಟ್‌ನ ತೀರ್ಪು ಉತ್ತಮ ಫಲಿತಾಂಶವೆಂದೇ ಬಿಂಬಿತವಾಗಿದೆ. ಆ ಮೂಲಕ ಸಾವಿರಾರು ರಾಮಭಕ್ತರ ಬಲಿದಾನಕ್ಕೆ ಪ್ರತಿಫಲ ದೊರೆತಂತಾಗಿದೆ. ಬಾಬರಿ ಮಸೀದಿ ಕ್ರಿಯಾ ಸಮಿತಿಯ ಅರ್ಜಿ ವಜ ಆಗಿರುವುದರಿಂದ ಆ ಸಮಿತಿಗೆ ಜಮೀನು ನೀಡುವ ಅವಶ್ಯಕತೆ ಏನಿದೆ ಎಂದು ಅವರು ಪ್ರಶ್ನಿಸಿದರು.

೧೯೯೨ ರ ಡಿಸೆಂಬರ್ ೬ ರಂದು ಕರ ಸೇವೆ ನಡೆದಾಗ ಕೆಲವು ಪ್ರಗತಿಪರರು ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ ಎಂದು ಬೊಬ್ಬೆ ಹಾಕಿದರು. ಹಲವು ರಾಜಕಾರಣಿಗಳು ರಾಮನ ಅಸ್ತಿತ್ವವನ್ನು ಪ್ರಶ್ನಿಸಿದ್ದರು. ಆದರೆ ಕೋರ್ಟ್ ತೀರ್ಪು ಎಲ್ಲರಿಗೂ ಉತ್ತರ ನೀಡಿದೆ. ಕೇವಲ ರಾಮಮಂದಿರ ಮಾತ್ರವಲ್ಲ ಕಾಶಿಯಲ್ಲಿ ವಿಶ್ವನಾಥರ ದೇವಾಲಯ, ಮಥುರಾದಲ್ಲಿ ಶ್ರೀಕೃಷ್ಣನ ದೇವಾಸ್ಥಾನವನ್ನು ನಿರ್ಮಿಸುತ್ತಿವೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಕಾಶ್ಮೀರ ಭಾರತದ ಅವಿಬಾಜ್ಯ ಅಂಗ….

ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚಿಸುವ ಮೂಲಕ ಅದನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಪಾಕಿಸ್ತಾನ ಕುತಂತ್ರ ನಡೆಸಿದೆ. ಕಾಶ್ಮೀರದಲ್ಲಿರುವ ಗೂರ್ಖಾಗಳು, ಬನಿಯಾಗಳು ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿದ್ದಾರೆ.  ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಯಾರೂ ಸಹ ಇದನ್ನು ಅತಿಕ್ರಮಿಸಿಕೊಳ್ಳಲು ಹಿಂದೂ ಸಮಾಜ ಬಿಡುವುದಿಲ್ಲ ಎಂದರು.

ದೇಶದಲ್ಲಿ ಸಂಭವಿಸಿರುವ ಅನೇಕ ಭಯೋತ್ಪಾದನಾ ಕೃತ್ಯಗಳಲ್ಲಿ ಮುಸ್ಲಿಂ ಸಮುದಾಯದಕ್ಕೆ ಸೇರಿದ ವ್ಯಕ್ತಿಗಳ ಕೈವಾಡವಿದೆ ಎಂಬುದು ಸಾಭೀತಾಗಿದೆ. ಆದರೆ ಯಾವ ರಾಜಕಾರಣಿಗಳೂ ಇದರ ಬಗ್ಗೆ ಮಾತನಾಡುತ್ತಿಲ್ಲ.

ಆದರೆ ಇತ್ತೀಚೆಗೆ ಸಂಘ ಪರಿವಾರಕ್ಕೆ ಕೇಸರಿ ಭಯೋತ್ಪಾದನೆಯ ಕಳಂಕ ಕಟ್ಟಲು ಕೆಲವು ರಾಜಕಾರಣಿಗಳು ಸಂಚು ರೂಪಿಸಿದ್ದಾರೆ.  ಆದರೆ ಎಂದೂ ಸಹ ಮುಸ್ಲಿಂ ಭಯೋತ್ಪಾದನೆ ಎಂಬ ಶಬ್ದವನ್ನು ಯಾರೂ ಬಳಸಲಿಲ್ಲ. ಸಂಘ ಪರಿವಾರದ ವ್ಯಕ್ತಿಗಳಿಗೆ ಸಂಚು ರೂಪಿಸಿ ಭಯೋತ್ಪಾದನೆಯ ಪಟ್ಟ ಕಟ್ಟಲಾಗುತ್ತಿದೆ ಎಂದು ದೂರಿದರು.

ಆರ್‌ಎಸ್‌ಎಸ್ ನ ಜಿಲ್ಲಾ ಸಂಘ ಚಾಲಕ ಚಕ್ಕೋಡಬೈಲು ಬೆನಕಭಟ್, ಜಿಲ್ಲಾ ಸಹ ಸಂಘ ಚಾಲಕ ಡಿ.ಎಚ್.ಸುಬ್ಬಣ್ಣ, ಹನೂಮತ್ ಶಕ್ತಿ ಜಗರಣಾ ಸಮಿತಿಯ ನಗರ ಸಮಿತಿ ಅಧ್ಯಕ್ಷ ಓಂಕಾರ್ ಸತೀಶ್, ಪ್ರಮುಖರಾದ ರಮೇಶ್‌ಬಾಬು, ಹಾ.ರಾಮಪ್ಪ ಮತ್ತಿತರರು ಉಪಸ್ಥಿತರಿದ್ದರು.


Leave a Reply

Your email address will not be published.

This site uses Akismet to reduce spam. Learn how your comment data is processed.