ಬೆಂಗಳೂರು: ಭಾರತದ ಏಕತೆಯನ್ನು ಮತ್ತು ಅಸ್ಮಿತೆಯನ್ನು ಉಳಿಸುವಲ್ಲಿ ಮಹಿಳೆಯರ ಪಾತ್ರ ಗುರುತರವಾದದ್ದು. ರಾಷ್ಟ್ರವ್ಯಾಪಿಯಾಗಿ ಅಖಂಡ ಭಾರತದ ಸಂಕೇತವಾಗಿ ನಿರ್ಮಿಸಲಾಗಿರುವ 52 ಶಕ್ತಿಪೀಠಗಳು ರಾಷ್ಟ್ರವನ್ನು ಏಕತೆಯಿಂದಿರಿಸುವಲ್ಲಿ ಮಹಿಳೆಯ ಅಗತ್ಯತೆಯನ್ನು ತಿಳಿಸುತ್ತದೆ. ಇಂತಹ ಅನೇಕ ಆಚರಣೆಗಳ ಮೂಲಕ ಭಾರತೀಯ ಸಂಸ್ಕೃತಿಯು ಮಹಿಳೆ ಸಕಲ ಸೃಷ್ಟಿಯ ಸಾಕಾರಮೂರ್ತಿಯಾಗಿದ್ದಾಳೆ ಎನ್ನುವುದನ್ನು ಸಾಕ್ಷೀಕರಿಸುತ್ತದೆ ಎಂದು ಲೇಖಕಿ ಹಾಗೂ ನವದೆಹಲಿಯ ‘ದಿ ಚರ್ನ್’ ಸಂಸ್ಥೆಯ ಸಂಸ್ಥಾಪಕಿ ಶುಭ್ರಸ್ತ ಹೇಳಿದರು.

ದಿಶಾಭಾರತದ ‘ನನ್ನ ಭಾರತ’ ಯುವ ಅಭಿಯಾನದ ಅಂಗವಾಗಿ ಆಯೋಜಿಸಲಾಗಿರುವ ಆನ್‌ಲೈನ್ ಉಪನ್ಯಾಸ ಸರಣಿಯ ಎರಡನೇ ದಿನ Role of Women in Ekatmata of Bharat ಎಂಬ ವಿಷಯದ ಕುರಿತು ಅವರು ಬುಧವಾರ ಮಾತನಾಡಿದರು.

ನಮ್ಮ ಸಂಸ್ಖೃತಿ ಸೃಷ್ಟಿ ಮತ್ತು ಲಯದ ಶಕ್ತಿ ನಾರಿಗೆ ಇದೆ ಎನ್ನುವುದನ್ನು ಸೂಚಿಸುತ್ತದೆ. ದುರ್ಗಸಪ್ತಶತಿಯಲ್ಲಿ ಪುರುಷ ಮತ್ತು ಸ್ತ್ರೀ ಸ್ಥಾನಮಾನ ಸಮಾನವಾದದ್ದು ಎನ್ನುವುದನ್ನು ಶಿವ ಮತ್ತು ಶಕ್ತಿಯ ಸಂಭಾಷಣೆಯ ಮೂಲಕ ತಿಳಿಸಲಾಗಿದೆ. ನಮ್ಮ ಋಷಿಮುನಿಗಳು ಕೂಡ ಮಹಿಳೆಯರ ಗುರುತ್ವಕ್ಕೆ ತಲೆಬಾಗಿದ ನಿದರ್ಶನಗಳು ನಮ್ಮ ಪುರಾತನ ಸಾಹಿತ್ಯಗಳಿಂದ ದೊರಕುತ್ತವೆ. ಈ ನಿದರ್ಶನಗಳು ಮಹಿಳೆಯರ ಶ್ರೇಷ್ಠತೆಯ ಕುರಿತು ತಿಳಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಸಾವಿರಾರು ವರ್ಷಗಳ ಸಂಘರ್ಷದ ಇತಿಹಾಸವನ್ನು ಹೊಂದಿರುವ ಭಾರತದಲ್ಲಿ ಸಂಸ್ಕೃತಿಯ ರಕ್ಷಣೆಗೆ ಬಹುದೊಡ್ಡ ಕೊಡುಗೆಯನ್ನು ಮಹಿಳೆಯರು ತಮ್ಮ ಮನೆಯಲ್ಲಿನ ಆಚರಣೆಗಳ ಮೂಲಕ ನೀಡಿದ್ದಾರೆ. ರಾಷ್ಟ್ರದ ಸ್ವಾತಂತ್ರ್ಯ ಯಜ್ಞದಲ್ಲಿ ಅಗಣಿತ ಮಹಿಳೆಯರು ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಅನೇಕ ಸ್ವಾತಂತ್ರ್ಯ ಹೋರಾಟಗಾರರ ರಾಷ್ಟ್ರ ಕಾರ್ಯಕ್ಕೆ ಬಹುದೊಡ್ಡ ಬೆಂಬಲವಾಗಿ ನಿಂತಿದ್ದಾರೆ. ಅಂತಹ ವೀರವನಿತೆಯರನ್ನು ನಾವು ಸ್ಮರಿಸಿಕೊಳ್ಳದೇ ಇರುವುದು ವಿಪರ್ಯಾಸದ ಸಂಗತಿ ಎಂದು ನುಡಿದರು.

ವಿದೇಶಿಗರ ನಿರಂತರ ದಾಳಿಗೆ ಸಿಲುಕಿ ಬೌದ್ಧಿಕ ದಾಸ್ಯಕ್ಕೆ ಒಳಗಾಗಿರುವ ನಾವು ಇಲ್ಲಿನ ಸಮಸ್ಯೆಗಳಿಗೆ ವಿದೇಶಿ ನೆಲೆಗಟ್ಟಿನಲ್ಲಿ ಉತ್ತರವನ್ನು ಹುಡುಕುತ್ತಿರುವುದು ವಿಷಾದನೀಯ ಸಂಗತಿ. ಈ ಮಾನಸಿಕತೆಯೇ ಇಂದು ಅನೇಕ ಕೃತ್ಯಗಳಿಗೆ ಕಾರಣವಾಗಿದೆ. ಇಲ್ಲಿನ ಮಹಿಳೆಯರು ಭಾರತೀಯ ಚಿಂತನೆಗಳಾಧಾರಿತವಾಗಿ ಕಾರ್ಯಪ್ರವೃತ್ತರಾಗಲು ಮುಂದಾದರೆ ರಾಷ್ಟ್ರದಲ್ಲಿ ಬದಲಾವಣೆಯ ಅದ್ಭುತ ಕ್ರಾಂತಿಯನ್ನೇ ಮಾಡಬಹುದು ಎಂದರು.

Bengaluru: Shubhrasta, author and founder of Churn Organization, New Delhi spoke on the topic of Role of Women in Ekatmata of Bharat on the second day of the online lecture series organized as part of Disha Bharat’s ‘My Bharat Campaign on Wednesday.

Women’s role in India’s unity is important. The role of women in preserving India’s unity and identity is crucial. The 52 Shaktipeeths erected across the country as a symbol of a united India convey the importance of women in keeping the nation united. Through many such rituals, Indian culture proves that women are the embodiment of all creation

Our culture suggests that Women has the power of creation and destruction. The equal status of men and women in Durgasaptasati is conveyed through the dialogue between Shiva and Shakti. Instances of even our sages bowing down to the gravity of women can be found in our ancient literature. She expressed that these instances speak of the supremacy of women. In India, which has a conflict history of thousands of years, women have made a huge.

contribution to the preservation of culture through their rituals at home. Countless women have sacrificed themselves in the nation’s freedom struggle. She has been a great support to the national cause of many freedom fighters. She said that it is ironic that we do not remember such heroic women.

It is regrettable that we, who are under constant attack by foreigners and are still under intellectual slavery, are looking for answers to our problems in foreign bases. This mentality is responsible for many acts today. She said that if the women here take action based on Indian thoughts, they can make a wonderful revolution of change in the nation.

Leave a Reply

Your email address will not be published.

This site uses Akismet to reduce spam. Learn how your comment data is processed.