ನಮ್ಮ ಸಂವಿಧಾನವು ನಮ್ಮ ಇತಿಹಾಸದಿಂದ, ನಮ್ಮ ಮೌಲ್ಯಗಳಿಂದ ಮತ್ತು ಅಗತ್ಯತೆಗಳ ಆಧಾರದ ಮೇಲೆ ರೂಪುಗೊಂಡಿದೆ. ಸಂಸತ್ತು, ನ್ಯಾಯಾಂಗ ವ್ಯವಸ್ಥೆಗಳ ಸಾಂಸ್ಥಿಕ ರೂಪವು ಇತರ ದೇಶಗಳ ವ್ಯವಸ್ಥೆಗಳ ಪ್ರೇರಣೆಯಿಂದ ರೂಪುಗೊಂಡಿರುವುದು ನಿಜವಾದರೂ ಅದರ ಆತ್ಮ, ಮೌಲ್ಯ ಮತ್ತು ಅದನ್ನು ನಡೆಸುತ್ತಿರುವ ವಿಚಾರ, ಭವಿಷ್ಯದ ದಾರಿಗಳು ಎಲ್ಲವೂ ಕೂಡ ಮೂಲ ಭಾರತೀಯ ತತ್ತ್ವವೇ ಆಗಿದೆ.

ಸಂವಿಧಾನದ ಮೂಲ ಪ್ರತಿಯಲ್ಲಿರುವ ರೇಖಾಚಿತ್ರ ಮತ್ತು ವರ್ಣಚಿತ್ರಗಳು

  1. ಇದನ್ನು ಬರೆದದ್ದು ನಂದಲಾಲ್ ಬೋಸ್ ಎನ್ನುವ ಪ್ರಖ್ಯಾತ ಕಲಾವಿದರು.ಅವರು ಮೂಲತಃ ಶಾಂತಿನಿಕೇತನದಲ್ಲಿ ಕಲಿತವರು.
  2. ಅಲ್ಲಿರುವ ಚಿತ್ರಗಳು ನಮಗೆ ಸಂವಿಧಾನ ರಚನಾಕಾರರು ನಮಗೆ ಹೇಳಲು ಹೊರಟಿರುವ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ.
  3. ಸಂವಿಧಾನದಲ್ಲಿರುವ ಐತಿಹಾಸಿಕ ಚಿತ್ರಗಳು ನಮ್ಮ ಚಾರಿತ್ರಿಕ ಸಂಬಂಧಗಳು, ರಾಷ್ಟ್ರೀಯ ಅಸ್ಮಿತೆ ಮತ್ತು ನಮ್ಮ ಸಾಂಸ್ಕೃತಿಕ ಬೇರುಗಳ ಕುರಿತಾಗಿ ಅತ್ಯಂತ ಸ್ಪಷ್ಟವಾದ ಸಂದೇಶವನ್ನು ನೀಡುತ್ತದೆ.
  4. ಭಾರತೀಯ ಸಂವಿಧಾನದಲ್ಲಿ ಬಿಟ್ಟು ಮತ್ತೆ ಯಾವುದೇ ದೇಶದ ಸಂವಿಧಾನದಲ್ಲೂ ಈ ರೀತಿಯ ಚಿತ್ರಗಳನ್ನು ನೀಡಿದ ಉದಾಹರಣೆಯಿಲ್ಲ.
Indus Valley Civilization
Vedic Ashram
 [Ramayan (Conquest of Srilanka and recovery of Sita mata)
Sri Krishna Propounding Gita to Arjun
Scenes from Mahavir’s life
Scenes from Buddha’s Life
Scenes from Gupta Art

Vikramaditya’s Court
Spread of Buddhism by Ashoka in India and Abroad
Nalanda University
 Orissan Sculpture
  Image of nataraja

 Akbar with Mughal Architecture

Portraits of Shivaji and Guru Gobind Singh

Portrait of Tipu Sultan and Lakshmi Bai(rise against British conquest

[Gandhi Ji]

Netaji and other patriots trying to liberate india from outside

ಸಾಂವಿಧಾನಿಕ ಸಂಸ್ಥೆ ಹಾಗು ಇತರ ಅಂಗಸಂಸ್ಥೆಗಳ ಧ್ಯೇಯೋದ್ದೇಶಗಳು

ಭಾರತಕ್ಕೆ ಬ್ರಿಟಿಷ್ ಸಾರ್ವಭೌಮತ್ವದಿಂದ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಭಾರತವು ತನ್ನನ್ನು ತಾನು ಪುನರುಜ್ಜೀವನಗೊಳಿಸಿಕೊಳ್ಳುವ, ಪುನಶ್ಚೇತನಗೊಳಿಸಿಕೊಳ್ಳುವ, ಭಾರತೀಯ ಸಂಸ್ಕೃತಿಯಿಂದ ಪ್ರೇರಣೆ ಪಡೆದುಕೊಳ್ಳುವ ಸ್ಪಷ್ಟವಾದ ಪ್ರಜ್ಞಾಪೂರ್ವಕವಾದ ನಿರ್ಧಾರವನ್ನು ಮಾಡಿತು. ಈ ರೀತಿಯ ಸಂಸ್ಥೆಗಳ ನಿರ್ಮಾಣಕ್ಕೆ ಮುಂದಾದ ನಾಯಕರು ಸ್ವಾತಂತ್ರ್ಯ ದೊರೆತ ಮೊದಲ ದಶಕದಲ್ಲಿ ಈ ಕುರಿತಂತೆ ಕ್ರಿಯಾಶೀಲವಾಗಿ ನಮ್ಮ ನೆಲದ ಮೌಲ್ಯಗಳನ್ನು, ನಮ್ಮ ವಿಚಾರಗಳನ್ನು ಪ್ರತಿಪಾದಿಸುವ, ನಮ್ಮ ಸಂಸ್ಕೃತಿ ಮತ್ತು ಜ್ಞಾನ ಪರಂಪರೆಯ ಆಧಾರದ ಮೇಲೆ ಗುರುತಿಸಿಕೊಳ್ಳುವ ಮತ್ತು ಬೆಳೆಯುವ ರೀತಿಯಲ್ಲಿ ಭದ್ರವಾದ ತಳಹದಿಯನ್ನು ನಿರ್ಮಿಸಿದರು. ಕಾಲಾಂತರದಲ್ಲಿ ಭಾರತವು ಇದೇ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದೆ. ಈ ಸಂಸ್ಥೆಗಳ ಧ್ಯೇಯೋದ್ದೇಶಗಳ ವಾಕ್ಯಗಳನ್ನು ಗಮನಿಸಿದರೆ ನಮಗೆ ಈ ಕುರಿತಾದ ಸ್ಪಷ್ಟವಾದ ಪರಿಕಲ್ಪನೆ ದೊರೆಯಬಹುದು.

  1. ಸರಕಾರದ ಅನೇಕ ಸಂಸ್ಥೆಗಳ ಧ್ಯೇಯವಾಕ್ಯಗಳು ಭಾರತೀಯ ಜ್ಞಾನ ಪರಂಪರೆಯಿಂದಲೇ ತೆಗೆದುಕೊಂಡಿರುವುದನ್ನು ನಾವು ಗಮನಿಸಬಹುದು.
  2. ಭಾರತದ ರಾಷ್ಟ್ರೀಯ ಧ್ಯೇಯವಾಕ್ಯ – ಸತ್ಯಮೇವ ಜಯತೆ(Truth alone Triumphs)  
  3. ಸುಪ್ರಿಂ ಕೋರ್ಟ್- ಯತೋ ಧರ್ಮಸ್ತತೋ ಜಯಃ – ಎಲ್ಲಿ ಧರ್ಮವಿರತ್ತದೆಯೋ ಅಲ್ಲಿ ಜಯವಿರುತ್ತದೆ. Yato Dharmastato Jayah (यतो धर्मस्ततो जयः)
  4. ಸಿಎಜಿ : ಲೋಕಹಿತಾರ್ಥ ಸತ್ಯನಿಷ್ಠಾ – ಲೋಕದ ಹಿತಕ್ಕಾಗಿ ಸತ್ಯನಿಷ್ಠೆ Lokhitrartha Satyanishtha
  5. ಭಾರತೀಐ ಪುರಾತತ್ವ ಇಲಾಖೆ (Archaeological Survey of India): ಪ್ರತ್ನಕೀರ್ತಿಮಪಾವೃಣ್ಣ್ – ಹಿಂದಿನ ವೈಭವಕ್ಕೆ ಮುಚ್ಚಿದ ತೆರೆಯನ್ನು ಸರಿಸೋಣ  (प्रत्नकीर्तिमपावृणु )
  6. ಪ್ರಸಾರ ಭಾರತಿ All India Radio: ಬಹುಜನಹಿತಾಯ  ಬಹುಜನಸುಖಾಯ (बहुजनहिताय बहुजन‍सुखाय‌)
  7. ಗುಪ್ತಚರ ವಿಭಾಗ Intelligence Bureau:ಜಾಗೃತ ಅಹರ್ನಿಶಂ (जागृतं अहर्निशम्)

ಈ ಒಂದೊಂದು ವಾಕ್ಯಗಳೂ ಕೂಡ ಅತ್ಯಂತ ಹಿರಿದಾದ ಅರ್ಥ ಮತ್ತು ಮೌಲ್ಯಗಳನ್ನು ಹೊಂದಿದ್ದು, ಒಂದೊಂದು ವಾಕ್ಯವೂ ಗ್ರಂಥಗಳ ರಚನೆಗೆ ಅಗತ್ಯವಾದ ಸಾಮಗ್ರುಯನ್ನು ಹೊಂದಿದೆ.

  ಸಂಸತ್ ಭವನದಲ್ಲಿರುವ ಬರಹಗಳು

  1. ಅನೇಕ ವಿದ್ವಾಂಸರುಗಳ ವಿಚಾರಗಳಿಂದ ಸಂಸತ್ತಿನ ಕಟ್ಟಡ, ಅದರ ವಿನ್ಯಾಸ, ಅದರ ಸ್ವರೂಪ ಮತ್ತು ರೂಪುರೇಶೆಗಳು ನಿರ್ಮಾಣಗೊಂಡಿದ್ದು, ಇವುಗಳ ಪ್ರಭಾವ ಿಡೀ ಸಂಸತ್ತಿನ ನೀತಿ ನಿರೂಪಣೆಯಲ್ಲಿಯೂ ವ್ಯಕ್ತವಾಗುವುದನ್ನು ಕಾಣಬಹುದು.
  2. ಇದು ದೇಶದ ರಾಜಕೀಯ ಸಂಸ್ಕೃತಿಯ ಮೇಲೆ ಕೂಡ ತನ್ನ ಪ್ರಭಾವ ಬೀರುತ್ತದೆ.
  3. ನಮ್ಮ ಸಂಸತ್ ಭವನವು ನಮ್ಮ ಪುರಾತನ ಜ್ಞಾನ ಪರಂಪರೆಯಿಂದ ಻ನೇಕ ವಾಕ್ಯಗಳನ್ನು ಅಳವಡಿಸಿಕೊಂಡಿದೆ.
  4. ಭಗವತ್ಗೀತೆ, ಮಹಾಭಾರತ, ಉಪನಿಷತ್ಗಳಲ್ಲಿನ ವಾಕ್ಯಗಳನ್ನು ತೆಗೆದುಕೊಳ್ಳಲಾಗಿದ್ದು ಕೆಲವು ಪರ್ಷಿಯನ್ ವಾಕ್ಯಗಳನ್ನೂ ತೆಗೆದುಕೊಂಡಿರುವುದು ವಿಶೇಷ.
  5. ಈಗ ನಿರ್ಮಾಣವಾಗುತ್ತಿರುವ ನೂತನ ಕಟ್ಟಡವು ಕೂಡ ಈ ಶ್ಲೋಕಗಳನ್ನು ಹೊಂದಿದೆ.
  6. ‘ಧರ್ಮಚಕ್ರ ಪ್ರವರ್ತನಾಯ’ ಎನ್ನುವ ವಾಕ್ಯವನ್ನು ರಾಜ್ಯಸಭೆಯ ಸಭಾಪತಿಗಳ ಖುರ್ಚಿಯ ಮೇಲೆ ಬರೆಯಲಾಗಿದೆ.
  7. ಸಂಸತ್ ಭವನದ ಹೊರ ಭಾಗದಲ್ಲಿ 58 ಚಿತ್ರಗಳನ್ನು ರಚಿಸಲಾಗಿದೆ.
  8. ವೇದಗಳ ಕಾಳದಿಂದ ಇತ್ತೀಚಿನವರೆಗಿನ ಶ್ಲೋಕಗಳನ್ನು ಸಂಸತ್ ಭವನದಲ್ಲಿ ಬರೆಯಲಾಗಿದೆ.
  9. ಕೆಲವೊಂದು ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.

ಸಂವಿಧಾನದ ಮೂಲ ವಿಚಾರ ಮತ್ತು ಸಾಂವಿಧಾನಿಕ ಮೌಲ್ಯಗಳ ಪ್ರೇರಣಾ ಸ್ರೋತ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ

ನಮ್ಮ ಇಡಿ ಇತಿಹಾಸದಲ್ಲಿ ನಾವು ಬರೆದಿಟ್ಟ ಒಂದಷ್ಟು ಸ್ಪಷ್ಟವಾದ ನೀತಿ ನಿಯಮಾವಳಿಗಳ ಮೇಲೆ ಹಾಗು ಅದನ್ನು ನಿರ್ದೇಶಿಸುವ ರೀತಿಯಲ್ಲಿರುವ ಅಲಿಖಿತವಾದ ಕೆಲವು ನೀತಿ, ಸಂಪ್ರದಾಯ,ಆಚರಣೆ ಮತ್ತು ಪರಂಪರೆಯನ್ನು ಮಾಡಿಕೊಂಡು ಬಂದಿದ್ದೇವೆ‌. ವೇದಗಳ ಕಾಲದಿಂದ ಹಿಡಿದು ಇವತಗತಿನವರೆಗೂ ನಮ್ಮ ನಾಗರೀಕತೆ ಮತ್ತು ಸಂಸ್ಕೃತಿಯು ನಿಯಮಾಧಾರಿತ ವ್ಯವಸ್ಥೆಯ ಮೇಲೆ ನಂಬಿಕೆಯಿಟ್ಟುಕೊಂಡು ನಡೆದುಕೊಂಡು ಬಂದಿದೆ.ಅತ್ಯಂತ ದೊಡ್ಡ ಸಂಖ್ಯೆಯ ಸ್ಮೃತಿ ಹಾಗು ಗ್ರಂಥಗಳ ಈ ರೀತಿಯ ವಾದಕ್ಕೆ ಪುಷ್ಠಿ ನೀಡುತ್ತದೆ‌. ಪಶ್ಚಿಮದ ಮ್ಯಾಗ್ನಾಕಾರ್ಟಾಕ್ಕಿಂತ ಅದೆಷ್ಟೋ ಮೊದಲೇ ನಮ್ಮ ನ್ಯಾಯಂಗ ವ್ಯವಸ್ಥೆ,ನ್ಯಾಯತತ್ತ್ವದ ಕುರಿತಂತೆ ಭಾರತದಲ್ಲಿ ಆಳವಾದ ಚಿಂತನೆ ನಡೆದಿತ್ತು.

ಹೀಗಾಗಿಯೇ ಸಂವಿಧಾನ ಎನ್ನುವುದು ಪಶ್ಚಿಮದಿಂದ ಬಂದ ವಿಚಾರ ಎಂಬುದನ್ನು ನಾವು ಖಡಾಖಂಡಿತವಾಗಿ ಅಲ್ಲಗಳೆಯಬೇಕಿದೆ‌. ಇಂಗ್ಲಿಷ್ ಭಾಷೆಯ ಉಪಯೋಗ ಮತ್ತು ‘constitution’ಎನ್ನುವ ಪದ ಪ್ರಯೋಗ ಮಾತ್ರದಿಂದ ಅದು ಬ್ರಿಟಿಷ್ ವಿಚಾರವಾಗಲು ಸಾಧ್ಯವಿಲ್ಲ. ಸಂವಿಧಾನ ಎನ್ನುವ ಅದಕ್ಕೆ ತಕ್ಕುದಾದ ಭಾರತದ ನೆಲದ ಪದವೂ ನಮ್ಮಲ್ಲಿಯೇ ಇತ್ತು ಎನ್ನುವುದು ಸಂವಿಧಾನದ ಮೂಲ ವಿಚಾರದ ಕುರಿತಾದ ಭಾರತೀಯ ನೆಲೆಗಟ್ಟು ಅರ್ಥಮಾಡಿಕೊಳ್ಳಲು ಸಾಧ್ಯ. ಸಂವಿಧಾನ ಆಡಳಿತಕ್ಕೆ ಅಗತ್ಯವಾದ ಮೂಲ ದಾಖಲೆ ಎಂಬುದನ್ನು ನಮ್ಮ ಇತಿಹಾಸದ ಪ್ರಮಾಣದ ಆಧಾರದಲ್ಲಿ ನಿಂತು ಇದು ಭಾರತದ ವಿಚಾರ ಎಂಬುದನ್ನು ಹೇಳಬೇಕಿದೆ.

ಎರಡನೆಯದಾಗಿ, ಅನೇಕ ವಾಮಪಂಥೀಯ ಮತ್ತು ಇತರ ಜನರು ಸಾಂವಿಧಾನಿಕ ಮೌಲ್ಯಗಳನ್ನು ಪಶ್ಚಿಮದ ಕನ್ನಡಕದಿಂದ ನೋಡುವ ಅದನ್ನು ಪಶ್ಚಿಮದ ವಿಚಾರದ ತಳಹದಿಯ ಮೇಲೆ ವಿಮರ್ಶೆ ಮಾಡುವ ಷಡ್ಯಂತ್ರ ನಡೆಯುತ್ತಿದೆ‌.ಈ ವಾದವನ್ನು ನಾವು ತಳ್ಳಿಹಾಕುತ್ತಾ ಹೊರಬರಬೇಕಿದೆ. ನಾವು ಸಂವಿಧಾನದಲ್ಲಿರುವ ಪ್ರಜಾಪ್ರಭುತ್ವ, ಸಮಾಜವಾದ, ನ್ಯಾಯವ್ಯವಸ್ಥೆ, ಸಮಾನತೆ, ಭ್ರಾತೃತ್ವ,ಸಾರ್ವಭೌಮತ್ವ ಮುಂತಾದ ಮೌಲ್ಯಗಳು ಸಂಪೂರ್ಣ ಭಾರತೀಯ ವಿಚಾರಗಳೇ.ಅದರ ಮೂಲ ಸತ್ತ್ವ,ವಿಸ್ತಾರ ಮತ್ತು ವಿಮರ್ಶೆಗಳೂ ಕೂಡ ಭಾರತೀಯ ಚಿಂತನೆ ಮತ್ತು ಆಚರಣೆಗಳ ಆಧಾರದಲ್ಲಿಯೆ ನಡೆಯಬೇಕಿದೆ‌. ಭಾರತದ ವಿವಿಧ ಭಾಷೆಯಲ್ಲಿದ್ದ, ಆಚರಣೆಯಲ್ಲಿದ್ದ, ವಿವಿಧ ಸಮಯಗಳಲ್ಲಿದ್ದ ಬೇರೆ ಬೇರೆ ಗ್ರಂಥಗಳು ಇದಕ್ಕೆ ಮೂಲ ಸಾಮಗ್ರಿಯನ್ನು ಒದಗಿಸಲು ಸಾಧ್ಯವಾಗುತ್ತದೆ.

1947ಕ್ಕಿಂತಲೂ ಹಿಂದಿನ ಸಂವಿಧಾನದ ಇತಿಹಾಸವನ್ನು ನಾವು ನೋಡಿದರೆ, ನಮ್ಮ ದೇಶದಲ್ಲಿ ಸಂವಿಧಾನವು ಒಂದು ಜೀವಂತ ಮತ್ತು ಸಹಜವಾಗಿ ಬೆಳೆದುಬಂದ ವ್ಯವಸ್ಥೆಯೇ ಆಗಿತ್ತು.ಅದನ್ನು ಭಾರತೀಯ ಚಿಂತನೆಗಳು ಮತ್ತು ವಿಚಾರದ ಆಧಾರದಲ್ಲಿಯೇ ವಿಮರ್ಶೆಗೆ ಒಳಪಡಿಸುವ ಕೆಲಸ ನಡೆಬೇಕಿದೆ. ನಮ್ಮ ಸಂವಿಧಾನವನ್ನು ವಿಮರ್ಶೆಗೆ ಒಳಪಡಿಸುವಾಗ ಅದರ ರೀತಿ ಅಥವಾ ಪ್ರಕ್ರಿಯೆಯು ನಮ್ಮ ದೇಶದ ಇತಿಹಾಸ, ಸಂಸ್ಕೃತಿ, ಪರಂಪರೆಯ ಆಧಾರದ ಮೇಲೆ ನಡೆಯುವಂತೆ ಪ್ರಯತ್ನಿಸಬೇಕು ಅಲ್ಲದೆ ಇನ್ನು ಮುಂದಿನ ಎಲ್ಲ ಸವಾಲುಗಳಿಗೆ ಮತ್ತು ಅವಕಾಶಗಳಿಗೆ ತೆರೆದುಕೊಳ್ಳುವ ರೀತಿಯಲ್ಲಿ ನಡೆಯಬೇಕಿದೆ. ಸಂವಿಧಾನವನ್ನು ವಸಾಹತುಶಾಹಿ ಮನಸ್ಥಿತಿಯ ಆಧಾರದ ಮೇಲೆ ವಿಮರ್ಶಿಸುವ ಜಿಜ್ಞಾಸೆಗೆ ಒಳಪಡಿಸುವ ಪ್ರಕ್ರಿಯೆಯನ್ನು ಖಂಡಿಸಬೇಕಿದೆ. ಸಂವಿಧಾನ ಸಂಪೂರ್ಣ ಭಾರತೀಯ ಕೇಂದ್ರಿತ ಜನವ್ಯವಸ್ಥೆಯ ಜನಜೀವನದ ಅಂಗವಾಗಿದ್ದು, ಭಾರತೀಯತ್ವದ ಆಧಾರದ ಮೇಲೆ ನೋಡಬೇಕಾದ ಅಗತ್ಯತೆಯಿದೆ‌.

Leave a Reply

Your email address will not be published.

This site uses Akismet to reduce spam. Learn how your comment data is processed.