ಬೆಂಗಳೂರು: ಸಂಸ್ಕಾರ ಭಾರತಿ ವತಿಯಿಂದ ಫೆಬ್ರವರಿ 1 ರಿಂದ 4, 2024ರವರೆಗೆ ಆರ್ಟ್ ಆಫ್ ಲಿವಿಂಗ್ ನಲ್ಲಿ ಆಯೋಜಿಸಲಾಗುತ್ತಿರುವ ಅಖಿಲ ಭಾರತೀಯ ಕಲಾಸಾಧಕ ಸಂಗಮ – 2024 ನಿಮಿತ್ತ ಚಾಮರಾಜಪೇಟೆಯ ರಾಷ್ಟ್ರೋತ್ಥಾನ ಪತಿಷತ್ ನಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಸಂಸ್ಕಾರ ಭಾರತಿಯ ಅಖಿಲ ಭಾರತೀಯ ಮಹಾಮಂತ್ರಿ ಅಶ್ವಿನ್ ದಳ್ವಿ, ಸಂಸ್ಕಾರ ಭಾರತಿಯ ಕರ್ನಾಟಕ ಪ್ರಾಂತ ಅಧ್ಯಕ್ಷ ಸುಚೇಂದ್ರ ಪ್ರಸಾದ್, ಪ್ರಾಂತ ಕೋಶಾಧ್ಯಕ್ಷ ಜಗದೀಶ್ ಟಿ ಆರ್ ಮಾತನಾಡಿದರು.

ಪತ್ರಿಕಾಗೋಷ್ಠಿಯ ಸಾರಾಂಶ

ಭಾರತೀಯ ಕಲಾಸಾಧಕರ ಏಕತ್ರೀಕರಣದ ಕಾರ್ಯವನ್ನು ಮುನ್ನಡೆಸುವ ದೃಷ್ಟಿಯಿಂದ, ‘ಸಂಸ್ಕಾರ ಭಾರತಿ’ಯು “ಅಖಿಲ ಭಾರತೀಯ ಕಲಾಸಾಧಕ ಸಂಗಮ” ಕಾರ್ಯಕ್ರಮವನ್ನು ಸಾಮಾಜಿಕ ಸಮರಸತೆ” ವಿಷಯದ ಅಡಿಯಲ್ಲಿ ಶ್ರೀ ಶ್ರೀ ರವಿಂಶಂಕರ್ ಗುರೂಜೀ ಅವರ ‘ಆರ್ಟ್ ಆಫ್ ಲಿವಿಂಗ್ ಅಂತರಾಷ್ಟ್ರೀಯ ಕೇಂದ್ರ’ದಲ್ಲಿ ಬರುವ ಫೆಬ್ರುವರಿ 1 ರಿಂದ 4ರ ವರೆಗೆ  ಆಯೋಜಿಸಲಾಗಿದೆ.

ಫೆಬ್ರುವರಿ 1ರಂದು ಜರಗುವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮೈಸೂರಿನ ಮಹಾರಾಜ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಘನ ಉಪಸ್ಥಿತಿಯೊಂದಿಗೆ, ಖ್ಯಾತ ಲೋಕಕಲಾ ಕಲಾವಿದೆ ಪದ್ಮಶ್ರೀ ಮಂಜಮ್ಮ ಜೋಗತಿ, ಅಂತಾರಾಷ್ಟ್ರೀಯ ಮಟ್ಟದ ಇತಿಹಾಸ ತಜ್ಞ ವಿಕ್ರಂ ಸಂಪತ್, ಖ್ಯಾತ ತಬಲಾ ವಿದ್ವಾಂಸ ಪಂಡಿತ್ ರವೀಂದ್ರ ಯಾವಗಲ್, ಜೊತೆಗೆ ವಿಶೇಷ ಆಹ್ವಾನಿತರಾಗಿ ವಿಜಯನಗರ ಸಾಮ್ರಾಜ್ಯದ ರಾಜ ವಂಶಸ್ಥರಾದ ಕೃಷ್ಣ ದೇವರಾಯ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಫೆಬ್ರುವರಿ-1 ರಿಂದ ಪ್ರತಿದಿನ ಲೋಕನೃತ್ಯ, ವಿಚಾರ ಸಂಕೀರಣ, ಕಲಾ ಪ್ರದರ್ಶಿನಿ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 3ನೇ ತಾರೀಖಿನಂದು ಭರತ ಮುನಿಗಳ ಹೆಸರಿನಲ್ಲಿ 2 ವಿಶೇಷ ಪ್ರಶಸ್ತಿಗಳ ಪ್ರಧಾನ ಸಮಾರಭವೂ ನಡೆಯಲಿದೆ.

ಫೆಬ್ರುವರಿ-4 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್, ಶ್ರೀ ಶ್ರೀ ರವಿಶಂಕ‌ರ್ ಗುರೂಜೀ ಮತ್ತು ಅನೇಕ ಗಣ್ಯರು ಉಪಸ್ಥಿತರಿರುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಶ್ರೀ ಪ್ರಶಾಂತ ರಾವ್ (97439-73479) ಅವರನ್ನು ಸಂಪರ್ಕಿಸಬಹುದು

Leave a Reply

Your email address will not be published.

This site uses Akismet to reduce spam. Learn how your comment data is processed.