Shivamogga July 3, 2016: RSS Karnataka state level College Vidyarthi Pratham and Dwiteeya Varsh Sangh Shiksha Varg and College Vidyarthi Prathamik Shiksha Varg concluded on Sunday evening at Shivamogga.
RSS Karnataka Dakshin Pranth Karyavah N Thippeswamy delivered the valedictory address. Industrialist K Raveendra presided over the event. Vargadhiksari’s Dr Bharateesh, Venkatersh Sagar were present on the dais.
A total of 379 College students attended the Varg.
Pratham Varsh (Karnataka Dakshin and Uttar): 130
Dwiteeya Varsh (Karnataka Dakshin and Uttar): 79
Prathamik Shiksha Varg (Karnataka Dakshin): 170
ಕಾಲೇಜು ವಿದ್ಯಾರ್ಥಿ ಸಂಘ ಶಿಕ್ಷಾ ವರ್ಗ – 2016,
ಕರ್ನಾಟಕ ಉತ್ತರ ಮತ್ತು ದಕ್ಷಿಣ
ಸಮಾರೋಪ ಸಮಾರಂಭ –
ಬೌದ್ಧಿಕ್ : ನಾ.ತಿಪ್ಪೇಸ್ವಾಮಿ, ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹ
ಅಧ್ಯಕ್ಷತೆ: ಶ್ರೀ.ಕೆ.ರವೀಂದ್ರ, ಮಾಲೀಕರು-ಲಕ್ಷ್ಮೀ ಟ್ರ್ಯಾಕ್ಟರ‍್ಸ್
ವೈಯಕ್ತಿಕ ಗೀತೆ: ಸಮರಸ ಭಾವದ ಸರಿಗಮ ಸ್ವರದಲಿ ….
ಸಮಾರೋಪ ಸಮಾರಂಭದಲ್ಲಿ ನಾ ತಿಪ್ಪೇಸ್ವಾಮಿಯವರ ಭಾಷಣದ ಸಾರಾಂಶ ಇಲ್ಲಿ ನೀಡಲಾಗಿದೆ
ತಮ್ಮ ಕರ್ತೃತ್ವ ಶಕ್ತಿ ಬೆಳೆಸಿಕೊಂಡು ತಮ್ಮ ತಮ್ಮ ಊರುಗಳಲ್ಲಿ ಸಂಘದ ಕೆಲಸವನ್ನು ಬೆಳೆಸುವಂತಹವರಾಗುತ್ತಾರೆ. ಸಂಘದ ಶಿಕ್ಷಾ ವರ್ಗಗಳಲ್ಲಿ ಭಾಗವಹಿಸುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಸಂಘದ ಅಪೇಕ್ಷೆಯಂತೆ ಈ ದೇಶವನ್ನು ಪರಮ ವೈಭವಸ್ಥಿತಿಗೆ ಕೊಂಡೊಯ್ಯಲು, ಸಂಘ ಕಾರ್ಯದ ವಿಸ್ತಾರಕ್ಕಾಗಿ ಕೆಲಸ ಮಾಡುತ್ತಾರೆ. ಅನೇಕ ವಿಷಮ ಪರಿಸ್ಥಿತಿಗಳಲ್ಲೂ ಈ ಕೆಲಸವನ್ನು ಮಾಡುತ್ತಾರೆ. ದೇಶದಾದ್ಯಂತ ೪೦ಕ್ಕೂ ಹೆಚ್ಚು ಸಂಘಟನೆಗಳ ಮೂಲಕ ಈ ದೇಶದ ಜನಮಾನಸದಲ್ಲಿ ಪರಿವರ್ತನೆ ಮಾಡುತ್ತಿದ್ದಾರೆ. ಚಿಕ್ಕಮಗಳೂರಿನ ಹನೂರಿನಲ್ಲಿ ನಡೆಯುತಿದ್ದ ಶಾಖೆಯಿಂದೊಬ್ಬ ನಕ್ಸಲ್ ಮಹಿಳೆ ಬದಲಾದ ಘಟನೆ ನಡೆದಿದೆ. ಒಬ್ಬ ಸಾಮಾನ್ಯ ಮುಖ್ಯ ಶಿಕ್ಷಕನ ಪ್ರಯತ್ನದ ಕಾರಣದಿಂದ ಆಕೆಯಲ್ಲಿ ಪರಿವರ್ತನೆಯಾಯಿತು. ಹೀಗೆ ಸ್ವಯಂಸೇವಕ ಸಮಾಜದಲ್ಲಿನ ಪರಿಸ್ಥಿತಿನೋಡಿ ಬದಲಾವಣೆ ಅವಶ್ಯಕತೆಯಿದ್ದಲ್ಲಿ ತಾನು ಕಾರ್ಯ ಪ್ರವೃತ್ತನಾಗುತ್ತಾನೆ. ತಾನು ವಿಷಮ ಪರಿಸ್ಥಿತಿಯನ್ನು ಎದುರಿಸಿಯೂ, ನಿಶ್ಚ್ಚಯಮಾಡಿದಂತೆ ನಡೆಯುತ್ತಾನೆ. ಈ ದೇಶ ಕಂಡ ಅನೇಕ ಮಹಾಪುರುಷರ ಕನಸನ್ನು ನನಸಾಗಿಸುವ ಕೆಲಸವನ್ನು ಸಂಘಮಾಡುತ್ತಿದೆ. ಸ್ವಾಮಿ ವಿವೇಕಾನಂದರು ಅಪೇಕ್ಷಿಸಿದ್ದ ಕಬ್ಬಿಣದ ಸ್ನಾಯುಗಳ, ಉಕ್ಕಿನ ನರಗಳ, ಸಿಡಿಲಿನಂತಹ ಮನಸ್ಸಿನ ಯುವಕರನ್ನು ಸಂಘ ಸೃಷ್ಟಿ ಮಾಡುತ್ತಿದೆ. ಹಿಂದು ಎಂದು ಹೇಳಿಕೊಳ್ಳಲು ಅಭಿಮಾನ ಪಡುವಂತಹ, ಹಿಂದುತ್ವ ಎಂಬುದು ಈ ದೇಶದ ರಾಷ್ಟ್ರೀಯತೆ ಎಂದು ಹೆಮ್ಮೆಪಡುವಂತಹ ಸಮಾಜವನ್ನು ಸೃಷ್ಟಿ ಮಾಡಿದೆ. ಈ ದೇಶಕ್ಕೆ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವಂತಹ, ಹಿಂದುಗಳಿಗೆ ಅನ್ಯಾಯವಾದಾಗ ಅಲ್ಲಿಗೆ ಧಾವಿಸಿ, ಹಿಂದು ಸಮಾಜವನ್ನು ಸಂಘಟಿಸಿ ಸಮಸ್ಯೆಗೆ ಪರಿಹಾರಕಂಡುಕೊಳ್ಳುವ ಮೂಲಕ ಹಿಂದುಗಳಲ್ಲಿ ಆತ್ಮಸ್ಥೈರ್ಯವನ್ನು ಕಾಪಿಡುವ ಕೆಲಸವನ್ನು ಮಾಡುತ್ತಿದೆ. ದೇಶದ ಈಶಾನ್ಯ ಭಾಗದಲ್ಲೂ ಕೂಡ ಹಿಂದು ಬಂಧುಗಳಲ್ಲಿ ರಾಷ್ಟ್ರೀಯತೆಯ ಭಾವಜಾಗರಣದ ಕಾರ್ಯವನ್ನು ಮಾಡುತ್ತಿದೆ. ವನವಾಸಿ ಕಲ್ಯಾಣಾಶ್ರಮದ ಕಾರ್ಯದ ಮೂಲಕ ವನವಾಸಿ, ಗುಡ್ಡಗಾಡಿನ ಬಂಧುಗಳಲ್ಲಿ ಹಿಂದು ಅಸ್ಮಿತೆಯನ್ನು ಎತ್ತಿಹಿಡಿಯುವ ಕೆಲಸ ಮತ್ತು ಸಮಾಜದ ಮುಖ್ಯವಾಹಿನಿಯಲಲ್ಲಿ ಜೋಡಿಸುವ ಕೆಲಸ ಮಾಡುತ್ತಿದೆ.
ಭಾರತ ರತ್ನ, ಪ್ರಾತಃಸ್ಮರಣೀಯರಾದ ಡಾ.ಬಿ.ಆರ್.ಅಂಬೇಡ್ಕರ್‌ವರ 125ನೇ ಜನ್ಮವರ್ಷಾಚರಣೆ ಮತ್ತು ನಮ್ಮ ಸಂಘದ ಮೂರನೇ ಸರಸಂಘಚಾಲಕರಾಗಿದ್ದ ಪೂ.ಬಾಳಾಸಾಹೇಬದೇವರಸರವರ ನೂರನೇ ಜನ್ಮ ವರ್ಷಾಚರಣೆಯ ಸಂದರ್ಭದಲ್ಲಿದ್ದೇವೆ. ಅಂಬೇಡ್ಕರ್ ಮತ್ತು ಗಾಂಧೀಜಿ ಬಯಸಿದ್ದ ಅಸ್ಪೃಶ್ಯತಾರಾಹಿತ್ಯತೆಯನ್ನು ಸಂಘದಲ್ಲಿ ಆಚರಣೆಗೆ ತಂದಿದ್ದನ್ನು 1934ರಲ್ಲಿ ವಾರ್ಧಾ ಸಂಘ ಶಿಬಿರಕ್ಕೆ ಬಂದಿದ್ದ ಗಾಂಧೀಜಿಯವರು ಮನಸಾರೆ ಒಪ್ಪಿದ್ದರು. ಬಾಳಾಸಾಹೇಬದೇವರಸರವರು, ಅಸ್ಪೃಶ್ಯತೆ ತಪ್ಪಲ್ಲದ್ದಿದ್ದಲ್ಲಿ ಜಗತ್ತಿನಲ್ಲಿ ಇನ್ನಾವುದೂ ತಪ್ಪಲ್ಲ ಎಂದಿದ್ದರು. ನಮ್ಮ ಈಗಿನ ಸರಸಂಘಚಾಲಕರು ಎಲ್ಲ ಗ್ರಾಮಗಳಲ್ಲಿ ದೇವಸ್ಥಾನ, ನೀರು ಮತ್ತು ಸ್ಮಶಾನ ಎಲ್ಲರಿಗೂ ಸಮಾನವಾಗಿ ಲಭ್ಯವಾಗುವಂತಿರಬೇಕು ಎಂದಿದ್ದಾರೆ. ಸಂಘದ ಕಾರ್ಯಕರ್ತರು ಎಲ್ಲ ಕಡೆಗಳಲ್ಲಿ ಈ ರೀತಿಯಾದಂತಹ ಜಾಗೃತಿ, ಸಂಸ್ಕಾರ ಮತ್ತು ಶಿಕ್ಷಣವನ್ನು ಕೊಡುವಂತಹ ಕೆಲಸಮಾಡುತ್ತಿದ್ದಾರೆ. ಮತ್ತು ಅಸ್ಪೃಶ್ಯತೆ ಮುಕ್ತ, ಸಾಮರಸ್ಯಯುಕ್ತ ಸಮಾಜದ ನಿರ್ಮಾಣಕ್ಕೆ ಸಂಘ ಕಟಿಬದ್ದವಾಗಿದೆ. ಇದಕ್ಕೆ ನೀವೆಲ್ಲರೂ ಕೈ ಜೋಡಿಸಬೇಕು ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಅಬ್ದುಲ್ ಕಲಾಂರವರು ಹೇಳಿದ್ದರು, inspire the spiritualism, develop the nationalism
ರಾಷ್ಟ್ರೀಯ ಸ್ವಯಂಸೇವಕ ಸಂಘ ಇದನ್ನೇ ಮಾಡುತ್ತಿದೆ. ವಿಶ್ವ ಬಯಸುತ್ತಿರುವ ವಿಶ್ವ ಶಾಂತಿಗೆ ನೇತೃತ್ವ ಕೊಡುವಂತಹ, ಇಡೀ ವಿಶ್ವವನ್ನು ಔನ್ನತ್ಯದಕಡೆಗೆ ಮುನ್ನಡೆಸುವ ಗುರುತರ ಜವಾಬ್ದಾರಿ ಭಾರತದ್ದು. ಇದಕ್ಕೆ ನಮ್ಮನ್ನು ಸಿದ್ದಗೊಳಿಸಿಕೊಳ್ಳುವ ಕೆಲಸವಾಗಬೇಕಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ, ಸಹಯೋಗವನ್ನು ಮತೊಮ್ಮೆ ಅಪೇಕ್ಷಿಸುತ್ತಾ ನನ್ನ ಕರ್ತವ್ಯವನ್ನು ಮುಕ್ತಾಯ ಮಾಡುತ್ತೇನೆ.
ಅಧ್ಯಕ್ಷತೆ ವಹಿಸಿದ್ದ ಕೆ.ರವೀಂದ್ರರವರುಮಾತನಾಡಿ, ಸಂಘದ ಶಿಸ್ತು, ದೇಶ ಭಕ್ತಿ, ಪ್ರಾಮಾಣಿಕತೆ, ಎಲ್ಲರಿಗೂ ಅನುಕರಣ ಯೋಗ್ಯವಾದದ್ದು. ಈ ಕೆಲಸ ಇನ್ನಷ್ಟು ಬೆಳೆಯಲಿ ಎಂದು ಹರಸಿದರು.
ಕಾರ್ಯಕ್ರಮದಲ್ಲಿ ಮೊದಲಿಗೆ ಶಿಕ್ಷಾರ್ಥಿಗಳಿಂದ ಆಟ, ದಂಡ, ನಿಯುದ್ಧ, ಸಾಮೂಹಿಕ ಗೀತೆ, ಯೋಗಾಸನ, ಸೂರ್ಯ ನಮಸ್ಕಾರ, ದಂಡವ್ಯಾಯಾಮ, ಉಪವಿಷ್ಟ ವ್ಯಾಯಾಮಾದಿ ಶಾರೀರಿಕ ಪ್ರದರ್ಶನಗಳು ಸಾಮೂಹಿಕತೆಯಲ್ಲಿ ಮನಸೂರೆಗೊಳ್ಳುವಂತೆ ಮೂಡಿಬಂದುವು. ಶ್ರೀ ಜಯಪ್ರಕಾಶ್ ಎಲ್ಲರನ್ನೂ ಸ್ವಾಗತಿಸಿದರು.ಶಿಬಿರದ ವರದಿಯನ್ನು ಸಾರ್ವಜನಿಕರಿಗೆನೀಡಿದಶಿಬಿರಾಧಿಕಾರಿ ಶ್ರೀ ವೆಂಕಟೇಶ್ ಸಾಗರ್ ಅವರು, ಶಿಬಿರದಲ್ಲಿ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಾಂತಗಳಿಂದ ಪ್ರಥಮ ಮತ್ತು ದ್ವಿತೀಯ ವರ್ಷದ ವರ್ಗಗಳಿಗೆ ಕ್ರಮವಾಗಿ 130 ಮತ್ತು 79 ಶಿಕ್ಷಾರ್ಥಿಗಳು ಭಾಗವಹಿಸಿದ್ದರು. ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಜೊತೆಗೆ ಕೆಲವು ಅಧ್ಯಾಪಕರು ಭಾಗವಹಿಸಿದ್ದು ವಿಶೇಷವಾಗಿತ್ತು. ವರ್ಗದಲ್ಲಿಸಾಮಾಜಿಕ ಸಾಮರಸ್ಯದ ಬಗ್ಗೆ ಒಂದುದಿನವಿಶೇಷ ಪ್ರಶಿಕ್ಷಣಕೊಡಲಾಯಿತು. ವರ್ಗಕ್ಕೆ ಅಖಿಲ ಭಾರತೀಯ ಬೌದ್ಧಿಕ ಪ್ರಮುಖರಾದ ಮಾ.ಸ್ವಾಂತರಂಜನ್, ಸಹ ಬೌಧಿಕ ಪ್ರಮುಖರಾದ ಮಾ.ಮುಕುಂದ, ಕುಟುಂಬ ಪ್ರಬೋಧನದ ಅಖಿಲ ಭಾರತೀಯ ಸಂಯೋಜಕರಾದಕಜಂಪಾಡಿ ಸುಬ್ರಹ್ಮಣ್ಯ ಭಟ್, ಸಹ ಸಂಯೋಜಕರಾದ ಶ್ರೀಸು.ರಾಮಣ್ಣ ಮೊದಲಾದ ಹಿರಿಯರು ಭೇಟಿ ಕೊಟ್ಟು ಶಿಕ್ಷಾರ್ಥಿಗಳಿಗೆ ಮಾರ್ಗ ದರ್ಶನ ಮಾಡಿರುತ್ತಾರೆ. ಮಲೆನಾಡಿನ ಮುಂಗಾರಿನ ಚಿಟಿ ಚಿಟಿ ಮಳೆಯ ಮಧ್ಯೆಯೂ ಸುಮಾರು 500ಕ್ಕೂ ಹೆಚ್ಚು ಮಾತೆಯರು, ಹಿತೈಷಿ ಸಜ್ಜನ ಬಂಧುಗಳು ಕಾರ್ಯಕ್ರಮವನ್ನು ವೀಕ್ಷಿಸಿದರು. ಕಾರ್ಯಕ್ರಮವು ಪಿ.ಇ.ಎಸ್ ಶಿಕ್ಷಣಸಂಸ್ಥೆಗಳ ಆವರಣದ ಸಭಾಭವನದಲ್ಲಿ ನಡೆಯಿತು.
ವೇದಿಕೆಯಲ್ಲಿ ಶ್ರೀ ಪಟ್ಟಾಭಿರಾಮ್, ಶ್ರೀಸುಧೀರ್, ಶ್ರೀಗುರುಪ್ರಸಾದ್, ಶ್ರೀಚಂದ್ರಶೇಖರ್ ಜಹಗೀರದಾರ್, ಶ್ರೀ ಭಿರ್ಮಣ್ಣ, ಡಾ. ಜಯಪ್ರಕಾಶ್ ಉಪಸ್ಥಿತರಿದ್ದರು.
Nice photo.It will be probably be the last one in this uniform!