ಬೆಂಗಳೂರು: ಸಾವರ್ಕರ್ ಸಾಹಿತ್ಯ ಸಂಘ (ರಿ.) ಬೆಂಗಳೂರು ಮತ್ತು ದಿ ಮಿಥಿಕ್ ಸೊಸೈಟಿ ಬೆಂಗಳೂರು ವತಿಯಿಂದ ಸಾವರ್ಕರ್ ಸಮಗ್ರ ಸಂಪುಟ – 6 ಪುಸ್ತಕ ಬಿಡುಗಡೆ ಕಾರ್ಯಕ್ರಮ ಮೇ 21 ರಂದು ಬೆಂಗಳೂರಿನ ಇಂಡಿಯನ್ ಇಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನ ಬಿ.ಪಿ.ವಾಡಿಯ ಸಭಾಂಗಣದಲ್ಲಿ ಬೆಳಗ್ಗೆ 10.15ಕ್ಕೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ವಿ.ನಾಗರಾಜ್, ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ವೀರ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಭಾಗವಹಿಸಲಿದ್ದಾರೆ.

ಸಾವರ್ಕರ್ ಸಾಹಿತ್ಯ ಸಂಘದ ಅಧ್ಯಕ್ಷ ಡಾ.ಜಿ.ಬಿ.ಹರೀಶ, ಚಿಂತಕರು ಹಾಗೂ ಸಂಪುಟದ ಅನುವಾದಕರಾದ ಡಾ.ಎಸ್.ಆರ್.ಲೀಲಾ, ಪ್ರಕಾಶಕರು ಮತ್ತು ಸಾವರ್ಕರ್ ಸಾಹಿತ್ಯ ಸಂಘದ ವಿಶ್ವಸ್ಥ ಹರ್ಷ ಸಮೃದ್ಧ, ಅಂಕಣಕಾರ ಹಾಗೂ ಲೇಖಕ ರೋಹಿತ್ ಚಕ್ರತೀರ್ಥ, ಪತ್ರಕರ್ತ ರಮೇಶ್ ದೊಡ್ಡಪುರ ಉಪಸ್ಥಿತರಿರಲಿದ್ದಾರೆ.

Leave a Reply

Your email address will not be published.

This site uses Akismet to reduce spam. Learn how your comment data is processed.