ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಮಾನಸಿಕ ಸಮಸ್ಯೆಗಳಿಗೆ ತುತ್ತಾಗುತ್ತಿರುವುದು ಸಹಜವಾಗಿಬಿಟ್ಟಿದೆ. ಅದರಲ್ಲೂ ಇತ್ತೀಚೆಗೆ ಹೆಚ್ಚಾಗಿ ಕೇಳಿ ಬರುತ್ತಿರುವ ಮಕ್ಕಳ ಸಂಬಂಧಿತ ಕಾಯಿಲೆ ಎಂದರೆ ಆಟಿಸಂ. ಪೋಷಕರ ಒತ್ತಡದ ದಿನಚರಿ, ಮಕ್ಕಳ ಬೆಳವಣಿಗೆಯ ಪರಿಸರ, ಒಂಟಿತನ, ಜಾಗತೀಕರಣಗೊಂಡ ಆಹಾರ ಪದ್ಧತಿ, ಜೀವನಶೈಲಿ, ಕೌಟುಂಬಿಕ ಸಮಸ್ಯೆಗಳು, ವಿಭಕ್ತ ಕುಟುಂಬ ಹೀಗೆ ಹಲವಾರು ಪರೋಕ್ಷ ಕಾರಣಗಳಿಂದಾಗಿ ಮಕ್ಕಳು ಮಾನಸಿಕ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಈ ಕಾರಣಕ್ಕಾಗಿ ಪೋಷಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಏಪ್ರಿಲ್‌ 2 ರಂದು ವಿಶ್ವ ಆಟಿಸಂ ಜಾಗೃತಿ ದಿನವನ್ನಾಗಿ ಆಚರಿಸಲಾಗುತ್ತದೆ.


ಆಟಿಸಂ ಎಂದರೇನು?
ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ಎನ್ನುವುದು ನರಗಳ ಬೆಳವಣಿಗೆಯ ಅಸ್ವಸ್ಥತೆಯಾಗಿದ್ದು ಅದು ವ್ಯಕ್ತಿಯ ಸಂವಹನ, ಸಾಮಾಜಿಕ ಸಂವಹನ ಮತ್ತು ನಡವಳಿಕೆಯ ಮೇಲೆ ಅಗಾಧ ಪರಿಣಾಮ ಬೀರುತ್ತದೆ.


ಆಟಿಸಂನ ರೋಗದ ಲಕ್ಷಣಗಳು
ಆಟಿಸಂ ರೋಗಲಕ್ಷಣಗಳನ್ನು ಎರಡು ಭಾಗವಾಗಿ ನೋಡಬಹುದು. ಸಾಮಾಜಿಕ ತೊಂದರೆ ಮತ್ತು ಸಂವಹನ ತೊಂದರೆ . ಈ ಸಮಸ್ಯೆಗಳು ಮಗುವಿನ ಯಾವುದೇ ವಯಸ್ಸಿನಲ್ಲಿ ಕಂಡುಬರಬಹುದು. ಆದರೆ ಸಾಮಾನ್ಯವಾಗಿ ರೋಗಲಕ್ಷಣಗಳು ಮೂರು ವರ್ಷ ವಯಸ್ಸಿನ್ನೊಳಗಿನ ಮಕ್ಕಳಲ್ಲಿ ಪ್ರಧಾನವಾಗಿ ಕಂಡುಬರುತ್ತದೆ.

ಸಾಮಾಜಿಕ ತೊಂದರೆ
1.ಮೊದಲ ವರ್ಷ ತುಂಬುವುದರೊಳಗೆ ತಮ್ಮ ಹೆಸರಿನ ಗ್ರಹಿಕೆ ಮತ್ತು  ಉತ್ತರಿಸುವಲ್ಲಿ ನಿರಾಸಕ್ತಿ ತೋರುವುದು.
2. ಕಣ್ಣಲ್ಲಿ ಕಣ್ಣಿಟ್ಟು ನೋಡಲು ನಿರಾಕರಿಸುವುದು
3. ನೀವು ನಗಿಸಿದಾಗ ನಗದೇ ಇರುವುದು
4. ಅವರಿಗೆ ಹಿಡಿಸದ ಶಬ್ದ, ವಾಸನೆ ಅಥವಾ ಆಹಾರ ಕಂಡಾಗ ಸಿಕ್ಕಾಪಟ್ಟೆ ಕಿರಿಕಿರಿ ಮಾಡುವುದು
5. ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಅಸಮರ್ಥತೆ ತೋರುವುದು.

ಸಂವಹನ ತೊಂದರೆಗಳು:

1. ಮಾತಾನಾಡುವಾಗ ಧ್ವನಿಯಲ್ಲಿ ಏರಿಳಿತದ ಕೊರತೆ.
2. ತಡವಾದ ಭಾಷಣ ಮತ್ತು ಪರಿಭಾಷೆಯ ಕೌಶಲ್ಯಗಳನ್ನು ಹೊಂದರೆ ಇರುವುದು
3. ಒಂದೇ ಪದ ಅಥವಾ ವಾಕ್ಯವನ್ನು ಪದೇ ಪದೇ ಪುನರುಚ್ಛರಿಸುವುದು.
4. ಬೇರೆಯವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳದೆ ಇರುವುದು
5. ಸ್ನೇಹಿತರನ್ನು ಮಾಡಿಕೊಳ್ಳದೇ ಇರುವುದು.

ಇತಿಹಾಸ
ವಿಶ್ವಸಂಸ್ಥೆಯು ಪ್ರಾರಂಭದಿಂದಲೂ ವಿಶೇಷಚೇತನ ಮಕ್ಕಳ ಹಕ್ಕುಗಳು ಮತ್ತು ಯೋಗಕ್ಷೇಮವನ್ನು ಸುಗಮಗೊಳಿಸುವ ಕೆಲಸ ಮಾಡುತ್ತಿದೆ.   ವಿಶ್ವಸಂಸ್ಥೆಯು ನವೆಂಬರ್ 1, 2007 ರಂದು ಆಟಿಸಂ ಕುರಿತು ನಿರ್ಣಯವನ್ನು ಮಂಡಿಸಿತ್ತು. ನಂತರ ಅದನ್ನು ಡಿಸೆಂಬರ್‌ 18, 2007 ರಂದು ಅನುಮೋದಿಸಲಾಯಿತು. ಹೀಗಾಗಿ 2008ರಿಂದ ಪ್ರತಿವರ್ಷ ಏಪ್ರಿಲ್‌ 2 ರಂದು ವಿಶ್ವ ಆಟಿಸಂ ಜಾಗೃತಿ ದಿನವನ್ನಾಗಿ ಆಚರಿಸಲಾಗುತ್ತಿದೆ.


ಇತ್ತೀಚೆಗಿನ ಅಂಕಿ-ಅಂಶಗಳ ಪ್ರಕಾರ ವಿಶ್ವದಲ್ಲಿ ಆಟಿಸಂ ಸುಮಾರು 1000ಕ್ಕೆ 1-2 ಮಕ್ಕಳಲ್ಲಿ ಕಂಡುಬಂದಿದೆ. ಗಂಡು ಮಕ್ಕಳಲ್ಲಿ ಇದರ ಪ್ರಮಾಣ 4 ರಿಂದ 5 ಪಟ್ಟು ಹೆಚ್ಚಾಗಿರುತ್ತದೆ.

ವಿಶ್ವ ಆಟಿಸಂ ಜಾಗೃತಿ ದಿನವನ್ನು ಏಕೆ ಆಚರಿಸುತ್ತೇವೆ?

ಜಾಗೃತಿ ಮೂಡಿಸುವುದು: ಆಟಿಸಂ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡುವುದು ಬಹಳ ಮುಖ್ಯ. ಹೆಚ್ಚಿದ ಜಾಗೃತಿಯು ಆಟಿಸ್ಟಿಕ್ ವ್ಯಕ್ತಿಗಳು ಮತ್ತು ಅವರ ಕುಟುಂಬಗಳ ನಡುವೆ ಹೆಚ್ಚು ಆತ್ಮೀಯತೆಯನ್ನು ಬೆಳೆಸುತ್ತದೆ.


ತಿಳುವಳಿಕೆಯನ್ನು ಉತ್ತೇಜಿಸುವುದು: ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಮತ್ತು ಆಟಿಸಂ ಬಗ್ಗೆ ಆಳವಾದ ತಿಳುವಳಿಕೆಯನ್ನು ಉತ್ತೇಜಿಸುವುದು. ಜೊತೆಗೆ ಸಾಮಾಜಿಕ ಪ್ರತ್ಯೇಕತೆ ಮತ್ತು ತಾರತಮ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಹಕ್ಕುಗಳಿಗಾಗಿ ಗಮನ: ಆಟಿಸ್ಟಿಕ್ ಜನರ ಅಗತ್ಯಗಳತ್ತ ಗಮನ ಸೆಳೆಯುವುದು. ಉತ್ತಮ ಸೇವೆಗಳು ಮತ್ತು ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯದ ರಕ್ಷಣೆಯ ಬಗ್ಗೆ ಹೆಚ್ಚು ಗಮನಹರಿಸುವುದು.

ಆಟಿಸಂ ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಬೆಂಗಳೂರಿನ ಸಂಸ್ಥೆ

ಬೆಂಗಳೂರಿನ ಮನೋನಂದನ ಸಂಸ್ಥೆಯು ಆಟಿಸಂ ಮಕ್ಕಳ ಕಲ್ಯಾಣಕ್ಕಾಗಿ ವಿಶೇಷವಾಗಿ ಶ್ರಮಿಸುತ್ತಿದೆ. ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಕೂಡ ಈ ಸಂಸ್ಥೆಗೆ ಲಭಿಸಿದೆ.

ಮನೋನಂದನ ವೆಬ್ ಸೈಟ್:

https://manonandana.org/
ಮನೋನಂದನ ಸಂಸ್ಥೆಯ ಶ್ರೀ ಮಿಲಿಂದ್ ಗೋಖಲೆ ಇವರಿಗೆ ಆಭಿನಂದನೆ ಸಲ್ಲಿಸುತ್ತಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ

Leave a Reply

Your email address will not be published.

This site uses Akismet to reduce spam. Learn how your comment data is processed.