ಇಂದು ಪುಣ್ಯಸ್ಮರಣೆ


ಪರಮಹಂಸ ಯೋಗನಾಂದ ಅವರು ಭಾರತದ ಆಧ್ಯಾತ್ಮವನ್ನು ಜಗದಗಲ ಪರಿಚಯಿಸಿದ ವ್ಯಕ್ತಿಗಳಲ್ಲಿ ಪ್ರಮುಖರು. ತಮ್ಮ ಪುಸ್ತಕ ಯೋಗಿಯ ಆತ್ಮಕಥೆಯ ಮೂಲಕ ಧ್ಯಾನ ಹಾಗೂ ಕ್ರಿಯಾಯೋಗದ ಬೋಧನೆಗಳನ್ನು ಲಕ್ಷಾಂತರ ಪಾಶ್ಚಿಮಾತ್ಯರಿಗೆ ಪರಿಚಯಿಸಿದವರು. ಧ್ಯಾನದ ಮೂಲಕ ಒಬ್ಬರು ತಮ್ಮ ದೈನಂದಿನ ಜೀವನದಲ್ಲಿ ದೇವರನ್ನು ಸ್ಪಷ್ಟವಾದ ಪ್ರೀತಿಯ ಸತ್ಯವಾಗಿ ಅರಿತುಕೊಳ್ಳಬಹುದು ಎಂಬುದನ್ನು ತಿಳಿಸಿದವರು. ಇಂದು ಅವರ ಪುಣ್ಯತಿಥಿ

ಪರಿಚಯ
ಪರಮಹಂಸ ಯೋಗಾನಂದ ಅವರು ಜನವರಿ 5 , 1893 ರಂದು ಗೋರಖ್ ಪುರದಲ್ಲಿ ಜನಿಸಿದರು. ಅವರ ಮೂಲ ಹೆಸರು ಮುಕುಂದ ಲಾಲ್ ಘೋಷ್. ಅವರ ತಂದೆ ಹಾಗೂ ತಾಯಿ ಇಬ್ಬರೂ ಆಧ್ಯಾತ್ಮಿಕ ಮತ್ತು ಯೋಗದ ಮಹಾನ್ ಗುರುಗಳಾದ ಲಾಹಿರಿ ಮಹಾಶಯರ ಶಿಷ್ಯರಾಗಿದ್ದರು. ಪರಮಹಂಸ ಅವರು ಬಾಲ್ಯದಿಂದಲೇ ಆಧ್ಯಾತ್ಮಿಕ ಕಡೆ ಹೆಚ್ಚು ಒಲವು ತೋರಿದವರು.

ಜೀವನ
ಪರಮಹಂಸ ಯೋಗಾನಂದ ಅವರ ಗುರುಗಳಾದ ಸ್ವಾಮಿ ಶ್ರೀ ಯುಕ್ತೇಶ್ವರರ ತರಬೇತಿಯ ಅಡಿಯಲ್ಲಿ ಸ್ವಾಮಿ ಯೋಗಾನಂದ ಆರು ತಿಂಗಳ ಅಲ್ಪಾವಧಿಯಲ್ಲಿ ಆಧ್ಯಾತ್ಮಿಕ ಸಾಧನೆಗೈದರು. ಇದರ ಮೂಲಕ ಶ್ರೀ ಯುಕ್ತೇಶ್ವರರು 1914 ರಲ್ಲಿ ಸ್ವಾಮಿ ಯೋಗಾನಂದ ಅವರಿಗೆ ಸನ್ಯಾಸಿ ದೀಕ್ಷೆ ನೀಡಿದರು. ನಂತರ ಸ್ವಾಮಿ ಯೋಗಾನಂದ ಅವರು 1920ರಲ್ಲಿ ಅಮೆರಿಕಕ್ಕೆ ಬಂದರು. ಅವರು ಮುಂದಿನ ನಾಲ್ಕು ವರ್ಷಗಳ ಕಾಲ ಆಧ್ಯಾತ್ಮಿಕ ಪ್ರಚಾರಗಳಲ್ಲಿ ಯುನೈಟೆಡ್ ಸ್ಟೇಟ್ಸ್ ನಾದ್ಯಂತ ಪ್ರಯಾಣಿಸಿದರು. 1935-1936 ರಲ್ಲಿ ಅವರು ಭಾರತಕ್ಕೆ ವಾಪಸ್ ಆದರು.

ಈ ಸಮಯದಲ್ಲಿ ಶ್ರೀ ಯುಕ್ತೇಶ್ವರರು ಅವರಿಗೆ ಪರಮಹಂಸ ಎಂಬ ಉನ್ನತ  ಬಿರುದನ್ನು ನೀಡಿದರು. ಹೀಗಾಗಿ ಸ್ವಾಮಿ ಯೋಗಾನಂದರು ಪರಮಹಂಸ ಯೋಗಾನಂದರಾದರು. 1952 ರಲ್ಲಿ ಅವರು ಉಪನ್ಯಾಸ ಮತ್ತು ಬರವಣಿಗೆಯನ್ನು ಪ್ರಾರಂಭಿಸಿದರು. ಇದರಿಂದಾಗಿ ಪಾಶ್ಚಿಮಾತ್ಯ ಸಂಸ್ಕೃತಿಯ ಮೇಲೆ ಅವರ ಪ್ರಭಾವ ಬೀರಿತು.

ಅವರು ವಾಸ್ತವ್ಯದ ಸಮಯದಲ್ಲಿ ರಮಣ ಮಹರ್ಷಿ , ಆನಂದಮೋಯಿ ಮಾ, ಶ್ಯಾಮಚರಣರ ಸಂತ ಹಾಗೂ ಮಹಾತ್ಮ ಗಾಂಧಿಯವರಂತಹ ಅನೇಕ ಮಹಾನ್ ವ್ಯಕ್ತಿಗಳು ಅವರ ಸಂಪರ್ಕ ಹೊಂದಿದರು. ನಂತರ ಅವರು ತಮ್ಮ ಹೆಚ್ಚಿನ ಸಮಯವನ್ನು ಅವರ ಆತ್ಮಚರಿತ್ರೆ ಹಾಗೂ ಇನ್ನಿತರ ಬರಹಗಳಿಗೆ ಮೀಸಲಿಟ್ಟರು. ಅವರು ಭಗವದ್ಗೀತೆ ಮತ್ತು ಕ್ರಿಸ್ತನ ಕುರಿತು ಬರೆದ ಪುಸ್ತಕಗಳು ಅಪಾರ ಜನ ಮನ್ನಣೆ ಗಳಿಸಿವೆ. ಜೊತೆಗೆ ಯೋಗಿಯ ಆತ್ಮಕಥೆ ಇಂದಿಗೂ ಸಹ ಹೆಚ್ಚು ಪ್ರಚಾರದಲ್ಲಿದೆ.

ಮಾರ್ಚ್ 7 , 1952 ರಲ್ಲಿ ಪರಮಹಂಸ ಯೋಗಾನಂದರು ವಿಧಿವಶರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.