Mandya January 20: It was a memorable day for RSS unit of Mandya, nearly 2000 Swayamsevaks in Ganavesh attended the RSS Convention. The convention was held as a part of Swami Vivekananda’s 150th birth anniversary. RSS Veteran leader Dr Kalladka Prabhakar Bhat addressed the gathering. RSS Pranth Pracharak Mukunda, Pranth Karyavah N. Thippeswamy Prantha Karyavah, Pranth Sah-Karyavah Prof BV Sridharswamy and several other top functionaries attended the convention. Also, Path Sanchalan, Route-March was held on the occasion in major streets of Mandya, which drew public attention.
ಮಂಡ್ಯ January 20: ರಾಜ್ಯದಲ್ಲಿ ಟಿಪ್ಪು ವಿಶ್ವವಿದ್ಯಾನಿಲಯ ಸ್ಥಾಪನೆಯಿಂದಾಗಿ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡಿದಂತಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಸಂಪರ್ಕ ಪ್ರಮುಖ್ ಡಾ.ಪ್ರಭಾಕರ ಭಟ್ ಕಲ್ಲಡ್ಕ ಎಚ್ಚರಿಕೆ ನೀಡಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಯುವಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು. ಅಲೀಘಡ್ ವಿಶ್ವವಿದ್ಯಾನಿಲಯ ಸ್ವಾತಂತ್ರ್ಯ ಪೂರ್ವದಿಂದಲೂ ದೇಶವಿರೋಧಿ ಚಟುವಟಿಕೆಯಲ್ಲಿ ತೊಡಗಿದೆ. ಇದರೊಂದಿಗೆ ಉಸ್ಮಾನಿಯಾ ವಿಶ್ವವಿದ್ಯಾನಿಲಯವೂ ಸೇರಿಕೊಂಡಿದೆ. ಇದೀಗ ರಾಜ್ಯದಲ್ಲಿ ಅಲ್ಪಸಂಖ್ಯಾತರ ವಿಶ್ವವಿದ್ಯಾನಿಲಯ ಸ್ಥಾಪನೆಯಿಂದಾಗಿ ಭಯೋತ್ಪಾದನಾ ಚಟುವಟಿಕೆ ಹೆಚ್ಚಾಗಲು ಕಾರಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ದೇಶವನ್ನು ವಿಭಜನೆ ಮಾಡುವ, ಧರ್ಮವನ್ನು ಒಡೆಯುವ ಕೆಲಸ ಮಾಡಲು ಹೊರಟಿರುವ ಟಿಪ್ಪು ವಿಶ್ವವಿದ್ಯಾನಿಲಯ ಸ್ಥಾಪನೆ ಸರಿಯಲ್ಲ. ಕೇಂದ್ರ ಸರ್ಕಾರ ದೇಶದ ಹಲವು ಭಾಗಗಳಲ್ಲಿ ಅಲ್ಪಸಂಖ್ಯಾತರ ವಿಶ್ವವಿದ್ಯಾಲಯ ಸ್ಥಾಪಿಸಲು ಮುಂದಾಗಿರುವುದು ದೇಶದ ಆಂತರಿಕ ಭದ್ರತೆಗೆ ಅಪಾಯ ತಂದೊಡ್ಡಲಿದೆ. ಇದು ಸರಿಯಲ್ಲ ಎಂದು ಖಡಾಖಂಡಿತವಾಗಿ ನುಡಿದರು. ಅಲೀಘಡ ವಿಶ್ವವಿದ್ಯಾನಿಲಯ ಹಿಂದೂ ವಿರೋಧಿ ಶಿಕ್ಷಣವನ್ನು ನೀಡುತ್ತಾ ಸಾವಿರಾರು ಪಾಕಿಸ್ತಾನಿ ಜನರನ್ನು ಸೃಷ್ಟಿಸಿದ ಶಿಕ್ಷಣ ಸಂಸ್ಥೆ. ಇಲ್ಲಿ ವ್ಯಾಸಂಗ ಮಾಡಿದ ಮಹಮ್ಮದ್ ಆಲಿ ಜಿನ್ನಾ ಸ್ವಾತಂತ್ರ್ಯಾ ನಂತರದಲ್ಲಿ ಒತ್ತಡ ತಂದು ರಾಷ್ಟ್ರವನ್ನು ತುಂಡರಿಸಿದ್ದ. ಇಂದಿಗೂ ಭಯೋತ್ಪಾದಕರನ್ನು ಸೃಷ್ಟಿ ಮಾಡುತ್ತಿರುವ ಕೇಂದ್ರ ಸ್ಥಾನವಾಗಿದೆ. ಇದನ್ನು ಅರಿಯದ ಕೇಂದ್ರ ಸರ್ಕಾರ ರಾಷ್ಟ್ರದ ಐದು ಕಡೆಗಳಲ್ಲಿ ಅಲೀಘಡ್ ವಿಶ್ವವಿದ್ಯಾಲಯದ ಶಾಖೆ ಗಳನ್ನು ತೆರೆಯಲು ಹೊರಟಿದೆ ಎಂದು ಕಿಡಿಕಾರಿದರು. ಕೇಂದ್ರದ ಮುಂದೆ ಬೇಡಿಕೆ ಇಟ್ಟಿದ್ದೆವಾ?
ಇದೇ ಜಿಲ್ಲೆಯವರಾದ ಕೆ.ರೆಹಮಾನ್ಖಾನ್ ಕೇಂದ್ರದಲ್ಲಿ ಅಲ್ಪಸಂಖ್ಯಾತರ ಇಲಾಖೆ ಸಚಿವರಾದ ನಂತರ ಇಂತಹದೊಂದು ಮಹತ್ಕಾರ್ಯಕ್ಕೆ ನಾಂದಿ ಹಾಡಿದ್ದಾರೆಂದು ವ್ಯಂಗ್ಯವಾಡಿದ ಅವರು, ಮತದ ಹೆಸರಿನಲ್ಲಿ ಅಲ್ಪಸಂಖ್ಯಾತರ ವಿ.ವಿ. ಸ್ಥಾಪನೆ ಮಾಡಲು ಇವರನ್ನು ಕೇಳಿದವರು ಯಾರು? ನಾವೇನು ಅಲ್ಪಸಂಖ್ಯಾತರ ವಿ.ವಿ. ಸ್ಥಾಪನೆ ಮಾಡುವಂತೆ ಹೋರಾಟ ನಡೆಸಿದ್ದೇವಾ? ಕೇಂದ್ರದ ಮುಂದೆ ಬೇಡಿಕೆ ಇಟ್ಟಿದ್ದೆವಾ? ಅಲ್ಪಸಂಖ್ಯಾತರ ವಿ.ವಿ. ಸ್ಥಾಪನೆ ಹಿಂದೆ ದೇಶವನ್ನು ಮತ್ತೊಮ್ಮೆ ವಿಭಜನೆ ಮಾಡುವ ಹುನ್ನಾರವಾಗಿದೆ. ಮುಂದೆ ಸ್ಥಾಪನೆಯಾಗಲಿರುವ ಅಲ್ಪಸಂಖ್ಯಾತರ ವಿವಿಗಳಲ್ಲಿ ಇನ್ನಷ್ಟು ಭಯೋತ್ಪಾದಕರು ಸೃಷ್ಟಿಯಾಗಲಿದ್ದಾರೆ ಎಂದ ಅವರು, ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಅಲ್ಪಸಂಖ್ಯಾತರ ವಿ.ವಿ.ಗೆ ಮತಾಂಧ, ದೇಶದ್ರೋಹಿ ಟಿಪ್ಪು ಹೆಸರಿಡಲು ಮುಂದಾಗುವುದರೊಂದಿಗೆ ಅಧಿಕಾರಕ್ಕಾಗಿ ರಾಷ್ಟ್ರದ್ರೋಹಿಗಳನ್ನು ಮೆರೆಸುವ ಕೆಲಸಕ್ಕೆ ಆಳುವ ಸರ್ಕಾರಗಳು ಮಾಡುತ್ತಿವೆ ಎಂದು ಕಿಡಿಕಾರಿದರು.
ಹಿಂದೂ ದ್ರೋಹಿಯಾಗಿದ್ದ ಟಿಪ್ಪು ರಾಜ್ಯದ ನಾನಾ ಭಾಗಗಳಲ್ಲಿನ ಹಿಂದೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೆ, ಬಲವಂತವಾಗಿ ಮತಾಂತರ ಮಾಡಿದ್ದ. ಇಂತಹ ವ್ಯಕ್ತಿಯನ್ನು ಹೋರಾಟಗಾರ ಎಂದು ಬಿಂಬಿಸುತ್ತಿರುವುದು ನಾಚಿಕೆಗೇಡಿನ ವಿಚಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಆದಿ ಚುಂಚನಗಿರಿಯ ಕೊಮ್ಮೇರಹಳ್ಳಿ ಶಾಖಾಮಠದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ವಹಿಸಿದ್ದರು. ಕರ್ನಾಟಕ ಪ್ರಾಂತ ಸಂಘ ಸಂಚಾಲಕ ಮಾ.ವೆಂಕಟರಾವ್, ಮೈಸೂರು ವಿಭಾಗ ಸಂಘ ಸಂಚಾಲಕ ವಾಮನರಾವ್, ಪ್ರಾಂತ ಪ್ರಚಾರಕ್ ಮುಕುಂದ , ಸಹ ಪ್ರಾಂತ ಕಾರ್ಯವಾಹ ಶ್ರೀಧರ ಸ್ವಾಮಿ, ಸಂಘದ ಹಿರಿಯ ಪ್ರಚಾರಕ್ ಕಾ.ಶಿ.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೂ ಮೊದಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಗಂಗಾ, ಯಮುನಾ, ಸರಸ್ವತಿ ಹೀಗೆ ಮೂರೂ ವಾಹಿನಿಗಳಾಗಿ ಸ್ವಯಂಸೇವಕರು ಶಿಸ್ತು ಬದ್ಧವಾಗಿ ಹೆಜ್ಜೆಹಾಕುತ್ತಾ ಮುಖ್ಯ ವೇದಿಕೆಯತ್ತ ಬಂದ ದೃಶ್ಯ ಆಕರ್ಷಕವಾಗಿತ್ತು.