

ಡಿ. 18, 2020, ಬೆಂಗಳೂರು: ಸೆಗಣಿಯಿಂದ ತಯಾರಿಸಿದ ‘ವೇದಿಕೆ ಪೇಂಟ್ಸ್’ ಸದ್ಯದಲ್ಲಿಯೇ ಮಾರುಕಟ್ಟೆಗೆ ಬರಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಈ ‘ವೇದಿಕ್ ಪೇಂಟ್’ ಸಗಣಿಯಿಂದ ತಯಾರಿಸಲಾಗಿದೆ. ಇದರಿಂದ ಇದು ಬ್ಯಾಕ್ಟೀರಿಯಾವನ್ನು ತಡೆಯುತ್ತದೆ. ಪರಿಸರಸ್ನೇಹಿಯಾಗಿದ್ದು, ಬೇರೆ ರಾಸಾಯನಿಕಗಳಂತೆ ವಿಷಕಾರಿಯಲ್ಲ. ಇದನ್ನು ನೀರಿನಿಂದ ತೊಳೆದರೂ ಯಾವುದೇ ಹಾನಿಯಾಗುವುದಿಲ್ಲ. ಈ ಅಂಶಗಳಿಗಿಂತ ಹೆಚ್ಚಾಗಿ, ಹೈನುಗಾರಿಕೆ ಕೈಗೊಂಡಿರುವ ನಮ್ಮ ರೈತರು ಇದರಿಂದ ಹೆಚ್ಚುವರಿ ರೂ. 55,000 ವರೆಗೆ ಆದಾಯ ಪಡೆಯಲು ಸಾಧ್ಯವಿದೆ. ಇದರಿಂದ ಗ್ರಾಮೀಣ ಜೀವನಮಟ್ಟ ಸುಧಾರಿಸುವ ಸಹಕಾರಿಯಾಗಲಿದೆ ಎಂದರು.

ಖಾದಿ ಹಾಗೂ ಗ್ರಾಮೀಣ ಕೈಗಾರಿಕಾ ಮಿಷನ್ ಅಡಿಯಲ್ಲಿ ಖಾದಿ ಇಂಡಿಯಾ ವತಿಯಿಂದ ಈ ಪೇಂಟ್ ನ್ನು ಪರಿಚಯಿಸಲಾಗುತ್ತಿದೆ. ಕೃಷಿಯೊಂದಿಗೆ ರೈತರಿಗೆ ಹೆಚ್ಚಿನ ಮಟ್ಟದ ಆದಾಯವನ್ನೂ ಇದು ತಂದುಕೊಡಲಿದೆ ಎಂದು ನಿತಿನ್ ಗಡ್ಕರಿ ಅಭಿಪ್ರಾಯಪಟ್ಟರು.
ಇತ್ತೀಚೆಗೆ ದೀಪಾವಳಿ ಸಂದರ್ಭದಲ್ಲಿ ಕಾಮಧೇನು ದೀಪಾವಳಿ, ನವರಾತ್ರಿ ಆಚರಿಸುವಂತೆ ಹಾಗೂ ಸೆಗಣಿಯಿಂದ ತಯಾರಿಸಿದ ದೀಪಗಳನ್ನು ಬಳಸುವಂತೆ ಸಾರ್ವಜನಿಕರಿಗೆ ಕರೆ ನೀಡಿದ್ದನ್ನು ಸ್ಮರಿಸಬಹುದು. ಗೋ ಸಂರಕ್ಷಣೆಗೆ ಹಾಗೂ ಗೋಉತ್ಪನ್ನಗಳಿಗೆ ಮಾರುಕಟ್ಟೆ ನಿರ್ಮಿಸುವುದರ ಜೊತೆಗೆ ಆತ್ಮನಿರ್ಭರ ಭಾರತ ನಿರ್ಮಿಸುವ ಮೋದಿ ಆಶಯದ ಸಾಕಾರಕ್ಕೆ ದಿಟ್ಟ ಹೆಜ್ಜೆ ಎನ್ನಬಹುದು.