ಪ್ರಪಂಚದಾದ್ಯಂತ ಹಿಂದಿ ಭಾಷೆಯ ಪ್ರಾಮುಖ್ಯತೆ ಮತ್ತು ಪರಂಪರೆಯನ್ನು ಗುರುತಿಸುವ ಸಲುವಾಗಿ ಪ್ರತಿ ವರ್ಷ ಜನವರಿ 10 ರಂದು ವಿಶ್ವ ಹಿಂದಿ ದಿನವೆಂದು ಆಚರಿಸಲಾಗುತ್ತದೆ. ಭಾರತದಲ್ಲಿ ಹಿಂದಿ ಭಾಷೆಯನ್ನು ಅತೀ ಹೆಚ್ಚು ಜನರು ಬಳಕೆ ಮಾಡುತ್ತಾರೆ. ಹಿಂದಿ ಒಂದು ಭಾಷೆಯೆಂದು ಹೇಳುವುದಕ್ಕಿಂತ ಭಾರತೀಯ ಸಾಂಸ್ಕೃತಿಕ ಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸುವ ಸರಳ ಮಾಧ್ಯಮವಾಗಿದೆ. ಹಿಂದಿ ಭಾಷೆಯನ್ನು ವಿಶ್ವಭಾಷೆಯಾಗಿ ಬಳಸುವುದಕ್ಕಾಗಿ ಪ್ರತೀ ವರ್ಷ ವಿಶ್ವ ಹಿಂದಿ ದಿನ ಆಚರಣೆ ಮಾಡಲಾಗುತ್ತದೆ.

ಇತಿಹಾಸ

1949 ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಲ್ಲಿ ಮೊದಲ ಬಾರಿಗೆ ಹಿಂದಿ ಮಾತನಾಡಿದ ನೆನಪಿಗಾಗಿ ಜನವರಿ 10ರಂದು ವಿಶ್ವ ಹಿಂದಿ ದಿವಸ್ ಆಚರಿಸಲಾಗುತ್ತದೆ.

1975 ಜನವರಿ 10 ರಂದು ನಾಗಪುರದಲ್ಲಿ ಮೊದಲ ‘ವಿಶ್ವ ಹಿಂದಿ ಸಮ್ಮೇಳನ’ವನ್ನು ಆಚರಿಸಲಾಯಿತು.2005 ರಲ್ಲಿ ಜೂನ್ 8 ರಂದು ನಡೆದ ವಿಶ್ವ ಹಿಂದಿ ಸಮ್ಮೇಳನದ ಅನುಸರಣಾ ಸಮಿತಿಯ ಸಭೆಯಲ್ಲಿ, ಪ್ರತಿ ವರ್ಷ ಜನವರಿ 10 ಅನ್ನು ವಿಶ್ವ ಹಿಂದಿ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು. 2006ರ ಜನವರಿ 10 ರಂದು ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ಮನಮೋಹನ್ ಸಿಂಗ್ ಅವರು ಮೊದಲ ವಿಶ್ವ ಹಿಂದಿ ದಿನದ ಆಚರಣೆಗೆ ಚಾಲನೆ ನೀಡಿದರು. ಇಂದು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ವಿಶ್ವ ಹಿಂದಿ ದಿವಸ್ ಆಚರಿಸಲಾಗುತ್ತದೆ.

ಜಗತ್ತಿನಾದ್ಯಂತ ಸುಮಾರು 420 ಮಿಲಿಯನ್ ಜನರು ಹಿಂದಿಯನ್ನು ಮೊದಲ ಭಾಷೆಯಾಗಿ ಮಾತನಾಡುತ್ತಾರೆ. ಜೊತೆಗೆ ಸುಮಾರು 120 ಮಿಲಿಯನ್ ಜನರು ಹಿಂದಿಯನ್ನು ಎರಡನೇ ಭಾಷೆಯಾಗಿ ಬಳಸುತ್ತಾರೆ. ಇದು ಭಾರತದ ಎರಡು ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ.

ಹಿಂದಿ ದಿವಸ್ ಆಚರಣೆ ಹೇಗೆ?

ಹಿಂದಿ ದಿವಸ್ ದಿನದಂದು ದೇಶಾದ್ಯಂತ ಹಲವಾರು ಕಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ದಿನ ರಾಜಭಾಷಾ ಕೀರ್ತಿ ಪುರಸ್ಕಾರ್, ರಾಜಭಾಷಾ ಗೌರವ್ ಪುರಸ್ಕಾರ್ ಇತ್ಯಾದಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಹಿಂದಿ ಭಾಷೆಗೆ ಕೊಡುಗೆ ನೀಡಿದ ನಾಗರಿಕರು, ಸಚಿವರು, ಇಲಾಖೆಗಳು, ಪಿಎಸ್‌ಯುಗಳು, ರಾಷ್ಟ್ರೀಕೃತ ಬ್ಯಾಂಕುಗಳಿಗೆ ಈ ಪ್ರಶಸ್ತಿ ಕೊಡಲಾಗುತ್ತದೆ

Leave a Reply

Your email address will not be published.

This site uses Akismet to reduce spam. Learn how your comment data is processed.