ಲೇಖನ: ರಾಜೇಶ್ ಪದ್ಮಾರ್ , ಪ್ರಾಂತ ಪ್ರಚಾರ ಪ್ರಮುಖ್, ಕರ್ನಾಟಕ ದಕ್ಷಿಣ
ಇಂದು, ಜ್ಯೇಷ್ಠ ಪ್ರಚಾರಕ, ಅಪ್ರತಿಮ ಸಂಘಟಕ, ಮೇರು ಚಿಂತಕ, ಸಿದ್ಧಹಸ್ತ ಲೇಖಕ ಹೊ.ವೆ. ಶೇಷಾದ್ರಿಯವರ ನೂರನೆಯ ಜಯಂತಿಯ (26.5.1926-26.5.2026) ಸಂಭ್ರಮ.
1926 ರ ಮೇ 26ರಂದು ಬೆಂಗಳೂರಿನಲ್ಲಿ ಜನಿಸಿದ ಹೊ.ವೆ. ಶೇಷಾದ್ರಿಯವರು 1942ರಲ್ಲಿ ಸಂಘದ ಸಂಪರ್ಕಕ್ಕೆ ಬಂದರು. ತಮ್ಮ ಎಂ.ಎಸ್ಸಿ ರಸಾಯನಶಾಸ್ತ್ರ ಸ್ನಾತಕೋತ್ತರ ಶಿಕ್ಷಣದ ಬಳಿಕ 1946ರಲ್ಲಿ ಸಂಘದ ಪ್ರಚಾರಕರಾದರು. ಕರ್ನಾಟಕದ ಮೊದಲ ತಂಡದ 3 ಪ್ರಚಾರಕರಾದ ಕೃ. ಸೂರ್ಯನಾರಾಯಣ ರಾವ್, ಚಂಪಕನಾಥ್ ಜತೆಗೆ ಪ್ರಚಾರಕರಾದರು.
1947ರಲ್ಲಿ ಕೋಲಾರ ಜಿಲ್ಲಾ ಪ್ರಚಾರಕ್, 1948ರಲ್ಲಿ ಸಂಘದ ಮೇಲಿನ ನಿಷೇಧದ ವೇಳೆ ಬಂಧನ, 1953ರಲ್ಲಿ ಪ್ರಾಂತಕಾರ್ಯವಾಹ, 1953-1956 ಮಂಗಳೂರು ವಿಭಾಗ ಪ್ರಚಾರಕ್ ಆಗಿ ಹೆಚ್ಚುವರಿ ಹೊಣೆಗಾರಿಕೆ, 1960ರಲ್ಲಿ ಕರ್ನಾಟಕ ಪ್ರಾಂತ ಪ್ರಚಾರಕ್, 1980 ರಲ್ಲಿ ಸಹಕ್ಷೇತ್ರ ಪ್ರಚಾರಕ್, 1981 ದಕ್ಷಿಣ ಕ್ಷೇತ್ರ ಪ್ರಚಾರಕ್, 1983ರಲ್ಲಿ ಅಖಿಲ ಭಾರತೀಯ ಪ್ರಚಾರಕ ಪ್ರಮುಖ್, 1984ರಲ್ಲಿ ಸಹಸರಕಾರ್ಯವಾಹ, 1987-2000 ವರೆಗೆ ಸರಕಾರ್ಯವಾಹ, 2000 ರಲ್ಲಿ ಸಹಸರಕಾರ್ಯವಾಹ, 2003ರಲ್ಲಿ ಅಖಿಲ ಭಾರತೀಯ ಪ್ರಚಾರಕ ಪ್ರಮುಖ್ ಜವಾಬ್ದಾರಿ ನಿರ್ವಹಿಸಿದರು.
2005ರ ಅಗಸ್ಟ್ 14 ರಂದು ಸಂಜೆ 6.57 ಕ್ಕೆ ಇಹಲೋಕ ಯಾತ್ರೆ ಮುಗಿಸಿದರು.
“ಶೇಷಾದ್ರಿಯವರದು ಸೃಜನಶೀಲ, ಸಂವೇದನಾಶೀಲ, ಸ್ಥಿತಪ್ರಜ್ಞ ವ್ಯಕ್ತಿತ್ತ. ಅವರು ವೈಶ್ವಿಕ ವಿಚಾರಗಳ ಪ್ರತಿಪಾದಕ” ಎಂದಿದ್ದರು 5ನೇ ಸರಸಂಘಚಾಲಕರಾಗಿದ್ದ ಕು.ಸೀ. ಸುದರ್ಶನ್ ಜೀ
ಕನ್ನಡದಲ್ಲಿ 30, ಇಂಗ್ಲೀಷ್ ನಲ್ಲಿ 11 – ಒಟ್ಟು 41 ಪುಸ್ತಕಗಳ ಕರ್ತೃ. ಉತ್ಥಾನ, ವಿಕ್ರಮ , ಆರ್ಗನೈಸರ್ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ನೂರಾರು ಲೇಖನಗಳು, ಅಂಕಣಬರಹಗಳು, ಪ್ರೇರಣಾದಾಯಿ ಪತ್ರಸಂದೇಶಗಳ ಮೂಲಕ ನಿರಂತರ ಬರವಣಿಗೆಯ ಕಾರ್ಯ ಹೊ.ವೆ. ಶೇಷಾದ್ರಿಯವರದು.
1982ರಲ್ಲಿ ಹೊ.ವೆ. ಶೇಷಾದ್ರಿಯವರ ತೋರ್ ಬೆರಳ್ ಕೃತಿಗೆ ಕರ್ನಾಟಕ ಸರಕಾರದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿತು. ವೈಚಾರಿಕ ವಲಯದಲ್ಲಿ ಬಹುಪ್ರಶಂಸೆಗೊಳಗಾದ ಪುಸ್ತಕಗಳ ಪೈಕಿ ಒಂದು.
ತಮ್ಮ ಬಿಡುವಿಲ್ಲದ ಪ್ರವಾಸದ ಮಧ್ಯೆಯೂ ಅವಿರತ ಬರವಣಿಗೆಯ ಮೂಲಕ ಸ್ವಯಂಸೇವಕರ ವೈಚಾರಿಕ ಹಂದರವನ್ನು ವಿಸ್ತರಿಸಿ, ಗಟ್ಟಿಗೊಳಿಸಿದವರು. ಸಮಾಜದೊಂದಿಗೆ ಸಂಘದ ಆಶಯಗಳನ್ನು ಹಂಚಿದವರು.
ಪುಸ್ತಕಗಳು:
- 1. ಯುಗಾವತಾರ (1967)
- 2. ತಾಯಿ ಕಾದಿಹಳು (1969)
- 3. ಕ್ರಾಂತಿಯಲ್ಲ ಭ್ರಾಂತಿ (1970)
- 4. ಅಮ್ಮಾ ಬಾಗಿಲು ತೆಗಿ (1970)
- 5. ಶಿವಾಜಿ (1972)
- 6. ಕೋರಿಕೆ (1973)
- 7. ಗುರು ಗೋವಿಂದ ಸಿಂಹ (1974)
- 8. ಭುಗಿಲು (1977)
- 9. ಅಸ್ಸಾಮಿನ ಆರ್ತಸ್ವರ (1980)
- 10. ಮೀನಾಕ್ಷಿಪರಂ – ಒಂದು ಎಚ್ಚರಿಕೆ (1981)
- 11.ತೋರ್ ಬೆರಳು (1981)
- 12. ಆ ಕಾಳರಾತ್ರಿಯ ಪ್ರಶ್ನೆ (1981)
- 13. ಆಧುನಿಕ ಮಾನವ ಜೀವನದ ಕುರುಕ್ಷೇತ್ರದಲ್ಲಿ ಪಾರ್ಥಸಾರಥಿ ಯಾರು? (1982)
- 14. ಮೃಗಜಲ, ನಿಜಜಲ (1983)
- 15. ಭಾರತದಲ್ಲಿ ಕ್ರೈಸ್ತ ಚಟುವಟಿಕೆಗಳು. (1985)
- 16. ಪರಿಪ್ರಶ್ನ (1986)
- 17. ಕೃತಿರೂಪ ಸಂಘದರ್ಶನ (1990)
- 18. ಇದೊಂದೇ ದಾರಿ (1995)
- 19. ವಿಕೃತಿಯಿಂದ ಸಂಸ್ಕೃತಿಯೆಡೆಗೆ (1995)
- 20. ದೇಶ ವಿಭಜನೆಯ ದುರಂತಕಥೆ (1995)
- 21. ನವನಿರ್ಮಾಣದ ಒಳಪದರಗಳು (1996)
- 22.ಚರೈವೇತಿ (1996)
- 23. ಕೈದೀವಿಗೆ (1996)
- 24.ದಿಶಾಬೋಧ (1998)
- 25. ನ್ಯಾಯಿಕ ಆಯೋಗಗಳ ಕಣ್ಣಲ್ಲಿ ಮತಾಂತರ (1999)
- 26. ಸಮರಸತೆಯ ಸವಾಲು (1999)
- 27. ಸಮಾಜಯೋಗ (2001)
- 28. ಹಿಂದು ಸಮಾಜಕ್ಕೆ ಸವಾಲುಗಳು- ಪರಿಹಾರಗಳು (2002)
- 29. ಜಾಗೃತಾತ್ಮರಿಗಾಗಿ (2004)
- 30. ಶ್ರೀ ಗುರೂಜಿ (2005)
- 31. Dr Hegdewar – Epoch Maker (1981)
- 32. Christian Missions in the eyes of Gandhiji (1981)
- 33. Warning of Meenakshipuram (1981)
- 34. The Tragic Story of Partition (1982)
- 35. RSS – A Vision in Action (1988)
- 36. Hindus abroad – The Dilemma: Dollar or Dharma (1990)
- 37. Universal Spirit of Hindu Nationalism (1991)
- 38. The Way (1991)
- 39. Implications of Christian Conversions (1999)
- 40. Yoga – A Science Imperative (2000)
- 41. Sri Guruji (2005)
आज ज्येष्ठ प्रचारक, अप्रतिम संगठक, मेधावी चिंतक तथा सिद्धहस्त लेखक हो. वे. शेषाद्रि जी की जन्मशती (26.5.1926 – 14.8.2005) का पावन अवसर है।
26 मई 1926 को बेंगलुरु में जन्मे हो. वे. शेषाद्रिजी 1942 में संघ के संपर्क में आए। एम.एससी. (रसायनशास्त्र) की शिक्षा पूर्ण करने के पश्चात 1946 में वे संघ के प्रचारक बने। वे कर्नाटक के प्रथम प्रचारक दल के तीन प्रमुख कार्यकर्ताओं — कु. सूर्यनारायण राव तथा चंपकनाथ जी — के साथ प्रचारक जीवन में प्रविष्ट हुए।
1947 में कोलार जिला प्रचारक, 1948 में संघ पर प्रतिबंध के समय कारावास, 1953 में प्रांत कार्यवाह, 1953-1956 तक मंगलूरु विभाग प्रचारक का अतिरिक्त दायित्व, 1960 में कर्नाटक प्रांत प्रचारक, 1980 में सहक्षेत्र प्रचारक, 1981 में दक्षिण क्षेत्र प्रचारक, 1983 में अखिल भारतीय प्रचारक प्रमुख, 1984 में सहसरकार्यवाह तथा 1987 से 2000 तक सरकार्यवाह के रूप में उन्होंने संगठन को नई ऊँचाइयाँ प्रदान कीं। वर्ष 2000 में पुनः सहसरकार्यवाह तथा 2003 में अखिल भारतीय प्रचारक प्रमुख का दायित्व संभाला।
14 अगस्त 2005 को सायं 6:57 बजे उन्होंने अपनी लौकिक यात्रा पूर्ण की।
संघ के पंचम सरसंघचालक कु. सी. सुदर्शन ने उनके विषय में कहा था— “शेषाद्रिजी का व्यक्तित्व सृजनशील, संवेदनशील और स्थितप्रज्ञ था। वे वैश्विक विषयों के गहन विचारक थे।”
हो. वे. शेषाद्रिजी ने कन्नड़ में 30 तथा अंग्रेज़ी में 11 — कुल 41 पुस्तकों की रचना की। ‘उत्थान’, ‘विक्रम’, ‘ऑर्गनाइज़र’ सहित अनेक पत्र-पत्रिकाओं में उनके सैकड़ों लेख, स्तंभ तथा प्रेरणादायी पत्र प्रकाशित हुए। प्रवास की अत्यंत व्यस्त दिनचर्या के मध्य भी उनका लेखन निरंतर चलता रहा।
1982 में उनकी कृति ‘तोर बेरळ’ को कर्नाटक सरकार के कर्नाटक साहित्य अकादमी पुरस्कार से सम्मानित किया गया। यह पुस्तक वैचारिक जगत में अत्यंत प्रशंसित रही।
उन्होंने अपने अखंड प्रवास और सतत लेखन के माध्यम से स्वयंसेवकों के वैचारिक आधार को विस्तृत और सुदृढ़ किया तथा समाज के समक्ष संघ के विचारों और कार्य को प्रभावी रूप से प्रस्तुत किया।















