ಭಗವಾನ್ ಶ್ರೀ ರಮಣ ಮಹರ್ಷಿ ಈ ಜಗತ್ತು ಕಂಡು ಶ್ರೇಷ್ಠ ಆಧ್ಯಾತ್ಮ ಗುರು. 1896 ರಲ್ಲಿ, ಅವರು ಇನ್ನೂ ಹದಿನಾರು ವರ್ಷದ ಶಾಲಾ ವಿದ್ಯಾರ್ಥಿಯಾಗಿದ್ದಾಗ, ಸುಮಾರು ಇಪ್ಪತ್ತು ನಿಮಿಷಗಳ ಕಾಲ ನಡೆದ ನಾಟಕೀಯ ಸಾವಿನ ಅನುಭವದ ಸಮಯದಲ್ಲಿ ಅವರು ಆತ್ಮವನ್ನು ಅರಿತುಕೊಂಡವರು. ಮಾನವನ ಜೀವನದ ಸಾರಾಂಶವನ್ನು ಮನಮುಟ್ಟುವ ಹಾಗೆ ತಮ್ಮ ಉಪದೇಶಗಳ ಮೂಲಕ ಸಂದೇಶವನ್ನು ಸಾರಿದವರು. ಇಂದು ಅವರ ಜಯಂತಿ.


ರಮಣ ಮಹರ್ಷಿ ಪರಿಚಯ
ರಮಣ ಮಹರ್ಷಿ ಅವರು ಡಿಸೆಂಬರ್ 30, 1879 ರಲ್ಲಿ ತಮಿಳುನಾಡಿನ ಮಧುರೆಯ ಬಳಿ ತಿರುಚುರಿ ಎಂಬ ಗ್ರಾಮದಲ್ಲಿ ಜನಿಸಿದವರು. ಅವರ ತಂದೆ ಸುಬ್ರಮಣ್ಯ ಅಯ್ಯರ್ ಹಾಗೂ ತಾಯಿ ಅಳಗಮ್ಮಾಳ್.
1896 ರಲ್ಲಿ ತಮ್ಮ 16ನೇ ವಯಸ್ಸಿನಲ್ಲಿ ತಮಗಾದ ಆತ್ಮ ಪ್ರಜ್ಞಾನುಭವದ ನಂತರ ಶಾಶ್ವತವಾಗಿ ಅರುಣಾಚಲಕ್ಕೆ (ತಿರುವಣ್ಣಾಮಲೈಗೆ) ಬಂದರು. ತಮ್ಮ ಉಳಿದ ಆಯುಷ್ಯವನ್ನು ಇಲ್ಲಿಯೇ ಕಳೆದರು.


ತಿರುಅಣ್ಣಾಮಲೈನಲ್ಲಿ ಅವರ ಆಶ್ರಮ ಇದೆ. ಇಂದಿಗೂ ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಬದುಕಿನ ಅರ್ಥವನ್ನು ಶೋಧಿಸುತ್ತಾ ಇಲ್ಲಿಗೆ ಬರುವವರಿದ್ದಾರೆ. ಸಂಕಷ್ಟಗಳನ್ನು ಬಗೆಹರಿಸಿಕೊಳ್ಳಲು ದಾರಿತೋರುವ ಗುರು ಎಂದೇ ಶ್ರೀ ರಮಣ ಮಹಿರ್ಷಿಗಳು ಖ್ಯಾತ ಹೊಂದಿದವರು.


ವೆಂಕಟರಾಮನ್ ಅವರು ಏಳು ವರ್ಷದವರಾಗಿದ್ದಾಗ ಅವರು ತಮ್ಮ ಉಪನಯನವನ್ನು ಹೊಂದಿದ್ದರು. ಸ್ವಯಂ ಜ್ಞಾನದಲ್ಲಿ ಮೂರು ಉನ್ನತ ವರ್ಣಗಳ ಸಾಂಪ್ರದಾಯಿಕ ದೀಕ್ಷೆ ಪಡೆದವರು.

ರಮಣ ಮಹರ್ಷಿ ಒಬ್ಬ ಶ್ರೇಷ್ಠ ದಾರ್ಶನಿಕರು. ತತ್ವಜ್ಞಾನಿಯಾಗಿ ದೇಶ ವಿದೇಶದಲ್ಲಿ ಗುರುತಿಸಿಕೊಂಡ ಮಹಾನ್ ಸಂತರು. ಭಗವಾನ್ ಶ್ರೀ ರಮಣ ಮಹರ್ಷಿಗಳು ನೀಡುತ್ತಿದ್ದ ಸಂದೇಶಗಳು ಮಾನವೀಯತೆ ಸಾರುವ ರೀತಿಯಲ್ಲಿ ಹೇಳುತ್ತಿದ್ದವು. ಮಹರ್ಷಿಗಳ ಬದುಕೇ ಜಗತ್ತಿಗೆ ಒಂದು ಅದ್ಭುತ ಸಂದೇಶ. ನುಡಿದಂತೆ ನಡೆಯುವುದು ಎಂದರೆ ಅದೇ ತಾನೇ. ಅದನ್ನೆಲ್ಲ ಧರ್ಮಗಳೂ, ಮಹಾನ್ ಗ್ರಂಥಗಳು ಸಾರಿರುವುದು. ಅಂತರಂಗವನ್ನು ಶುದ್ಧವಾಗಿಟ್ಟುಕೊಳ್ಳುವ ಬಗೆಯನ್ನು ಹೇಳಿಕೊಡುವುದೇ ರಮಣ ಮಹರ್ಷಿಗಳ ಗುರಿ.


ಶ್ರದ್ಧೆಯ ಪ್ರತೀಕ
ಮಹರ್ಷಿಗಳು ಕೇವಲ ಆದರ್ಶಗಳನ್ನು ಹೇಳದೆ ತಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡಿದ್ದರು. ಅವರ ದಿನನಿತ್ಯದ ಬದುಕು ಆರಂಭವಾಗುತ್ತಿದ್ದುದು ಮುಂಜಾನೆ ನಾಲ್ಕು ಘಂಟೆಗೆ. ಆಗಿನಿಂದ ಒಂದು ನಿಮಿಷ ಕೂಡ ಹಾಳುಮಾಡುತ್ತಿರಲಿಲ್ಲ. ಎಲ್ಲ ಕೆಲಸಗಳನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದರು. ಆಶ್ರಮಕ್ಕೆ ಬರುವ ಪ್ರತಿ ಭಕ್ತರ ಪ್ರಶ್ನೆಗಳಿಗೆ ಸಮಾಧಾನದ ಉತ್ತರ ನೀಡಿ ಸಂತೈಸುತ್ತಿದ್ದರು. ಪ್ರತಿಯೊಂದು ಕೆಲಸವೂ ಭಗವಂತನ ಸೇವೆಯೆಂದು ಮಾಡಿ ಮುಗಿಸಿ ಶಾಂತರಾಗಿರುತ್ತಿದ್ದರು. ಆತನ ಆದೇಶದಂತೆ ಕೆಲಸಗಳು ಎಲ್ಲರ ಕೈಯಲ್ಲಿ ನಡೆದಿದೆ ಎಂದು ಉತ್ತರಿಸುತ್ತಿದ್ದರು.


ರಮಣ ಮಹರ್ಷಿಗಳು ಏಪ್ರಿಲ್ 14, 1950 ರಲ್ಲಿ ತಮ್ಮ 70 ವಯಸ್ಸಿನಲ್ಲಿ ಮರಣರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.