ಬೆಂಗಳೂರು, 25 ಜೂನ್ 2026: ಭಾರತೀಯ ಶಿಕ್ಷಣ ಮಂಡಲದ ಅಖಿಲ ಭಾರತೀಯ ಬೈಠಕ್ ಆರ್ಟ್ ಆಫ್ ಲಿವಿಂಗ್ ಇಂಟರ್ನ್ಯಾಷನಲ್ ಸೆಂಟರ್ ನಲ್ಲಿ ಜರಗಿತು. ಬೈಠಕ್ ನಲ್ಲಿ ದೇಶದ ವಿವಿಧ ಪ್ರಾಂತಗಳ ಕಾರ್ಯಕಾರಿಣಿ ಸದಸ್ಯರು ಮತ್ತು ಪ್ರಮುಖ ಜವಾಬ್ದಾರಿಯುತ ಕಾರ್ಯಕರ್ತರು ಭಾಗವಹಿಸಿದ್ದರು. ಸಂಘಟನೆಯ ಮುಂದಿನ ಕಾರ್ಯ ಮತ್ತು ಯೋಜನೆಗಳ ಕುರಿತು ವಿಸ್ತೃತ ವಿಚಾರ ವಿಮರ್ಶೆ ನಡೆಯಲಿದೆ. ಬೈಠಕ್ ನ ಪ್ರಮುಖ ವಿಷಯ ಸಂಘಶತಾಬ್ದಿ ವರ್ಷದಲ್ಲಿ ಭಾರತೀಯ ಶಿಕ್ಷಣ ಮಂಡಲದ ಕಾರ್ಯಯೋಜನೆ, ಪಂಚಪರಿವರ್ತನೆಯ ವಿವಿಧ ಆಯಾಮ, ವಿಷನ್ – 2030, ಶೈಕ್ಷಣಿಕ ಗತಿವಿಧಿಯ ವಿಸ್ತರಣೆ ಸೇರಿದಂತೆ ವಿಭಿನ್ನ ಯೋಜನೆಗಳ ಕುರಿತು ಚರ್ಚೆ ನಡೆಯಿತು.

ಸಭೆಯಲ್ಲಿ ಅಖಿಲ ಭಾರತೀಯ ಅಧ್ಯಕ್ಷ ಪ್ರೊ.ಸಚ್ಚಿದಾನಂದ ಜೋಶಿ, ಕಾರ್ಯಕಾರಿ ಅಧ್ಯಕ್ಷ ಪ್ರೊ.ಸುಹಾಸ್ ಪೆಡ್ನೇಕರ್, ಅಖಿಲ ಭಾರತೀಯ ಮಹಾಮಂತ್ರಿ ಪ್ರೊ. ಭರತ್ ಶರಣ್ ಸಿಂಗ್, ಅಖಿಲ ಭಾರತೀಯ ಸಂಘಟನಾ ಮಂತ್ರಿ ಬಿ.ಆರ್. ಸಂಘಟನಾ ಮಂತ್ರಿ ಬಿ.ಆರ್.ಶಂಕರಾನಂದ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡಿದರು.
ಜೂನ್ 26, 2026 ಶುಕ್ರವಾರದಿಂದ ಮೂರು ದಿನಗಳ ರಾಷ್ಟ್ರೀಯ ಶಿಕ್ಷಣ ನೀತಿ – 2020ರ ಕಾರ್ಯನಿರ್ವಹಣೆ, ಭಾರತೀಯ ಜ್ಞಾನ ಪದ್ಧತಿಯ ಸಂಯೋಜನೆ ಕುರಿತ ರಾಷ್ಟ್ರೀಯ ಸಮ್ಮೇಳನ ನಡೆಯಲಿದ್ದು ಕರ್ನಾಟಕದ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹಲೋತ್ ಉದ್ಘಾಟಿಸಲಿದ್ದಾರೆ.
