ʼಆರೋಗ್ಯವೇ ಭಾಗ್ಯʼ ಎಂಬ ನಾಣ್ಣುಡಿ ಸಾರ್ವಕಾಲಿಕವಾಗಿ ಆರೋಗ್ಯದ ಮಹತ್ವವನ್ನು ಸಾರುತ್ತದೆ. ಇಂದಿನ ದಿನಗಳಲ್ಲಿ ಜನರು ತಮ್ಮ ಒತ್ತಡದ ಜೀವನ, ಆಹಾರ, ನಿದ್ರಾಹೀನತೆ ಇತ್ಯಾದಿ ಕಾರಣಗಳಿಂದಾಗಿ ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸುತ್ತಿದ್ದಾರೆ. ಆರೋಗ್ಯವೆಂದಾಕ್ಷಣ ದೈಹಿಕ ಯೋಗಕ್ಷೇಮ ಮಾತ್ರವಲ್ಲದೆ ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮವೂ ಒಳಗೊಂಡಿದೆ. ಆರೋಗ್ಯ ಮತ್ತು ಸ್ವಾಸ್ಥ್ಯದ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಏಪ್ರಿಲ್‌ 7 ರಂದು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ದಿನದ ಈ ವರ್ಷದ ಥೀಮ್‌ ‘ನನ್ನ ಆರೋಗ್ಯ, ನನ್ನ ಹಕ್ಕು’.


ಇತಿಹಾಸ
1948ರಲ್ಲಿ ಆರೋಗ್ಯ ಮತ್ತು ಹಲವು ಯೋಗಕ್ಷೇಮ ಜೀವನದ ಪ್ರಮುಖ ಅಂಶಗಳನ್ನು ಉತ್ತೇಜಿಸಲು ವಿಶ್ವ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲಾಯಿತು. ದೇಶಗಳು ಒಟ್ಟಾಗಿ ಸೇರಿ ಆರೋಗ್ಯವನ್ನು ಉತ್ತೇಜಿಸಲು, ಜಗತ್ತನ್ನು ಸುರಕ್ಷಿತವಾಗಿಡಲು ಹಾಗೂ ಅಶಕ್ತರಿಗೆ ಸೇವೆ ನೀಡುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಏಪ್ರಿಲ್‌ 7, 1950 ರಂದು ವಿಶ್ವ ಆರೋಗ್ಯ ಸಂಸ್ಥೆ ಮೊದಲ ವಿಶ್ವ ಆರೋಗ್ಯ ದಿನವನ್ನು ಆಚರಿಸಿತು. ವಿಶ್ವ ಆರೋಗ್ಯ ದಿನದ ಆರಂಭಿಕ ವರ್ಷಗಳಲ್ಲಿ ಸಿಡುಬು, ಟಿಬಿ ಮತ್ತು ಮಲೇರಿಯಾ ಸೇರಿದಂತೆ ಪ್ರಮುಖ ಆರೋಗ್ಯ ಸಮಸ್ಯೆಗಳನ್ನು ಗುರುತಿಸಲಾಗಿತ್ತು. ಹೀಗಾಗಿ ವಿಶ್ವ ಆರೋಗ್ಯ ದಿನದಂದು ಆರೋಗ್ಯ ರಕ್ಷಣೆ, ನೈರ್ಮಲ್ಯ ಮತ್ತು ಶುದ್ಧ ನೀರಿನ ಕುರಿತು ಜಾಗೃತಿ ಮೂಡಿಸಲಾಗಿದೆ.


ಮಹತ್ವ
ಆರೋಗ್ಯದಲ್ಲಿ ಸಮಾನತೆ ಕಾಣುವ ದೃಷ್ಟಿಯಿಂದ ಈ ದಿನದಂದು ಜನರಿಗೆ ಜಾಗೃತಿ ಮೂಡಿಸಲಾಗುತ್ತದೆ. ಗುಣಮಟ್ಟದ ಆರೋಗ್ಯದ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ಶಿಕ್ಷಣ ನೀಡುವುದು, ಆರೋಗ್ಯ ಸೇವೆಗಳನ್ನು ಒದಗಿಸಲು ಶ್ರಮಿಸುತ್ತದೆ‌.

ಸಾರ್ವಜನಿಕ ಆರೋಗ್ಯ ಸವಾಲುಗಳತ್ತ ಗಮನ ಸೆಳೆಯುವಲ್ಲಿ ಜಾಗತಿಕ ಸಂವಾದವನ್ನು ಏರ್ಪಡಿಸುವಲ್ಲಿ ವಿಶ್ವ ಆರೋಗ್ಯ ದಿನವು ಪರಿಣಾಮಕಾರಿಯಾಗಿದೆ.

ಈ ದಿನವು ಆರೋಗ್ಯ ಆರೈಕೆ ಕಲ್ಪನೆಗಳು ಮತ್ತು ಯಶಸ್ವಿ ಯೋಜನೆಗಳನ್ನು ಪ್ರದರ್ಶಿಸಲು ಅವಕಾಶವನ್ನು ನೀಡುತ್ತದೆ.

ವಿಶ್ವ ಆರೋಗ್ಯ ದಿನವು ರಾಜಕೀಯ ಮತ್ತು ಭೌಗೋಳಿಕ ವಿಭಜನೆಗಳನ್ನು ಮೀರಿ ಎಲ್ಲರಿಗೂ ಆರೋಗ್ಯ ಸುಧಾರಣೆಗಾಗಿ ಅಂತರರಾಷ್ಟ್ರೀಯ ಜನರನ್ನು ಒಗ್ಗೂಡಿಸಲು ಸಹಕಾರಿಯಾಗುತ್ತದೆ.

ಜಾಗತಿಕ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಉಂಟುಮಾಡುವ ಪ್ರಬಲ ವಾರ್ಷಿಕ ದಿನವಾಗಿ ವಿಶ್ವ ಆರೋಗ್ಯ ದಿನ ವಿಕಸನಗೊಳ್ಳುತ್ತಿದೆ.

ಪ್ರಸ್ತುತ ಸಾರ್ವಜನಿಕರ ಮೇಲೆ ಪರಿಣಾಮ ಬೀರುತ್ತಿರುವ ಆರೋಗ್ಯ ಸಮಸ್ಯೆಯ ಆಧಾರದ ಮೇಲೆ ಡಬ್ಲ್ಯುಎಚ್ಒ ಪ್ರತಿ ವರ್ಷ ವಾರದ ಸಮ್ಮೇಳನಗಳು ಮತ್ತು ಕಾರ್ಯಕ್ರಮಗಳ ಥೀಮ್ ಅನ್ನು ನಿರ್ಧರಿಸುತ್ತದೆ.

Leave a Reply

Your email address will not be published.

This site uses Akismet to reduce spam. Learn how your comment data is processed.