ಇಂದು, ಜ್ಯೇಷ್ಠ ಪ್ರಚಾರಕ, ಅಪ್ರತಿಮ ಸಂಘಟಕ, ಮೇರು ಚಿಂತಕ, ಸಿದ್ಧಹಸ್ತ ಲೇಖಕ ಹೊ.ವೆ. ಶೇಷಾದ್ರಿಯವರ ನೂರನೆಯ ಜಯಂತಿಯ (26.5.1926-26.5.2026) ಸಂಭ್ರಮ.

1926 ರ ಮೇ 26ರಂದು ಬೆಂಗಳೂರಿನಲ್ಲಿ ಜನಿಸಿದ ಹೊ.ವೆ. ಶೇಷಾದ್ರಿಯವರು 1942ರಲ್ಲಿ ಸಂಘದ ಸಂಪರ್ಕಕ್ಕೆ ಬಂದರು. ತಮ್ಮ ಎಂ.ಎಸ್ಸಿ ರಸಾಯನಶಾಸ್ತ್ರ ಸ್ನಾತಕೋತ್ತರ ಶಿಕ್ಷಣದ ಬಳಿಕ 1946ರಲ್ಲಿ ಸಂಘದ ಪ್ರಚಾರಕರಾದರು. ಕರ್ನಾಟಕದ ಮೊದಲ ತಂಡದ 3 ಪ್ರಚಾರಕರಾದ ಕೃ. ಸೂರ್ಯನಾರಾಯಣ ರಾವ್, ಚಂಪಕನಾಥ್ ಜತೆಗೆ ಪ್ರಚಾರಕರಾದರು.

1947ರಲ್ಲಿ ಕೋಲಾರ ಜಿಲ್ಲಾ ಪ್ರಚಾರಕ್, 1948ರಲ್ಲಿ ಸಂಘದ ಮೇಲಿನ ನಿಷೇಧದ ವೇಳೆ ಬಂಧನ, 1953ರಲ್ಲಿ ಪ್ರಾಂತಕಾರ್ಯವಾಹ, 1953-1956 ಮಂಗಳೂರು ವಿಭಾಗ ಪ್ರಚಾರಕ್ ಆಗಿ ಹೆಚ್ಚುವರಿ ಹೊಣೆಗಾರಿಕೆ, 1960ರಲ್ಲಿ ಕರ್ನಾಟಕ ಪ್ರಾಂತ ಪ್ರಚಾರಕ್, 1980 ರಲ್ಲಿ ಸಹಕ್ಷೇತ್ರ ಪ್ರಚಾರಕ್, 1981 ದಕ್ಷಿಣ ಕ್ಷೇತ್ರ ಪ್ರಚಾರಕ್, 1983ರಲ್ಲಿ ಅಖಿಲ ಭಾರತೀಯ ಪ್ರಚಾರಕ ಪ್ರಮುಖ್, 1984ರಲ್ಲಿ ಸಹಸರಕಾರ್ಯವಾಹ, 1987-2000 ವರೆಗೆ ಸರಕಾರ್ಯವಾಹ, 2000 ರಲ್ಲಿ ಸಹಸರಕಾರ್ಯವಾಹ, 2003ರಲ್ಲಿ ಅಖಿಲ ಭಾರತೀಯ ಪ್ರಚಾರಕ ಪ್ರಮುಖ್ ಜವಾಬ್ದಾರಿ ನಿರ್ವಹಿಸಿದರು.
2005ರ ಅಗಸ್ಟ್ 14 ರಂದು ಸಂಜೆ 6.57 ಕ್ಕೆ ಇಹಲೋಕ ಯಾತ್ರೆ ಮುಗಿಸಿದರು.

“ಶೇಷಾದ್ರಿಯವರದು ಸೃಜನಶೀಲ, ಸಂವೇದನಾಶೀಲ, ಸ್ಥಿತಪ್ರಜ್ಞ ವ್ಯಕ್ತಿತ್ತ. ಅವರು ವೈಶ್ವಿಕ ವಿಚಾರಗಳ ಪ್ರತಿಪಾದಕ” ಎಂದಿದ್ದರು 5ನೇ ಸರಸಂಘಚಾಲಕರಾಗಿದ್ದ ಕು.ಸೀ. ಸುದರ್ಶನ್ ಜೀ

ಕನ್ನಡದಲ್ಲಿ 30, ಇಂಗ್ಲೀಷ್ ನಲ್ಲಿ 11 – ಒಟ್ಟು 41 ಪುಸ್ತಕಗಳ ಕರ್ತೃ. ಉತ್ಥಾನ, ವಿಕ್ರಮ , ಆರ್ಗನೈಸರ್ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ನೂರಾರು ಲೇಖನಗಳು, ಅಂಕಣಬರಹಗಳು, ಪ್ರೇರಣಾದಾಯಿ ಪತ್ರಸಂದೇಶಗಳ ಮೂಲಕ ನಿರಂತರ ಬರವಣಿಗೆಯ ಕಾರ್ಯ ಹೊ.ವೆ. ಶೇಷಾದ್ರಿಯವರದು.

1982ರಲ್ಲಿ ಹೊ.ವೆ. ಶೇಷಾದ್ರಿಯವರ ತೋರ್ ಬೆರಳ್ ಕೃತಿಗೆ ಕರ್ನಾಟಕ ಸರಕಾರದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿತು. ವೈಚಾರಿಕ ವಲಯದಲ್ಲಿ ಬಹುಪ್ರಶಂಸೆಗೊಳಗಾದ ಪುಸ್ತಕಗಳ ಪೈಕಿ ಒಂದು.

ತಮ್ಮ ಬಿಡುವಿಲ್ಲದ ಪ್ರವಾಸದ ಮಧ್ಯೆಯೂ ಅವಿರತ ಬರವಣಿಗೆಯ ಮೂಲಕ ಸ್ವಯಂಸೇವಕರ ವೈಚಾರಿಕ ಹಂದರವನ್ನು ವಿಸ್ತರಿಸಿ, ಗಟ್ಟಿಗೊಳಿಸಿದವರು. ಸಮಾಜದೊಂದಿಗೆ ಸಂಘದ ಆಶಯಗಳನ್ನು ಹಂಚಿದವರು.

ಪುಸ್ತಕಗಳು:

  1. 1. ಯುಗಾವತಾರ (1967)
  2. 2. ⁠ತಾಯಿ ಕಾದಿಹಳು (1969)
  3. 3. ⁠ಕ್ರಾಂತಿಯಲ್ಲ ಭ್ರಾಂತಿ (1970)
  4. 4. ⁠ಅಮ್ಮಾ ಬಾಗಿಲು ತೆಗಿ (1970)
  5. 5. ⁠ಶಿವಾಜಿ (1972)
  6. 6. ⁠ಕೋರಿಕೆ (1973)
  7. 7. ⁠ಗುರು ಗೋವಿಂದ ಸಿಂಹ (1974)
  8. 8. ⁠ಭುಗಿಲು (1977)
  9. 9. ⁠ಅಸ್ಸಾಮಿನ ಆರ್ತಸ್ವರ (1980)
  10. 10. ⁠ಮೀನಾಕ್ಷಿಪರಂ – ಒಂದು ಎಚ್ಚರಿಕೆ (1981)
  11. 11.⁠ತೋರ್ ಬೆರಳು (1981)
  12. 12. ⁠ಆ ಕಾಳರಾತ್ರಿಯ ಪ್ರಶ್ನೆ (1981)
  13. 13. ⁠ಆಧುನಿಕ ಮಾನವ ಜೀವನದ ಕುರುಕ್ಷೇತ್ರದಲ್ಲಿ ಪಾರ್ಥಸಾರಥಿ ಯಾರು? (1982)
  14. 14. ⁠ಮೃಗಜಲ, ನಿಜಜಲ (1983)
  15. 15. ⁠ಭಾರತದಲ್ಲಿ ಕ್ರೈಸ್ತ ಚಟುವಟಿಕೆಗಳು. (1985)
  16. 16. ⁠ಪರಿಪ್ರಶ್ನ (1986)
  17. 17. ⁠ಕೃತಿರೂಪ ಸಂಘದರ್ಶನ (1990)
  18. 18⁠. ಇದೊಂದೇ ದಾರಿ (1995)
  19. 19. ⁠ವಿಕೃತಿಯಿಂದ ಸಂಸ್ಕೃತಿಯೆಡೆಗೆ (1995)
  20. 20. ⁠ದೇಶ ವಿಭಜನೆಯ ದುರಂತಕಥೆ (1995)
  21. 21. ⁠ನವನಿರ್ಮಾಣದ ಒಳಪದರಗಳು (1996)
  22. 22.⁠ಚರೈವೇತಿ (1996)
  23. 23. ⁠ಕೈದೀವಿಗೆ (1996)
  24. 24.⁠ದಿಶಾಬೋಧ (1998)
  25. 25. ⁠ನ್ಯಾಯಿಕ ಆಯೋಗಗಳ ಕಣ್ಣಲ್ಲಿ ಮತಾಂತರ (1999)
  26. 26. ⁠ಸಮರಸತೆಯ ಸವಾಲು (1999)
  27. 27. ⁠ಸಮಾಜಯೋಗ (2001)
  28. 28. ⁠ಹಿಂದು ಸಮಾಜಕ್ಕೆ ಸವಾಲುಗಳು- ಪರಿಹಾರಗಳು (2002)
  29. 29. ⁠ಜಾಗೃತಾತ್ಮರಿಗಾಗಿ (2004)
  30. 30. ⁠ಶ್ರೀ ಗುರೂಜಿ (2005)
  31. 31. Dr Hegdewar – Epoch Maker (1981)
  32. 32. ⁠Christian Missions in the eyes of Gandhiji (1981)
  33. 33. ⁠Warning of Meenakshipuram (1981)
  34. 34. ⁠The Tragic Story of Partition (1982)
  35. 35. ⁠RSS – A Vision in Action (1988)
  36. 36. ⁠Hindus abroad – The Dilemma: Dollar or Dharma (1990)
  37. 37. ⁠Universal Spirit of Hindu Nationalism (1991)
  38. 38. ⁠The Way (1991)
  39. 39. ⁠Implications of Christian Conversions (1999)
  40. 40. ⁠Yoga – A Science Imperative (2000)
  41. 41. ⁠Sri Guruji (2005)

Leave a Reply

Your email address will not be published.

This site uses Akismet to reduce spam. Learn how your comment data is processed.