ಮಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ. ಮಂಗಳೂರು ಮಹಾನಗರದ ಯುಗಾದಿ ಉತ್ಸವವು ನಗರದ ಉರ್ವ ಮಾರ್ಕೆಟ್ ಮೈದಾನದಲ್ಲಿ ಬುಧವಾರ ಸಂಜೆ ನಡೆಯಿತು. ಉತ್ಸವದ ಕಾರ್ಯಕ್ರಮದಲ್ಲಿ ಸ್ವಯಂಸೇವಕರಿಂದ ಶಾರೀರಿಕ ಪ್ರದರ್ಶನದ ಬಳಿಕ ಬೌದ್ಧಿಕ್  ಕಾರ್ಯಕ್ರಮವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ಣಾಟಕ ದಕ್ಷಿಣ ಪ್ರಾಂತ ಕಾರ್ಯವಾಹ ಡಾ. ಜಯಪ್ರಕಾಶ್ ನಡೆಸಿಕೊಟ್ಟರು.

ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಖ್ಯಾತ ತುಳು ರಂಗಭೂಮಿ ಕಲಾವಿದ ಹಾಗೂ ನಿರ್ದೇಶಕ ವಿಜಯಕುಮಾರ್  ಕೊಡಿಯಾಲ್ಬೈಲ್ ಅವರು ವಹಿಸಿದ್ದರು. ರಾಷ್ಟೀಯ ಸ್ವಯಂಸೇವಕ ಸಂಘದ ಕರ್ಣಾಟಕ ದಕ್ಷಿಣ  ಪ್ರಾಂತ ಸಂಘಚಾಲಕರಾದ  ಡಾ.ವಾಮನ್ ಶೆಣೈ ಮತ್ತು ಮಹಾನಗರ ಸಂಘಚಾಲಕರಾದ ಡಾ.ಸತೀಶ್ ರಾವ್ ಉಪಸ್ಥಿತರಿದ್ದರು. ಸ್ವಯಂಸೇವಕರು, ಸಂಘದ ಹಿತೈಷಿಗಳು ಮತ್ತು ಸಾರ್ವಜನಿಕರು ಸೇರಿ ಒಟ್ಟು 1450 ಜನ ಭಾಗವಹಿಸಿದ್ದರು.

ಯುಗಾದಿ ಹಬ್ಬ ಹಿಂದೂ ಧರ್ಮದ ಹೊಸ ವರ್ಷದ ಸಂಭ್ರಮಾಚರಣೆ ಅಂದರೆ ಸಂಘದ ಸ್ವಯಂಸೇವಕರಿಗೆ ಅದು ಸ್ಥಾಪಕರ ಜನ್ಮದಿನವೂ ಹೌದು. ಅವರು ಹೇಳಿದ ರೀತಿಯಲ್ಲಿ ಇಂದು ಸ್ವಯಂಸೇವಕರು ಸಮಾಜದ ಬೇರೆ ಬೇರೆ ರಂಗಗಳಲ್ಲಿ ಸಮಾಜ ಪರಿವರ್ತನೆಯ ಕೆಲಸವನ್ನು ಮಾಡುತ್ತಿದ್ದಾರೆ. ಸಂಘದ ಗುರಿಯಾದ ದೇಶದ ಪರಮವೈಭವ ಸ್ಥಿತಿ ಬಂದೇ ಬರುತ್ತದೆ. ಇದರ ಕಿರಣಗಳು ಗೋಚರಿಸಲು ಪ್ರಾರಂಭವಾಗಿದೆ ಎಂದು ಮಾನ್ಯ ಡಾ. ಜಯಪ್ರಕಾಶ್ ಆಶಿಸಿದರು.

ನನಗೆ ಈ ಕಾರ್ಯಕ್ರಮದ ಶಿಸ್ತು ನೋಡಿದಾಗ ನಿಜವಾಗಿಯೂ ನಾನು ಬಾಲ್ಯದಲ್ಲಿ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು ನೆನಪಿಗೆ ಬರುತ್ತದೆ. ಈ ವೇದಿಕೆಯಲ್ಲಿ  ನಾನು ರಾಷ್ಟ್ರೀಯ ವಿಚಾರವುಳ್ಳ ನಾಯಕ ಶಿವಾಜಿಯ ಬಗ್ಗೆ ನಾಟಕ ಮಾಡುವುದಾಗಿ ವಿಜಯಕುಮಾರ್ ಕೊಡಿಯಾಲ್ಬೈಲ್ ಅವರು ಘೋಷಣೆ ಮಾಡಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.