ಆರೆಸ್ಸೆಸ್ ವಾರ್ಷಿಕ ಮಹಾಸಭೆ ಅಖಿಲ ಭಾರತೀಯ ಪ್ರತಿನಿಧಿ ಸಭಾ-2026 ಸಂಪನ್ನ
ಮಾರ್ಚ್ 15, 2026 ಸಮಾಲ್ಖಾ ಹರಿಯಾಣ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂರು ದಿನಗಳ ನೀತಿ ನಿರೂಪಕ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಮೂರನೇ ದಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಹರಿಯಾಣದ ಸಮಾಲ್ಖಾದ ಈ ಪರಿಸರದಲ್ಲಿ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭಾ ಎರಡನೇ ಬಾರಿಗೆ ನಡೆಯುತ್ತಿದೆ. ಒಟ್ಟು 1487 ಅಪೇಕ್ಷಿತರಿದ್ದರು. ದೇಶದಾದ್ಯಂತ 46 ಪ್ರಾಂತಗಳಿಂದ ಇಲ್ಲಿಗೆ ಆಗಮಿಸಿದ್ದರು. ಸಂಘದ ಕಾರ್ಯವಿಸ್ತಾರ ಮತ್ತು ಈ ವರ್ಷ ವಿಶೇಷವಾಗಿ ಸಂಘದ ಶತಾಬ್ದಿಯ ನಿಮಿತ್ತ ನಡೆದ ಕಾರ್ಯಕ್ರಮಗಳ ಕುರಿತು ವಿಶೇಷ ರೂಪದಲ್ಲಿ ವಿಚಾರ ವಿನಿಮಯ ನಡೆಯಿತು.
ಕಾರ್ಯವಿಸ್ತಾರ: ಸಂಘಟನಾತ್ಮವಾಗಿ ಎರಡು ವಿಷಯಗಳು ಮತ್ತು ಸಮಾಜದ ಕುರಿತಾದ 3 ವಿಷಯಗಳನ್ನು ಇಲ್ಲಿ ಚರ್ಚಿಸಲಾಯಿತು. ಈಗ ಪ್ರಸ್ತುತ 88949 ಶಾಖೆಗಳಿವೆ. ಸಂಘದ ಶಾಖೆ ಎಲ್ಲಿರುವುದೋ ಅಲ್ಲಿಗೆ ಬರುವ ಸ್ವಯಂಸೇವಕರು ದೇಶವನ್ನು ಏಕಾತ್ಮ ದೃಷ್ಟಿಯಿಂದ ನೋಡುತ್ತಾನೆ. ಜಾತಿ ಸಮುದಾಯಗಳ ಕುರಿತು ಮಾತ್ರ ಯೋಚಿಸದೇ ಸಂಪೂರ್ಣ ಸಮಾಜದ ಕುರಿತು ಯೋಚಿಸುವುದು ಅವನ ದೃಷ್ಟಿಯಾಗುತ್ತದೆ. ಸಮಾಜಕ್ಕೆ ನಾನು ಏನಾದರೂ ನೀಡಬೇಕು ಎಂಬ ಮನೋಭಾವವನ್ನು ಬೆಳೆಸಿಕೊಳ್ಳುತ್ತಾನೆ. ಹಾಗಾಗಿ ಸಂಘಟನಾತ್ಮಕವಾಗಿ ಒಂದೊಂದು ಶಾಖೆ ಹೆಚ್ಚಾದರೆ ಕೇವಲ ಸಂಘದ ಶಾಖೆಯ ಸಂಖ್ಯೆ ಹೆಚ್ಚಾದಂತಲ್ಲ, ಬದಲಾಗಿ ದೇಶದ ಕುರಿತು ಯೋಚಿಸುವವರ ಸಂಖ್ಯೆ ಹೆಚ್ಚಾಗಿದೆ ಎಂದರ್ಥ. ಕೇವಲ ಕಾರ್ಯದ ವಿಸ್ತಾರವಾದರೇ ಸಾಲದು, ಬದಲಾಗಿ ಕಾರ್ಯಕರ್ತರ ಗುಣಾತ್ಮಕ ವಿಕಾಸವೂ ಆಗಬೇಕೆಂಬುದು ನಮ್ಮ ಗುರಿ. ಈ ಕಾರ್ಯವನ್ನು ನಾವು ಮುಂದುವರೆಸುತ್ತೇವೆ. ವಸತಿಗಳಲ್ಲಿ ಇಂತಹ ಕಾರ್ತಯಕರ್ತರ ನಿರ್ಮಾಣವಾಗಬೇಕು ಎನ್ನುವುದು ಕಳೆದ 100 ವರ್ಷಗಳ ನಮ್ಮ ಪ್ರಯತ್ನವಾಗಿದೆ ಎಂದರು.

ಸಮಾಜದ ಕುರಿತು ಮೂರು ವಿಷಯಗಳು: ಸಮಾಜದ ದೃಷ್ಟಿಯಿಂದ ಸಮಾಜದ ಎದುರು ಪಂಚಪರಿವರ್ತೆಯನ್ನು (ಕುಟುಂಬ ಪ್ರಬೋಧನ, ಪರಿಸರ ಸಂರಕ್ಷಣೆ, ಸಾಮಾಜಿಕ ಸಾಮರಸ್ಯ, ಸ್ವದೇಶಿ ಭಾವ ಜಾಗರಣ ಮತ್ತು ನಾಗರಿಕ ಶಿಷ್ಟಚಾರ) ಇಟ್ಟಿದ್ದೆವು. ಎರಡನೇಯದು ಭಾರತದ ಇತಿಹಾಸ, ಸಂಸ್ಕೃತಿ, ಜನಜೀವನ, ಜ್ಞಾನ ಪರಂಪರೆಯ ಕುರಿತು ಸರಿಯಾದ ವಿಮರ್ಶೆ (ಕಥನ) (Right and Proper Narrative) ದೇಶದಲ್ಲಿ ಮತ್ತು ವಿಶ್ವದಲ್ಲಿ ಆಗಬೇಕು. ಈ ದೃಷ್ಟಿಯಿಂದ ದೇಶದ ಯೋಚನೆಯಲ್ಲಿ, ವಿಶ್ವವಿದ್ಯಾನಿಲಯಗಳಲ್ಲಿ, ಪಠ್ಯಪುಸ್ತಕಗಳಲ್ಲಿ, ಅಂಕಣಗಳು ಮತ್ತು ಮಾಧ್ಯಮಗಳಲ್ಲಿ ಸರಿಯಾದ ವಿಚಾರ ಬರಬೇಕು. ನಮ್ಮ ದೇಶದಲ್ಲಿ ಆಂಗ್ಲರ ಆಡಳಿತದ ಸಂದರ್ಭದಲ್ಲಿ ಮತ್ತು ಅದರ ನಂತರವೂ ಕೂಡ ಕೆಲವು ಸಮಯ ನಮ್ಮ ಮಾನಸಿಕತೆ, ವಸಾಹತೀಕರಣಕ್ಕೆ ಒಳಗಾಯಿತು. ಹಾಗಾಗಿ ಮಾನಸಿಕತೆಯ ನಿರ್ವಸಾಹತೀಕರಣ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಭಾರತೀಯತೆ ಎಂದರೇನು? ಹಿಂದುತ್ವ ಎಂದರೇನು? ಅದು ಕೇವಲ ಸಿದ್ಧಾಂತ ಅಥವಾ ಆಧ್ಯಾತ್ಮಿಕ ವಿಚಾರವಲ್ಲ, ಅದು ಜೀವನ ಶೈಲಿಯಾಗಿದೆ ಎನ್ನುವುದನ್ನು ವಿವೇಕಾನಂದರು, ದಯಾನಂದ ಸರಸ್ವತಿ ಸೇರಿದಂತೆ ಅನೇಕರು ತಿಳಿಸಿದ್ದಾರೆ. ನಾವು ಅವರನ್ನು ಸ್ಮರಿಸುತ್ತೇವೆ ಕೂಡ. ಭಾರತೀಯ ಕಥನ ವಿಶ್ವಕ್ಕೆ ಅವಶ್ಯವಾದ ಒಂದು ಚಿಂತನೆಯೆನ್ನುವುದನ್ನು ತಿಳಿಸಬೇಕಿದೆ. ಉದಾಹರಣೆಗೆ ಜಿ20ಯಲ್ಲಿ ಭಾರತದ ಧ್ಯೇಯ ವಾಕ್ಯ ಒಂದು ಪೃಥ್ವಿ, ಒಂದು ಪರಿವಾರ, ಒಂದು ಭವಿಷ್ಯ ಎನ್ನುವುದನ್ನು ಭಾರತದ ಕಥನ. ಅಂತಹ ಸಂಗತಿಗಳನ್ನು ವಿವಿಧ ರೀತಿಯಲ್ಲಿ ವಿಸ್ತರಿಸಬಹುದು ಎಂದು ನುಡಿದರು.
ಮೂರನೇ ವಿಷಯ ಸಜ್ಜನಶಕ್ತಿಯ ಕುರಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಮಾತ್ರ ದೇಶಭಕ್ತರು ಎಂದು ನಾವು ಎಂದೂ ಹೇಳುವುದಿಲ್ಲ. ದೇಶದಲ್ಲಿ, ಸಮಾಜದಲ್ಲಿ ದೇಶ ಮತ್ತು ಸಮಾಜಕ್ಕಾಗಿ ಕಾರ್ಯಮಾಡುವುದಕ್ಕಾಗಿ ತಮ್ಮ ಸಮಯ, ಬುದ್ಧಿ, ಧನ, ಪ್ರತಿಭೆಯನ್ನು ಉಪಯೋಗಿಸಿ ಒಟ್ಟಿಗೆ ಕೆಲಸ ಮಾಡಲು ಬಯಸುವವರು ತುಂಬ ಮಂದಿ ದೇಶಾದ್ಯಂತ ಇದ್ದಾರೆ. ಅಂತಹ ಸಜ್ಜನಶಕ್ತಿಯ ಸಹಯೋಗದೊಂದಿಗೆ ದೇಶದ ಸರಿಯಾದ ಕಥನವನ್ನು ಪ್ರಸ್ತುತಪಡಿಸಲು, ಪಂಚಪರಿವರ್ತನೆಯನ್ನು ಅನುಷ್ಠಾನಗೊಳಿಸಲು, ದೇಶದ ದೃಷ್ಟಿಯಿಂದ ಸಜ್ಜನಶಕ್ತಿ ಒಂದಾಗಬೇಕಿದೆ. ದಿ ಪವರ್ ಆಫ್ ದಿ ಗುಡ್ ಅದರ ಪ್ರಭಾವವನ್ನು ತೋರಬೇಕಿದೆ, ಇಲ್ಲವಾದರೆ ದಿ ಪವರ್ ಆಫ್ ದಿ ಬ್ಯಾಡ್ ಸಮಾಜವನ್ನು ಆಳುತ್ತದೆ. ಈ ದೃಷ್ಟಿಯಿಂದ ಶತಾಬ್ದಿ ವರ್ಷದಲ್ಲಿ ಪ್ರಮುಖ ನಾಗರಿಕ ಗೋಷ್ಠಿ, ಹಿಂದು ಸಮ್ಮೇಳನದಂತಹ ಕಾರ್ಯಕ್ರಮದಲ್ಲಿ ಗ್ರಾಮಸ್ತರದಲ್ಲಿ, ನಗರಸ್ತರದಲ್ಲಿ ಎಲ್ಲಾ ಮಂದಿ ಜೊತೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಅನೇಕ ಮಂದಿ ಸಾಧು ಸಂತರು ತಮ್ಮ ಬೆಂಬಲವನ್ನು ಈ ಕಾರ್ಯಕ್ಕೆ ಸೂಚಿಸಿದ್ದಾರೆ, ಮಾರ್ಗದರ್ಶನ ನೀಡಿದ್ದಾರೆ. ಸಂಘದ ಪದಾಧಿಕಾರಿಗಳು, ಮಾತೃಶಕ್ತಿಯೂ ಈ ಕಾರ್ಯಕ್ರಮಗಳಲ್ಲಿ ಮಾರ್ಗದರ್ಶನ ಮಾಡಿದ್ದಾರೆ ಎಂದರು.

ಶತಾಬ್ದಿ ವರ್ಷ ಇನ್ನೂ 2026ರ ವಿಜಯದಶಮಿಯವರೆಗೆ ಇರುವುದರಿಂದ ಯುವಕರ ಕಾರ್ಯಕ್ರಮ ಇನ್ನೂ ಕೆಲವು ಪ್ರಾಂತಗಳಲ್ಲಿ ನಡೆಯಬೇಕಿದೆ. ಆದ್ದರಿಂದ ಯುವಕರ ಕೇಂದ್ರಿತವಾದ ಕಾರ್ಯಕ್ರಮಗಳು, ಪ್ರಾಂತಗಳ ಸಂವಾದ, ಯುವ ಪ್ರತಿಭೆಗಳ ಗುರುತಿಸುವಿಕೆ, ವಿವಿಧ ಚಟುವಟಿಕೆಗಳು, ಪಂಚಪರಿವರ್ತನೆಯ ವಿಷಯಗಳನ್ನು ಪ್ರಯೋಗಿಸಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಕ್ಕೆ ಸಹಕಾರಿಯಾಗುವಂತೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂಘಟನಾತ್ಮಕ ದೃಷ್ಟಿಯಿಂದಲೂ ಯುವಕರ ಏಕತ್ರೀಕರಣದಂತಹ ಪ್ರಯತ್ನಗಳು ನಡೆದಿವೆ ಎಂದು ಹೇಳಿದರು.
ವಿಶೇಷವಾಗಿ ಅಂಡಮಾನ್ ನ ಪೋರ್ಟ್ ಬ್ಲೇರ್ ನಲ್ಲಿ ಶತಾಬ್ದಿಯ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ಭಾಗವಹಿಸಿದ್ದರು. 9 ದ್ವೀಪಗಳಿಂದ ಆ ಕಾರ್ಯಕ್ರಮಕ್ಕೆ ಗಣ್ಯರು ಆಗಮಿಸಿದ್ದರು. 13000 ಮಂದಿ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅರುಣಾಚಲ ಪ್ರದೇಶದ ಗುಡ್ಡಗಾಡು ಪ್ರದೇಶಗಳಲ್ಲಿ ನಡೆದ 21 ಕಾರ್ಯಕ್ರಮಗಳಲ್ಲಿ 37,000 ಕ್ಕೂ ಹೆಚ್ಚುಮಂದಿ ಭಾಗವಹಿಸಿದ್ದರು ಎಂದರು.
ತೇಗಬಹದ್ದೂರ್ ಅವರ 350ನೇ ವರ್ಷದ ಪುಣ್ಯಸ್ಮರಣೆ, ವಂದೇ ಮಾತರಂ ನ 150ನೇ ವರ್ಷದ ಕಾರ್ಯಕ್ರಮಗಳು ದೇಶಾದ್ಯಂತ ನಡೆದವು. ಎಲ್ಲವೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಸರಿಂದ ಆಗಲಿಲ್ಲ, ಸ್ವಯಂಸೇವಕರ ಪ್ರಯತ್ನದಿಂದ ನಡೆದಿವೆ. ಕೆಲವು ಸ್ಥಾನೀಯ ಸಂಸ್ಥೆಗಳ ಸಹಾಯದಿಂದ ಆಯೋಜಿಸಲಾಗಿದೆ. 2134 ಗುರುತೆಗಬಹದ್ದೂರ್ ಅವರ ಕಾರ್ಯಕ್ರಮಗಳು 18 ಪ್ರಾಂತಗಳಲ್ಲಿ ಮಾಡಲಾಗಿದೆ. 7 ಲಕ್ಷ ಜನ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ವಿಶೇಷವಾಗಿ ಸಾಧು ಸಂತರನ್ನು ಈ ಕಾರ್ಯಕ್ರಮಕ್ಕಾಗಿ ಸಂಪರ್ಕಿಸಲಾಗಿತ್ತು. ಗುರು ತೇಗಬಹದ್ದೂರರು ಇಡೀ ದೇಶಕ್ಕೆ ಗುರು. ಅದರ ಜೊತೆಗೆ ಸಂತ ಶಿರೋಮಣಿ ರವಿದಾಸರ 650ನೇ ವರ್ಷದ ಜಯಂತಿ ಕಾರ್ಯಕ್ರಮದ ಕುರಿತಾದ ಹೇಳಿಕೆಯನ್ನು ನೀಡಲಾಗಿದೆ. ಗುರುವಿನ ಸ್ಮರಣೆ ಮಾಡುವುದು ಮತ್ತು ಸಂತರ ಶ್ರದ್ದೆಯಿಂದ ನೋಡುವುದು, ರಾಷ್ಟ್ರವನ್ನು ಒಂದಾಗಿ ಇಡುವಂತೆ ಮಾಡುತ್ತದೆ. ಈ ಮಹಾನ್ ಪುರುಷರ ಕಾರ್ಯ, ಧರ್ಮದ ದೃಷ್ಟಿಯಿಂದ ಸಮಾಜದ ದೃಷ್ಟಿಯಿಂದ ಅವರ ಜೀವನದ ಮೌಲ್ಯಗಳು ನಮಗೆ ಪ್ರೇರಣೆಯನ್ನು ನೀಡುತ್ತದೆ ಎಂದರು.

ವರ್ಗಗಳು: ಮುಂಬರುವ ದಿನಗಳಲ್ಲಿ 63 ಕಡೆಗಳಲ್ಲಿ ಸಂಘ ಶಿಕ್ಷಾ ವರ್ಗಗಳುನ ನಡೆಯಲಿವೆ. ಕ್ಷೇತ್ರೀಯ ಮಟ್ಟದ ವರ್ಗಗಳು 11 ನಡೆಯಲಿವೆ. ಅಖಿಲ ಭಾರತೀಯ ಸ್ತರದಲ್ಲಿ 1 ವರ್ಗ ಸೇರಿದಂತೆ ಒಟ್ಟು 75 ವರ್ಗಗಳು ನಡೆಯಲಿವೆ. ಕೆಲವು ವರ್ಗಗಳು 15 ದಿನಗಳದ್ದಾದರೆ, ಇನ್ನೂ ಕೆಲವು 21 ದಿನಗಳದ್ದಾಗಿವೆ.
ಸಂಘದ ದೃಷ್ಟಿಯಿಂದ ಕಾರ್ಯಕರ್ತರು ಗೋಸೇವಾ, ಗ್ರಾಮವಿಕಾಸದಂತಹ ಕಾರ್ಯಗಳನ್ನು ಮಾಡುತ್ತಿದ್ದಾರೆ. ಗ್ರಾಮಗಳಲ್ಲಿ ಗೋಸೇವಾ ಕಾರ್ಯ ಮಾಡಬಹುದು ಆದರೆ ನಗರಗಳಲ್ಲಿ ಹೇಗೆ ಸಾಧ್ಯ ಎನ್ನುವಬ ಪ್ರಶ್ನೆ ನಮ್ಮಲ್ಲಿ ಮೂಡಬಹುದು. ನಗರಗಳಲ್ಲಿ ವಾಸ ಮಾಡುವ ನಾಗರಿಕರು ತಮ್ಮ ಮನೆಯ ಮಹಡಿಯ ಮೇಲೆ ಚಿಕ್ಕ ತೋಟವನ್ನು ಮಾಡಿ ಅದಕ್ಕೆ ಗೋ ಆಧಾರಿತ ದೇಸೀ ವಸ್ತುಗಳನ್ನು ಉಪಯೋಗಿಸುವ ಮೂಲಕಗೋಸೇವಾ ಕಾರ್ಯಕ್ಕೆ ಕೈ ಜೋಡಿಸಬಹುದು. ದೇಶಾದ್ಯಂತ ಅನೇಕ ವ್ಯಕ್ತಿಗಳು ಕಾರ್ಯನಿರತರಾಗಿದ್ದಾರೆ. ತಮ್ಮ ಮನೆಗಳಲ್ಲಿ, ವಿದ್ಯಾಲಯಗಳಲ್ಲಿ, ಕಛೇರಿಗಳಲ್ಲಿ ಪರಿಸರ ಪೂರಕ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದಕ್ಕೆ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಪ್ರಶ್ನೋತ್ತರ
ಸಂಘಟನಾತ್ಮಕ ಬದಲಾವಣೆ: ‘ಶತಾಬ್ದಿ ವರ್ಷದ ನಂತರ ಸಂಘದ ಭೌಗೋಳಿಕ ರಚನೆಯಲ್ಲಿ “ಪ್ರಾಂತ” ರಚನೆಯ ಬದಲು ಇನ್ನೂ ಚಿಕ್ಕಘಟಕವಾಗಿರುವ “ಸಂಭಾಗ” (Sambhaga) ರಚನೆಯಾಗಲಿದೆ. ಹೆಚ್ಚು ವಿಕೇಂದ್ರೀಕರಣಕ್ಕೆ (Decentralisation) ಗೆ ಗಮನ ನೀಡಲಾಗಿದೆ. ದೇಶಾದ್ಯಂತ ಸಂಘಕಾರ್ಯ ವಿಸ್ತಾರವಾಗಿರುವುದರ ಹಿನ್ನೆಲೆಯಲ್ಲಿ ಸಹಜವಾಗಿಯೇ ವಿಕೇಂದ್ರೀಕರಣದ ಅಗತ್ಯವನ್ನು ಗಮನದಲ್ಲಿರಿಸಿ ಈ ಪರಿವರ್ತನೆ ಮಾಡಲಾಗಿದೆ ಎಂದರು.
ಪ್ರಸ್ತುತ ಯುದ್ಧದ ಕುರಿತು ನಿಲುವು: ಈ ಆಗುತ್ತಿರುವ ಯುದ್ಧದ ಕುರಿತು ಸಂಘಕ್ಕೆ ಯಾವುದೇ ನಿಲುವಿಲ್ಲ. ಆದರೆ ವಿಶ್ವದಲ್ಲಿ ಶಾಂತಿ ನೆಲೆಸಬೇಕು. ಭಾರತದ ಸಮಾಜ ಈ ದೃಷ್ಟಿ ಮತ್ತು ಪ್ರಯತ್ನ ರಬೆಕು. ಭಾಗ್ಯನಗರ(ಹೈದರಾಬಾದ್)ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ 71 ದೇಶಗಳ ಪ್ರತಿನಿಧಿಗಳಿಗೆ ನೀವು ಯಾವ ದೇಶಗಳಲ್ಲಿ ಇದ್ದೀರಿ, ಅಲ್ಲಿನ ಆಹಾರವನ್ನು ಸೇವಿಸುತ್ತೀರಿ ಆದ್ದರಿಂದ ಆ ದೇಶವನ್ನು ಸಮರ್ಥಗೊಳಿಸುವುದೂ ನಿಮ್ಮ ಕರ್ತವ್ಯವಾಗಿದೆ ಎಂದು ನಾವು ತಿಳಿಸಿದೆವು. ಇದು ವಿಶ್ವ ಕುಟುಂಬವೆಂಬ ಹಿಂದುತ್ವದ ದೃಷ್ಟಿಯಾಗಿದೆ. ನೀವು ಭಾರತೀಯ ಮೂಲದವರಾಗಿ ಭಾರತಕ್ಕೆ ಮಾತ್ರ ನಿಷ್ಠರಾಗಿರದೆ, ನೀವು ನೆಲೆಸಿರುವ ದೇಶಗಳಲ್ಲಿನ ಕರ್ತವ್ಯಗಳನ್ನೂ ನೀವು ಪಾಲನೆ ಮಾಡಬೇಕು. ವಿಶ್ವ ಶಾಂತಿ ನಮ್ಮ ದೃಷ್ಟಿ. ಅನೇಕ ಕಾರಣಗಳಿಂದ ಯುದ್ಧಗಳು ನಡೆಯುತ್ತವೆ. ಆದರೆ ಆದಷ್ಟು ಬೇಗ ಅದು ಮುಕ್ತಾಯವನ್ನು ಕಂಡು, ಅಲ್ಲಿನ ಜನಜೀವನ ಸುಖ ಶಾಂತಿಯಲ್ಲಿ ನೆಲಸಬೇಕು ಎನ್ನುವುದು ನಮ್ಮ ಅಪೇಕ್ಷೆ. ಭಾರತದ ಸರ್ಕಾರ ಭಾರತದ ದೃಷ್ಟಿಯಿಂದ ಯಾವುದು ಹಿತಕಾರಿಯೋ ಅದನ್ನು ಮಾಡುವುದಕ್ಕಾಗಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತದೆ ಎಂಬ ವಿಶ್ವಾಸವಿದೆ. ಸರ್ಕಾರದಲ್ಲಿರುವ ಸಚಿವರು ವಿಶ್ವದ ದೇಶಗಳೊಂದಿಗೆ ಸಂಬಂಧ, ಸಂಪರ್ಕ, ವಾಣಿಜ್ಯ, ವ್ಯವಹಾರ, ಸುರಕ್ಷತೆಯ ಕುರಿತು ಮಾತುಕತೆ ನಡೆಸುವುದರ ಜೊತೆಗೆ ರಾಷ್ಟ್ರ ಮೊದಲು ಎಂಬ ಪ್ರಧಾನ ಆಸಕ್ತಿ ಆಧಾರಿತವಾಗಿ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್, ಸಹ ಪ್ರಚಾರ ಪ್ರಮುಖರಾದ ನರೇಂದ್ರ ಠಾಕೂರ್ ಮತ್ತು ಪ್ರದೀಪ್ ಜೋಶಿ ಉಪಸ್ಥಿತರಿದ್ದರು.





