ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕಾರ್ಯಕಾರೀ ಮಂಡಳಿ ಸಭೆಯು 16-19 ಅಕ್ಟೋಬರ್ 2022ರಿಂದ ನಡೆಯಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರಚಾರ ಪ್ರಮುಖರಾದ ಶ್ರೀ ಸುನಿಲ್ ಅಂಬೇಕರ್ ಅವರು ತಿಳಿಸಿದ್ದಾರೆ.

ಈ ಕುರಿತಾಗಿ ಮಾತನಾಡಿದ ಅವರು, “ಈ ಬೈಠಕ್ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 16- 19 ಅಕ್ಟೋಬರ್ 2022 ರವರೆಗೆ ನಡೆಯಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಶ್ರೀ ಮೋಹನ್‌ ಭಾಗವತ್‌, ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆ, ಎಲ್ಲ ಸಹ-ಸರಕಾರ್ಯವಾಹರು ಹಾಗೂ ಅಖಿಲ ಭಾರತ ಮಟ್ಟದ ಇತರ ಅಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರು ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ” ಎಂದರು.

ಮುಂದುವರೆದು ಮಾತನಾಡಿದ ಅವರು, “ಬೈಠಕ್‌ನಲ್ಲಿ ಈ ವರ್ಷ ಸಾಧಿಸಿರುವ ಕೆಲಸದ ಪ್ರಗತಿಯ ಕುರಿತಾಗಿ ಸಮೀಕ್ಷೆ ನಡೆಯಲಿದೆ‌. ಈ ವರ್ಷದ ಮಾರ್ಚ್‌ನಲ್ಲಿ ನಡೆದ ಅಖಿಲ ಭಾರತ ಪ್ರತಿನಿಧಿ ಸಭೆಯಲ್ಲಿ ಅನುಮೋದನೆಗೊಂಡು ಕಾರ್ಯರೂಪದಲ್ಲಿರುವ ಕ್ರಿಯಾ ಯೋಜನೆಗಳ ಕುರಿತಾಗಿ,ಸಂಘಟನಾ ಕಾರ್ಯಗಳ ವಿಸ್ತರಣೆಯ ಬಗ್ಗೆಯೂ ಸಮೀಕ್ಷೆ ನಡೆಸಲಾಗುವುದು.”

“ಇದರೊಂದಿಗೆ ದೇಶದ ಪ್ರಮುಖವಾಗಿರುವ ಪ್ರಚಲಿತ ವಿದ್ಯಮಾನಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ಸರಸಂಘಚಾಲಕರ ವಿಜಯದಶಮಿ ಭಾಷಣದಲ್ಲಿ ಪ್ರಸ್ತಾಪಿಸಲಾದ ಪ್ರಮುಖ ವಿಷಯಗಳ ಕುರಿತು ಮುಂದೆ ಮಾಡಬಹುದಾದ ಯೋಜನೆಗಳು ಮಾರ್ಗಗಳು ಮತ್ತು ವಿಧಾನಗಳ ಬಗ್ಗೆ ಬೈಠಕ್‌ನಲ್ಲಿ ಚರ್ಚಿಸಲಾಗುವುದು”, ಎಂದರು.

Leave a Reply

Your email address will not be published.

This site uses Akismet to reduce spam. Learn how your comment data is processed.