ಬೆಂಗಳೂರು: ಸ್ವದೇಶಿ ಜಾಗರಣ ಮಂಚ್ – ಕರ್ನಾಟಕ ವತಿಯಿಂದ ಜಯನಗರದ ಚಂದ್ರಗುಪ್ತ ಮೌರ್ಯ ಗ್ರೌಂಡ್ (ಶಾಲಿನಿ ಗ್ರೌಡ್ಸ್)ನಲ್ಲಿ ಸ್ವದೇಶಿ ಮೇಳ ಏರ್ಪಡಿಸಲಾಗಿದೆ. ಫೆಬ್ರವರಿ 7 ರಿಂದ 11 ರವರೆಗೆ ಬೆಳಗ್ಗೆ 10 ರಿಂದ ರಾತ್ರಿ 9 ಗಂಟೆ ತನಕ ಜಯನಗರದ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ ನಡೆಯಲಿದ್ದು ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. 

ಕಾರ್ಯಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಉದ್ಘಾಟಿಸಲಿದ್ದು, ಜಯನಗರದ ಶಾಸಕ ಸಿ.ಕೆ.ರಾಮಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಅದಮ್ಯ ಚೇತನದ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್, ನಟ ಪ್ರಕಾಶ್ ಬೆಳವಾಡಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ.ಬಿ.ಎಂ.ಕುಮಾರ ಸ್ವಾಮಿ  ಮುಖ್ಯ ಭಾಷಣ ಮಾಡಲಿದ್ದಾರೆ.

ಫೆಬ್ರವರಿ 7 ರಿಂದ 11 ರವರೆಗೆ ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಇಲ್ಲಿದೆ ವಿವರ

ಮೊದಲ ದಿನದ : ಫೆಬ್ರವರಿ 7, 2024 ಬುಧವಾರ
ಪ್ರತಿ ದಿನ ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ
ಪಂಚಗವ್ಯ ಚಿಕಿತ್ಸೆ ( ಉಚಿತ ಸಲಹೆ). ಸಂಜೆ 5:30 ಕ್ಕೆ ಸಾರ್ವಜನಿಕ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ‌. ರಾತ್ರಿ 7:15 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿದೆ.

ಎರಡನೇ ದಿನ: ಫೆಬ್ರವರಿ 8, 2024 ಗುರುವಾರ
ಬೆಳಗ್ಗೆ 10 ರಿಂದ 1.30 ರವರೆಗೆ ತಾರಸಿ ತೋಟ ತರಬೇತಿ ಕಾರ್ಯಾಗಾರ ನಡೆಯಲಿದೆ. ಮಧ್ಯಾಹ್ನ 3 ರಿಂದ 4.30ರವೆರಗೆ ಮಹಿಳೆಯರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಮಹಿಳಾ ಉದ್ಯಮಕ್ಕಿರುವ ಅವಕಾಶ – ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಎಂಬ ವಿಷಯದ ಕುರಿತು ಈ ಸಂವಾದ ನಡೆಯಲಿದೆ. ರಾತ್ರಿ 7 ಗಂಟೆಗೆ ತಾಳವಾದ್ಯ ಕಚೇರಿ, ಲಯಲಾವಣ್ಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.          

ಮೂರನೇ ದಿನ: ಫೆಬ್ರವರಿ 9, 2024 ಶುಕ್ರವಾರ
ಬೆಳಗ್ಗೆ 10 ರಿಂದ 1.30 ರವರೆಗೆ ಆಯುರ್ವೇದ ಶಿಬಿರ ನಡೆಯಲಿದೆ. ಮಧ್ಯಾಹ್ನ 2.30 ರಿಂದ 5.30 ರವರೆಗೆ ಗೋ ಉತ್ಪನ್ನ ತಯಾರಿಕಾ ಶಿಬಿರ. ರಾತ್ರಿ 7 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ವಯೊಲಿನ್ ಕಚೇರಿ ನಡೆಯಲಿದೆ.

ನಾಲ್ಕನೆ ದಿನ: ಫೆಬ್ರವರಿ 10, 2024 ಶನಿವಾರ

ಬೆಳಗ್ಗೆ 11 ರಿಂದ 1 ಗಂಟೆವರೆಗೆ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ‘ನಿರುದ್ಯೋಗ ಸಮಸ್ಯೆ, ಪರಿಹಾರದ ಮಾರ್ಗಗಳು’ ಎಂಬ ವಿಷಯದ ಕುರಿತು ನಡೆಯಲಿದೆ‌. ಮಧ್ಯಾಹ್ನ 3 ರಿಂದ 4.30 ವರೆಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ದೇಶೀಯಾ ಕ್ರೀಡೆಗಳು ಇರಲಿದೆ. ಸಂಜೆ 5.30 ರಿಂದ 6.45 ರವರೆಗೆ ಗೋ ಗೀತೆ , ನೃತ್ಯ, ಗೋ ಹರಿಕಥೆ ನಡೆಯಲಿದೆ‌. ರಾತ್ರಿ 7.ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೃಷ್ಣ ಪಾರಿಜಾತ ಪ್ರಸಂಗದ ಕುರಿತು ಸೂತ್ರ ಸಲಾಕೆ ಬೊಂಬೆಯಾಟ ನಡೆಯಲಿದೆ‌.

ಐದನೇ ದಿನ : ಫೆಬ್ರವರಿ 11, ಭಾನುವಾರ

ಬೆಳಗ್ಗೆ 10 ರಿಂದ 1.30 ರವರೆಗೆ ನಿತ್ಯ ಬಳಕೆ ವಸ್ತುಗಳ ತಯಾರಿಕಾ ಶಿಬಿರ ನಡೆಯಲಿದೆ. ಮಧ್ಯಾಹ್ನ 3 ರಿಂದ 4.30 ರವರೆಗೆ ಮನೆ ಮನೆಗಳಲ್ಲಿ ಸ್ವದೇಶಿ ಭಾವದ ಪ್ರಕಟೀಕರಣದ ಕುರಿತು ಕುಟುಂಬ ಪ್ರಬೋಧನ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7.15 ಕ್ಕೆ ಆಚಾರ್ಯ ಚಾಣಕ್ಯ ನಾಟಕ ನಡೆಯಲಿದೆ.

ಸಾಂಸ್ಕ್ರತಿಕ ಕಾರ್ಯಕ್ರಮದ ವಿವರ ಸ್ವದೇಶಿ ಮೇಳದ ವಿವರಗಳಿಗಾಗಿ
ಹೇಮಂತ್-9986762726 ಚೇತನ್ -9886749060
ದೇವರಾಜ್ – 9738351383 ಮಹಾಂತೇಶ್ -9845303047 ದಿನೇಶ್ – 9900030100 ಪ್ರದೀಪ್ – 9964408704

Leave a Reply

Your email address will not be published.

This site uses Akismet to reduce spam. Learn how your comment data is processed.