1926 ರ ಮೇ 28ಕ್ಕೆ ಆರೆಸ್ಸೆಸ್ಸಿನ ಮೊತ್ತಮೊದಲ ಶಾಖೆ ನಾಗಪುರದ ಮೊಹಿತೇವಾಡದಲ್ಲಿ ಪ್ರಾರಂಭವಾಯಿತು.

1925ರ ಸೆಪ್ಟಂಬರ್ 27ರ ವಿಜಯದಶಮಿಯಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಾರಂಭ, ಸುಮಾರು 8 ತಿಂಗಳ ನಂತರ ಶಾಖಾಪದ್ಧತಿಯ ವಿಕಾಸ.

ನಿತ್ಯಶಾಖೆ: ವ್ಯಕ್ತಿನಿರ್ಮಾಣದ ಆಶಯದೊಂದಿಗೆ ಒಂದು ಗಂಟೆಯ ಶಾರೀರಿಕ-ಬೌದ್ಧಿಕ ಚಟುವಟಿಕೆಗಳ ಮೂಲಕ ವ್ಯಕ್ತಿತ್ವ ವಿಕಸನದ ಹಲವು ಕಾರ್ಯಕ್ರಮಗಳು.

ಒಂದು ನಿಶ್ಚಿತ ಜಾಗದಲ್ಲಿ, ನಿಶ್ಚಿತ ಸಮಯಕ್ಕೆ ನಿಶ್ಚಿತ ವ್ಯಕ್ತಿಗಳ ಸಮೂಹವು ಪ್ರತಿನಿತ್ಯ ಒಂದಾಗಿ ಸೇರುವ, ಸಮಾಜಹಿತದ ಚಿಂತನೆಯೊಂದಿಗೆ ‘ಶಾಖೆ’ ಸಂಘದ ಕಾರ್ಯಪದ್ಧತಿಯ ವೈಶಿಷ್ಟ್ಯಗಳಲ್ಲೊಂದು.

ಪ್ರಸ್ತುತ ದೇಶಾದ್ಯಂತ 88,949 ಶಾಖೆಗಳು ನಡೆಯುತ್ತಿದೆ. (ABPS Report 2026)

ಪ್ರಸ್ತುತ ಕರ್ನಾಟಕ ರಾಜ್ಯಾದ್ಯಂತ 4127 ಶಾಖೆಗಳು ನಡೆಯುತ್ತಿವೆ. (Post-ABPS Press Conference Bengaluru Report 2026)

ಶಾಖೆಯ ಮೂಲಕ ತಯಾರಾದ ಸ್ವಯಂಸೇವಕರು ವ್ಯಕ್ತಿನಿರ್ಮಾಣದಿಂದ ಸಮಾಜ ಪರಿವರ್ತನೆ ಹಾಗೂ ರಾಷ್ಟ್ರದ ಪರಮವೈಭವ ಸಾಕಾರಗೊಳಿಸುವ ಸಂಕಲ್ಪದೊಂದಿಗೆ ಕ್ರಿಯಾಶೀಲರಾಗುತ್ತಾರೆ.

ಶಾಖೆಯಲ್ಲಿ ದೇಸಿ ಆಟಗಳು, ವ್ಯಾಯಾಮ, ಯೋಗಾಸನ, ಸೂರ್ಯನಮಸ್ಕಾರ, ಮಹಾಪುರುಷರ- ವೀರವನಿತೆಯರ ಕಥೆಗಳು, ದೇಶಭಕ್ತಿಗೀತೆಗಳು, ಗುಣನಿರ್ಮಾಣದ ನೀತಿಕಥೆಗಳು, ಅಮೃತವಚನ, ಸುಭಾಷಿತ ಮುಂತಾದ ಚಟುವಟಿಕೆಗಳು ನಂತರ ಆರೆಸ್ಸೆಸ್ ಪ್ರಾರ್ಥನೆ ಪ್ರತಿನಿತ್ಯ ನಡೆಯುತ್ತವೆ.

ಓರ್ವ ವ್ಯಕ್ತಿಯಲ್ಲಿ ವ್ಯಕ್ತಿತ್ವ, ಕರ್ತೃತ್ವ, ನೇತೃತ್ವ, ವಿವೇಕ, ದೇಶಭಕ್ತಿಯ ಗುಣಗಳನ್ನು ನಿತ್ಯಶಾಖೆ ಮೂಡಿಸುತ್ತದೆ.

“ಶಾಖೆಯ ಮೂಲ ಉದ್ದೇಶ ವ್ಯಕ್ತಿನಿರ್ಮಾಣವೇ ಆಗಿದೆ. ಅಲ್ಲಿ ತಯಾರಾದ ವ್ಯಕ್ತಿಯು ಸಮಾಜ ಪರಿವರ್ತನೆ, ವ್ಯವಸ್ಥಾ ಪರಿವರ್ತನೆಯ ಕಾರ್ಯಗಳನ್ನು ಮಾಡಬೇಕು. ಆ ಮೂಲಕ ರಾಷ್ಟ್ರದ ಪರಮವೈಭವವನ್ನು ಸಾಧಿಸಬೇಕು.”
ಡಾ॥ ಮೋಹನ್ ಭಾಗವತ್
ಆರೆಸ್ಸೆಸ್ ಸರಸಂಘಚಾಲಕ್

Leave a Reply

Your email address will not be published.

This site uses Akismet to reduce spam. Learn how your comment data is processed.