ಬೆಂಗಳೂರು : ‘ವರ್ತಮಾನದಲ್ಲಿ ಶ್ರೀ ಗುರೂಜಿ ಗೋಳ್ವಲ್ಕರ್ ಚಿಂತನೆಗಳ ಪ್ರಸ್ತುತತೆ’ ಎನ್ನುವ ವಿಚಾರದ ಕುರಿತು ದಿ ಮಿಥಿಕ್ ಸೊಸೈಟಿಯಲ್ಲಿ ನಡೆದ ನೂರ್ ಅಹಮದ್ ಅಲಿ ಖಾನ್ ಸ್ಮಾರಕ ದತ್ತಿ ಉಪನ್ಯಾಸದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹರಾದ ಶ್ರೀ ಮುಕುಂದ ಅವರು ಮಾತನಾಡಿದರು.

“ವರ್ತಮಾನದ ಯುಗ ಎಂದರೇನು? ಯುಗ ಎನ್ನುವ ಶಬ್ದ ಭಾರತದ ವಿಶಿಷ್ಟ ಕೊಡುಗೆ. ಬಳಕೆಯ ದೃಷ್ಟಿಯಿಂದ ಕಾಲದ ಅರ್ಥವಿಟ್ಟುಕೊಂಡು ಬಳಸಲಾಗುತ್ತದೆ. ಆದರೆ ಅನೇಕ ಬಾರಿ ವ್ಯಕ್ತಿಗಳ ಜೊತೆಗೂ ಜೋಡಿಸಿಕೊಳ್ಳಲಾಗುತ್ತದೆ ಅಂದರೆ ಯುಗಪುರುಷ, ಯುಗ ಪ್ರವರ್ತಕ ಎನ್ನುವ ರೀತಿಯಲ್ಲಿ. ಬೆಳವಣಿಗೆ ಮತ್ತು ಬದಲಾವಣೆಗಳಾದಾಗ ಇದನ್ನು ಮಾಪಕವಾಗಿ ರಿಲೇಟಿವ್ ಟರ್ಮ್ ರೀತಿಯಲ್ಲಿ ಬಳಸುತ್ತೇವೆ. ಇವತ್ತಿನ ವಿಷಯದ ಮಟ್ಟಿಗೆ ಕಳೆದ 40-50ವರ್ಷಗಳ ಮಟ್ಟಿಗೆ ಮಾತ್ರ ಸೀಮಿತಗೊಳಿಸುವ ಕಡೆಗೆ ನಮ್ಮ ಗಮನವಿದೆ. ಎರಡನೆಯದಾಗಿ, Stand point. ನಾವು ಎಲ್ಲಿ ನಿಂತು ನೋಡುತ್ತೇವೆ ಅನ್ನುವುದೂ ಮುಖ್ಯ. Before corona, after corona, modern, post modern  ಎನ್ನುವ ಕಾಲ ವಿಂಗಡಣೆಯ ರೀತಿಯಿದೆ. ವರ್ತಮಾನದ ದೃಷ್ಟಿ ಎನ್ನುವಾಗ ನಾವು ಅನೇಕ ಬಾರಿ ಪಾಶ್ಚಾತ್ಯ ಜಗತ್ತಿನ ವ್ಯಾಪ್ತಿಯಲ್ಲಿ ಭಾರತವನ್ನೂ ನೋಡುತ್ತಿದ್ದೇವೆ. ಪಾಶ್ಚಾತ್ಯ ಚಿಂತನೆಗಳ ಮೂಲದ ತಳಹದಿಯ ಚಿಂತನೆಯ ಕನ್ನಡಕಗಳಲ್ಲಿ ನೋಡುವುದು ಹೆಚ್ಚಾಗಿದೆ. ಧರ್ಮಪಾಲರು ತಮ್ಮ ಭಾರತೀಯ ಚಿತ್ತ ,ಮಾನಸ ,ಕಾಲ ಪುಸ್ತಕದಲ್ಲಿ ಉಲ್ಲೇಖ ಮಾಡುತ್ತ- ಸಮಸ್ಯೆಯಿರುವುದು ನಮ್ಮ ದೇಶದವರೂ ಕೂಡ ಹೊರಗಿನ ಕಣ್ಣುಗಳಿಂದ ನೋಡುವುದರಿಂದ.
ಕೇವಲ ಒಬ್ಬ ಮಾಧವ ಸದಾಶಿವರಾವ್ ಗೋಳ್ವಲ್ಕರ್ ಚಿಂತನೆಗಳು ವ್ಯಕ್ತ ಆಗಿದ್ದು,ಇದು ಕೇವಲ ವ್ಯಕ್ತಿಯ ಚಿಂತನೆಗಳು ಅಂತ ಸೀಮಿತಗೊಳಿಸಿಕೊಳ್ಳದೆ, ನಾವು ನೋಡಬೇಕಾಗಿರುವುದು ಅದರ ಸತ್ವದ ಕುರಿತು. ಇದನ್ನು ಗುರೂಜಿಯವರು ಹೇಳಿದ್ದು ಹೊಸದಾಗಿ ಏನಲ್ಲ, ಇದು ಸನಾತನ ದೃಷ್ಟಿ, ಭಾರತೀಯ ಮೌಲ್ಯಗಳ ಒಟ್ಟು ಸಾರದ ಚಿಂತನೆ. ಅದು ಗುರೂಜಿಯವರ ಮೂಲಕ ಬಂದದ್ದು, ಅವರ ಬಾಯಿಂದ, ಅವರ ಚಿಂತನೆಗಳಿಂದ ಸುತ್ತಲಿನವರು ಗ್ರಹಿಸಿಕೊಂಡಿದ್ದು ಎಂಬ ರೀತಿಯಲ್ಲಿ ಇದನ್ನು ನೋಡಬೇಕಿದೆ. covel – ಪಾಶ್ಚಾತ್ಯ ವಿದ್ವಾಂಸ, ನ್ಯಾಯಶಾಸ್ತ್ರದ ವಿದ್ವಾಂಸ- ಉದಯನನ ಕುಸುಮಾಂಜಲಿಯ ಅನುವಾದ ಮಾಡಿದವನು.ಅವನು ಅದನ್ನು ಮುಗಿಸಿದ ಮೇಲೆ ಹೇಳುತ್ತಾರೆ, “ಭಾರತದಲ್ಲಿ ಚಿಂತಕರು ಅವರಿಗಾಗಿ ಸಿದ್ಧವಾದ ನೆಲದಲ್ಲಿ ಅವರು ಬೆಳೆಯುತ್ತಾರೆ, ಅವರು ಚಿಂತಿಸಿದ ವಾತಾವರಣ ನಿರ್ಮಿಸಿದವರು ಅವರಲ್ಲ.” ಗುರೂಜಿಯವರೂ ಕೂಡ ಇದೇ ದಾರಿಯಲ್ಲಿ ಬೆಳೆದವರು, ಅದನ್ನು ಮುಂದುವರೆಸಿಕೊಂಡು ಬಂದ ಚಿಂತನೆಗಳು ಅವರದ್ದು. ಹಾಗು ಈ ರೀತಿಯ ಚಿಂತನೆಗಳು ಅನೇಕ ಭಾರತೀಯರು ಅದಾಗಲೇ ವ್ಯಕ್ತಪಡಿಸಿದ್ದರು.ಉದಾಹರಣೆಗೆ ದೀನದಯಾಳ ಉಪಾಧ್ಯಾಯರು, ಅರವಿಂದರು,ವಿವೇಕಾನಂದರು ಇನ್ನಿತರರು.

ಗುರೂಜಿಯವರು ಶಾಶ್ವತವಾದ ದೃಷ್ಟಿಯಿಂದ ಚಿಂತಿಸಿದವರು‌. ಪ್ರಸ್ತುತತೆಯ ವಿಷಯಕ್ಕೆ ಬಂದಾಗ ಸಮಾಜದಲ್ಲಿ ಬದಲಾವಣೆ ಬಹಳವೇ ಆಗಿದೆ. ಸಮಾಜದ ಬೇರೆ ಬೇರೆ ಲೇಯರ್‌ಗಳನ್ನು ನೋಡಿದರೆ ಅದರ ರೂಪ ಕಾಲಾನುಕ್ರಮೇಣ ಬದಲಾಗಿದೆ, ಆದರೆ ಆ ರೂಪಗಳು ಯಾವುದರ ತಳಹದಿಯ ಮೇಲೆ ನಿಂತಿದೆಯೋ ಅದು ಶಾಶ್ವತವಾದುದು. ವ್ಯಕ್ತಿ, ಸಮಾಜ ಬದಲಾಗಬಹುದು, ಆದರೆ ವ್ಯಕ್ತಿಯ, ಸಮಾಜದ ಚಿಂತನೆಯ ದೃಷ್ಟಿಕೋನ ಶಾಶ್ವತವಾದುದು.

ಅರುಣ್ ಶೌರಿಯವರು ಅಂಬೇಡ್ಕರ್ ಬಗ್ಗೆ
Worshipping the flase god ಬರೆದಾಗ  – “ಯಾವುದೇ ವ್ಯಕ್ತಿಯ ಬದುಕಿನ ಬಿಡಿ ಭಾಗಗಳನ್ನು ನೋಡುವುದಕ್ಕಿಂತ ಒಟ್ಟು ಜೀವನದ ಸಂದೇಶವನ್ನು ನೋಡಬೇಕು” ಎನ್ನುವುದನ್ನ ದತ್ತೋಪಂಥ ಠೇಂಗಡಿ ಅವರು ಒತ್ತಿ ಹೇಳುತ್ತಿದ್ದರು. ಗುರೂಜಿಯವರ ಜೀವನ ದೃಷ್ಟಿಯ ಆಯಾಮದಿಂದಲೂ ಅವರ ಒಟ್ಟು ಜೀವನದ ಸಾರ ಸರ್ವಸ್ವವನ್ನು ಹೀಗೆಯೇ ನೋಡಬೇಕಿದೆ.

ಅನೇಕ ವಿಚಾರಗಳಲ್ಲಿ ಗುರೂಜಿ ಅವರು ತಮ್ಮ ಚಿಂತನೆಗಳನ್ನು ಆಳವಾಗಿ ನಮ್ಮ ಮುಂದಿಟ್ಟಿದ್ದಾರೆ. ಇಂದಿಗೆ ಅಗತ್ಯವಾದ ನಾಲ್ಕು ವಿಚಾರದ ಕುರಿತಾಗಿ ನನ್ನ ಹೆಚ್ಚಿನ ಮಂಡನೆ ಅಗತ್ಯವಿದೆ ಎಂದೆನಿಸಿದೆ. ಒಂದು ಬದುಕನ್ನು ನೋಡುವ ರೀತಿ, ಎರಡನೆಯದಾಗಿ ಈಗಿನ ತಂತ್ರಜ್ಞಾನದ ಯುಗದಲ್ಲಿ ನಮ್ಮ ಬದುಕಿನೊಳಗೆ ಟೆಕ್ನಾಲಜಿ ವ್ಯಾಪ್ತಿ, ಮೂರನೆಯದ್ದು ಶಿಕ್ಷಣ ಮತ್ತು ಶಿಕ್ಷಣದ ಭವಿಷ್ಯ, ನಾಲ್ಕನೆಯದ್ದು ಬದಲಾಗುತ್ತಿರುವ ಜಾಗತಿಕ ವ್ಯವಸ್ಥೆ ಮತ್ತು
ರಾಷ್ಟ್ರೀಯತೆ.

ಇಂದು ನಾವು ಬದುಕನ್ನು ನೋಡುವ ರೀತಿ ಏನಾಗಿದೆ? ಭಾರತೀಯರ ಸ್ಟಾಂಡ್ ಪಾಯಿಂಟ್ ಯಾವುದು? ಅಮೆರಿಕದ ದೃಷ್ಟಿಯೇ ಭಾರತಕ್ಕೆ ಬರ್ತಿದೆಯಾ ಎನ್ನುವ ಪ್ರಶ್ನೆಯೂ ಇದೆ. ಅದಕ್ಕೆ ಟೆಕ್ನಾಲಜಿ ಕಾರಣವಾಗಿರಬಹುದು ಅಥವಾ ಮತ್ತೇನೋ ಕಾರಣವೂ ಇರಬಹುದು ಇರಬಹುದು.

ಇನ್ನು ಅಲ್ಲಿನ ಪರಿಭಾಷೆಗಳು ಅಂದರೆ ಲಿಬರಲ್, ವೋಕ್ ಕಲ್ಚರ್,ಫ್ಯಾಸಿಸ್ಟ್ ಇತ್ಯಾದಿಗಳು ಬರಬಹುದು. ಅದರಲ್ಲಿ  ಕೆಲವು ಒಳ್ಳೆಯದೂ ಇರಬಹುದು. ಆದರೆ ಭಾರತೀಯವಲ್ಲದ ಈ ಮಾನಸಿಕತೆಗಳು ಬದುಕನ್ನು ನೋಡುವ ದೃಷ್ಟಿಕೋನವಾಗಿ ಬದಲಾಗುತ್ತಿದೆ.ನಮ್ಮ ಬದುಕಿಗೆ ಈ ವಿಚಾರಗಳು ನೇರವಾಗಿ ತಟ್ಟುತ್ತಿದೆ. ಅದು ಈಗಿನ ಕೇವಲ ಯುವವರ್ಗಕ್ಕೆ ಸೀಮಿತವಾಗಿಲ್ಲ, ನಗರೀಕರಣದ ವ್ಯಾಪ್ತಿಗೆ ಇದು ಬರುತ್ತಿದೆ. ಕೇವಲ ನಮ್ಮ ಸುಖ ನಮಗೆ ಮುಖ್ಯ, ನಾವು ಮಾಡಿದ್ದೆಲ್ಲವೂ ಸರಿ, ನಮಗೆ ಎಲ್ಲದಕ್ಕೂ ವಿನಾಯತಿ ಬೇಕು ಎನ್ನುತ್ತಿದ್ದಾರೆ‌. ಸಮಾಜದಲ್ಲಿ ನಮ್ಮ ನಡುವೆ ನಾಲ್ಕು ಜನರಿದ್ದಾಗ ಅನುಸರಿಸಿಕೊಂಡು ಹೋಗುವ, ಅವರ ಅಭಿಪ್ರಾಯವನ್ನೂ ಮನ್ನಿಸುವ, ಒಗ್ಗಿಕೊಂಡು ಹೋಗುವ ಗುಣ ಕಾಣೆಯಾಗುತ್ತಿದೆ. ಇದನ್ನು ಗುರೂಜಿ ಕೂಡ ಉಲ್ಲೇಖ ಮಾಡುತ್ತಾರೆ.

ಇನ್ನು ನಮ್ಮದು ಈಗ ಸ್ಪರ್ಧಾತ್ಮಕ ಜಗತ್ತು,  competitive world, ಗುರೂಜಿಯವರು ಇದರ ಕುರಿತು ತಮ್ಮ ನಿಲುವುಗಳನ್ನು ವ್ಯಕ್ತಪಡಿಸಿದ್ದಾರೆ‌.ಅವರು ಹೇಳುತ್ತಾರೆ, “ಈ ಮಾನಸಿಕತೆಯ ಹಿಂದೆ ಇರುವ ಸುಖ ಎನ್ನುವ ಪರಿಕಲ್ಪನೆ ಮನುಷ್ಯನ ಒಳಗೆ ಇದೆ. ಸುಖ ಬಾಹ್ಯ ವಸ್ತುವಿನಲ್ಲಿಲ್ಲ. ಅದು ನಮ್ಮ ಒಳಗೆ ಇದೆ” ಎನ್ನುತ್ತಾರೆ. ಒಂದು ಸಮುದಾಯದಲ್ಲಿದ್ದಾಗ ಈ ರೀತಿಯ ಮಾನಸಿಕತೆಯಿಂದ ಹೊರಬರಬೇಕು. ಅದರರ್ಥ ಸಮುದಾಯಕ್ಕೆ, ಸಮಾಜಕ್ಕೆ ಶರಣಾಗುವುದಲ್ಲ, ಬದಲಾಗಿ ನಾಲ್ಕು ಜನರ ಜೊತೆಗೆ ನನ್ನ ಸುಖವನ್ನು  ಹಂಚಿಕೊಳ್ಳುವುದು. Do’s and don’t ಇದೆ. ಈ ಸುಖದ ಕಲ್ಪನೆಗಳ ಆಧಾರದ ಮೇಲೆ ಹುಟ್ಟಿರುವ ಈ ವೋಕ್, ಲಿಬರಲ್‌ ಮಾನಸಿಕತೆಗಳ ಹಿಂದೆ ಇರುವ ಸುಖದ ಪರಿಕಲ್ಪನೆ ಬೇರೆ, ಭಾರತೀಯ ದೃಷ್ಟಿಯ ಸುಖದ ಪರಿಕಲ್ಪನೆ ಬೇರೆಯೇ ಇದೆ. ಬಾಹ್ಯದ ಇಂದ್ರಿಯಗಳಲ್ಲಿ ಮಾತ್ರವಲ್ಲ, ಅದರಾಚೆಗೂ ಒಂದು ಸುಖವಿದೆ. ಇದು ಬದಲಾಗಲು ಭಾರತೀಯ ಚಿಂತನೆ ಪ್ರಸ್ತುತವಾದುದು, ‘thinking more and more about others’ ಎನ್ನುವುದೇ ಆಧ್ಯಾತ್ಮ ಎನ್ನುತ್ತಾರೆ. ಪಾಶ್ಚಾತ್ಯರಲ್ಲಿ ಹೇಗಿತ್ತು ಎನ್ನುವುದನ್ನ ಠೇಂಗಡಿ ಅವರು ಚರ್ಚೆ ಮಾಡುತ್ತಾರೆ.  ಅವರು ಶೋಪೆನ್
World has will and representation ನಲ್ಲೂ ಇದನ್ನೇ ಹೇಳಿದ್ದು. ಗುರೂಜಿಯವರು  ಆತ್ಮ ಸುಖ ಎನ್ನುವುದರ ಬಗೆಗೆ ಮಾತನಾಡುತ್ತಾ ಒಬ್ಬ ಬಹಳ ಅನುಕೂಲಸ್ಥ ಮನೆತನದಿಂದ ಸಂಘದ ಕೆಲಸ ಮಾಡುತ್ತಾ ಪ್ರಚಾರಕ್ ವ್ಯವಸ್ಥೆಯೊಳಗೆ ಬಂದ, ಸಂಘ ಹೇಳಿದ ಕೆಲಸ, ಹೇಳಿದ ಕಡೆ ಮಾಡುವ ಪ್ರಚಾರಕನಾಗಿಯೂ ಬಿಟ್ಟ. ಒಮ್ಮೆ ಬೈಠಕ್‌ನಲ್ಲಿ ಅವನೊಂದಿಗೆ ಸಂಭಾಷಣೆ ನಡೆಸುವಾಗ ಅವನು ಎದ್ದು ನಿಂತ ಪರಿಚಯ ಹೇಳಿಕೊಂಡ. ಗುರೂಜಿಯವರು ಕೇಳಿದರು –  ಏನೇನ್ ಬಿಟ್ಟು ಬಂದೆ ? ಅವನು – ‘ಮನೆ, ಮಂದಿ ನೆಂಟರು’ ಎಂದ, ಇನ್ನೇನು ಎಂದಾಗ ‘ಕೆಲಸ, ಸಂಬಳ’ ಬಿಟ್ಟು ಬಂದಿದ್ದಿನಿ ಎಂದ. ಗುರೂಜಿಯವರು- ‘ಆನಂದ ಸುಖ’ ಬಿಟ್ಟು ಬಂದಿದ್ಯ? ಅಂದಾಗ – ‘ಇಲ್ಲ ಅದು ಇಲ್ಲಿ ಸಿಗ್ತಿದೆ’ ಅಂದ. ಅಂದರೆ ಗುರೂಜಿಯವರು ಹೇಳುತ್ತಾ, “ಅನೇಕ ಬಾರಿ ಸಿಕ್ಕಿದಾಗ ಆಗುವ ಆನಂದ ಎನ್ನುವುದು ಕೆಲವನ್ನು ಬಿಟ್ಟು ಬಂದಾಗಲೂ ಆಗುತ್ತದೆ ಅದು ಆತ್ಮಸುಖ”.

ಇನ್ನು ಟೆಕ್ನಾಲಜಿಯ ಯುಗ ಅಂತ ಕರೆಯುತ್ತೇವೆ, ಇವತ್ತು ಹುಟ್ಟಿದ ಯಾವುದೇ ಟೆಕ್ನಾಲಜಿ, ನಾಳೆ ನಮ್ಮ ಬಾಗಿಲಿಗೆ ಬಂದೇ ಬರುತ್ತದೆ. ಇದು ಬೆಳೆಯೋದ್ರಿಂದ ಮನುಷ್ಯನಿಗೆ ಹಾನಿಕಾರಕವಾಗುತ್ತದೆ‌. ಖಾಸಗೀತನದ ಸೌಂದರ್ಯ ಹೊರಟುಹೋಗಿದೆ ಎನ್ನುವ ರೀತಿಯಲ್ಲಿ ನಮ್ಮ ಚರ್ಚೆಯಿದೆ. ಇಬ್ಬರು ಮಕ್ಕಳು ಮೂರು ಸ್ಕ್ರಿನುಗಳ ಮಧ್ಯೆ ಕಳೆದು ಹೋಗಿದ್ದಾರೆ ಎನ್ನುತ್ತಾರೆ ಒಬ್ಭ ಟೆಕ್ ಕಂಪೆನಿ ಮಾಲೀಕರು. ಟೆಕ್ನಾಲಜಿ ಎನ್ನುವುದು ಅನಿವಾರ್ಯ. ಗುರೂಜಿಯವರ ಕಾಲದಲ್ಲಿ ಇಷ್ಟು ವೇಗ ಪಡೆಯದೆ ಇದ್ದರೂ ಆಗಿನ ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಗೆ ಅವರು ವ್ಯಕ್ತ ಪಡಿಸಿದ್ದ ಅಭಿಪ್ರಾಯ, ವಿಚಾರ ಈಗಲೂ ಪ್ರಸ್ತುತ. ಯಾವುದೇ ತಂತ್ರಜ್ಞಾನದ ಮೂಲ ದೃಷ್ಟಿ ಧರ್ಮದ ಆಧಾರದ ಮೇಲೆ ಇರುವಂತೆ ನೋಡಿಕೊಳ್ಳಬೇಕು. Balance, ಸಂತುಲನ ಇರುವಂತೆ ನೋಡಿಕೊಳ್ಳಬೇಕು. Information, technology, science ಯಾವುದೇ ಆದರೂ, ಎಲ್ಲವೂ ಧರ್ಮ ದೃಷ್ಟಿಯಿಂದಲೇ ಒಡಮೂಡಬೇಕು. ವಿಜ್ಞಾನ, ತಂತ್ರಜ್ಞಾನವನ್ನು ತಡೆಯಲು ಸಾಧ್ಯವಿಲ್ಲ. ಬದಲಾಗಿ ಅದರ regulation ಎನ್ನುವುದರ ವಿಚಾರ ಧರ್ಮದ ಆಧಾರದಲ್ಲಿರಬೇಕು. ಯಾವುದರ ಬೆಳವಣಿಗೆ ಧರ್ಮದ ನಿಟ್ಟಿನಲ್ಲಿರುವುದಿಲ್ಲವೋ, ಎಲ್ಲಿ ಈ ರೀತಿಯ cosmic balance ಇರುವುದಿಲ್ಲವೋ, ಸಂಸ್ಕೃತಿ ಇಲ್ಲದಿರುವುದಿಲ್ಲವೋ ಅದು ನಿಜಕ್ಕೂ ಹಾನಿಕಾರಕ.
ಇತ್ತೀಚೆಗೆ Better than us ಎನ್ನುವ ಸೀರೀಸ್ ಈ ಕುರಿತು ಹೊಸ ಬೆಳಕು ಚೆಲ್ಲಬಹುದು. ಇತ್ತೀಚೆಗೆ Go ಎನ್ನುವ ಚೆಸ್ ರೀತಿಯ ಬೋರ್ಡ್ ಆಟ. ಅತ್ಯಂತ ಕಷ್ಟಕರವಾದ ಆಟ. ಅದರ ವರ್ಲ್ಡ್ ಚಾಂಪಿಯನ್ ಶಿಪ್ ನಡೆಯುತ್ತಿತ್ತು. ಅದರ ವರ್ಲ್ಡ್ ಚಾಂಪಿಯನ್ ಆಗಿದ್ದ ಒಬ್ಬನನ್ನ ಆರ್ಟಿಫೀಷಿಯಲ್ ಇಂಟಲಿಜೆನ್ಸ್ 4:1 ರಲ್ಲಿ ಗೆದ್ದಿತು. ಗೋ ಆಲ್ಫಾ ಎನ್ನುವ ವಿಶೇಷ ತಂತ್ರಜ್ಞಾನವನ್ನೇ ಅದಕ್ಕಾಗಿ ನಿರ್ಮಾಣ ಮಾಡಲಾಗಿತ್ತು. ಈ ಕುರಿತು ಮಾನಸಿಕ ತಜ್ಞರೊಬ್ಬರು ಅದರ ಕುರಿತು ಒಂದು ವಿಶೇಷವಾದ ವಿಶ್ಲೆಷಣೆ ಮಾಡಿ, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಸಹ ಒಂದಷ್ಟು ಸೆಟ್ ಆಫ್ ಪ್ರಾಕ್ಟೀಸ್, ತನ್ನದೇ ಆದ ಆಟದ ರೀತಿಯನ್ನು ರೂಪಿಸಿಕೊಂಡಿತ್ತು‌. ಇದು ಅದರ ಕಲ್ಚರ್ ಆಗಿತ್ತು ಎನ್ನುತ್ತಾರೆ‌.ಇಲ್ಲಿ ವಿಶೇಷ ಎನಿಸಿದ್ದು ಕಲ್ಚರ್ ಎನ್ನುವ ಶಬ್ದ ಬಳಸುತ್ತಾರೆ. ಅದರ ಕಲ್ಚರ್‌ನ ಆಧಾರದಲ್ಲಿ ಅದು ಗೆಲ್ತು. ತಂತ್ರಜ್ಞಾನ ಎನ್ನುವುದು ಅನಿವಾರ್ಯ, ಪರಿಣಾಮಕಾರಿ ಅದರ ಸೂಕ್ತ ಉಪಯೋಗ ನಮ್ಮದು.
ಠೇಂಗಡಿಯವರು ಗುರೂಜಿಯವರ ವಿಚಾರಗಳನ್ನು ಉಲ್ಲೇಖ ಮಾಡುತ್ತಾ “ಧರ್ಮಪ್ರೋಣ ವ್ಯಕ್ತಿಗಳು – ಧರ್ಮಾಧಿಷ್ಠ ಸಮಾಜ ಈ ದೃಷ್ಟಿ ಶಾಶ್ವತ – ನಾಳೆ ಇನ್ನೂ ಬದಲಾವಣೆಯಾಗಬಹುದು.ಆದರೆ ಮೂಲ ಇದೇ ಆಗಬೇಕು”ಎನ್ನುತ್ತಾರೆ.

ಶಿಕ್ಷಣ ಎಂದರೇನು? ಗುರೂಜಿಯವರು ಶಿಕ್ಷಣ, ವಿದ್ಯಾರ್ಥಿಗಳಿಗೆ ಕಲಿಸುವ ಗುರುಗಳು, ವ್ಯವಸ್ಥೆಯ ಕುರಿತು ಅನೇಕ ದೃಷ್ಟಿಕೋನ ನೀಡಿದ್ದಾರೆ‌. ಶಿಕ್ಷಣದ ಭವಿಷ್ಯದ ಕುರಿತು ಯೋಚಿಸಿದಾಗ – ಎಂ ಹಿರಿಯಣ್ಣನವರು ಹೇಳುವ ಹಾಗೆ – “education is not just informing minds but forming minds”, ಮನಸನ್ನ ರೂಪಿಸುವ ಶಿಕ್ಷಣದ ಅಗತ್ಯವಿದೆ.  ಕೊನೆಗೆ ಎಂತವರನ್ನು ತಯಾರು ಮಾಡುತ್ತೀರಾ? ಎಂದು ಯೋಚಿಸುತ್ತೇವೆ.ಶಾಲೆಯಲ್ಲಿ ಇರುವ 9-5  ಶಿಕ್ಷಣ ಅಲ್ಲ, ಕುಟುಂಬ ಸಮಾಜ ಶಿಕ್ಷಣದ ಜವಾಬ್ದಾರಿ ಹೊರಬೇಕು. ಒಂದೊಮ್ಮೆ “I have never allowed my schooling to interfere my education” ಎನ್ನುತ್ತಾನೆ Mark twain. ಗುರೂಜಿಯವರು ಮಾತನಾಡುತ್ತಾ Intelligence is different from education. ಬುದ್ಧಿ ಮನಸುಗಳ ಸರಿಯಾದ ಶಿಕ್ಷಣವಾಗಬೇಕು ಎನ್ನುತ್ತಾರೆ. ಧರ್ಮದ 10 ಲಕ್ಷಣಗಳನ್ನು ಉದಾಹರಿಸಿ ಹೇಳುತ್ತಾರೆ.

ಒಮ್ಮೆ ಹೀಗೆ ಯಾವುದೋ ಶಾಲೆಗೆ ಹೋದ ಸಂದರ್ಭದಲ್ಲಿ ಪಾಶ್ಚಾತ್ಯ ಶಿಕ್ಷಣದ ಚಾರ್ಟುಗಳು ಅದರ ಹಜಾರದಲ್ಲಿತ್ತು. ಅದನ್ನು ನೋಡಿದ ಗುರೂಜಿಯವರಿಗೆ ಮಕ್ಕಳಿಗೆ ಏನನ್ನು ಕಲಿಸುತ್ತೇವೆ ಎಂದು ಕೇಳುತ್ತಾರೆ. ಸತ್ಯಕಾಮ ಜಾಬಾಲಿಯ ಘಟನೆಯನ್ನೂ ಉಲ್ಲೇಖಿಸುತ್ತಾರೆ. ಅಂತಹ ವಿದ್ಯಾರ್ಥಿಗಳನ್ನ ನಾವು ತಯಾರು ಮಾಡಲು ಹೊರಟಿದ್ದೇವೆಯೇ ಎಂದು ಕೇಳಿಕೊಳ್ಳಬೇಕು ಎನ್ನುತ್ತಾರೆ. Information,knowledge ಎಲ್ಲ ಇದೆ, ಆದರೆ ಗುಣಗಳನ್ನು ಪಡೆಯುವುದು, ಯಾವುದನ್ನ ನಂಬಿಕೊಂಡು ಅವನು ಜೀವನ ಮಾಡಬೇಕಿದೆಯೋ ಅದು ಮುಖ್ಯ ಎಂಬುದನ್ನು ಗುರೂಜಿ ವಿಷನ್ ಎಂಡ್ ಮಿಷನ್ ಪುಸ್ತಕದಲ್ಲಿ ಹೇಳುತ್ತಾರೆ.

ಇನ್ನು ಜಾಗತಿಕ ವ್ಯವಸ್ಥೆ- world order ಕುರಿತಾಗಿ ಗುರೂಜಿಯವರ ಕಾಲಖಂಡದಲ್ಲಿ ಅನೇಕ ಬದಲಾವಣೆಗಳು ನಡೆಯುತ್ತಿತ್ತು, ಚಿಂತನಗಂಗಾದ ಪ್ರಾರಂಭದ ಅಧ್ಯಾಯದಲ್ಲಿ ನಮ್ಮ ಜಾಗತಿಕ ಧ್ಯೇಯದ ಕುರಿತಾಗಿ ಅವರು ಮಾತನಾಡುತ್ತಾರೆ. ಇದೊಂದು ಸನಾತನ ದೃಷ್ಟಿ. Nationalism ಅನ್ನು ರಾಷ್ಟ್ರೀಯತೆ ಎಂದೂ ನೇರವಾಗಿ  ಅನುವಾದ ಮಾಡುವ ಸರಿಯಾದ ಶಬ್ದಗಳಲ್ಲ. ಆತ್ಮವಿಸ್ಮೃತಿ – ಸ್ವಾರ್ಥ ಕೇಂದ್ರಿತ ವಿಚಾರಗಳಿಂದ ಹೊರಬಂದು ಯೋಚಿಸುವ ವ್ಯಕ್ತವಾಗಿರುವ ಒಟ್ಟು ಅಭಿಪ್ರಾಯವೇ ರಾಷ್ಟ್ರೀಯತೆ. ಸನಾತನ ಚಿಂತನೆಗಳು ಅತ್ಯಂತ ಉನ್ನತ ಮಟ್ಟದ್ದು,  ಪಾಶ್ಚಾತ್ಯ ದೇಶಗಳಲ್ಲಿ ಅದೊಂದು ನಕಾರಾತ್ಮಕ ದೃಷ್ಟಿಕೋನ ಎನ್ನುವ ಅಭಿಪ್ರಾಯ ಮೂಡಿದೆ. Nationalism ಎನ್ನುವುದು ಸಂಕುಚಿತ ಮನೊಭಾವ ಮೂಡಿದೆ. ಪ್ರಾದೇಶಿಕ ಅಸ್ಮಿತೆ, ಅಥವಾ ಆಯಾ ಪ್ರದೇಶದ ಗುಣ ಧರ್ಮದ ಆಧಾರದಲ್ಲಿ ಬದುಕುತ್ತಿರುವ ಜನರ ಅಭಿಪ್ರಾಯಗಳಿಗೆ ಗೌರವ ನೀಡು ಬದುಕುವುದು ಭಾರತೀಯ ದೃಷ್ಟಿಯಿಂದ ರಾಷ್ಟ್ರೀಯತೆ.

ಗುರೂಜಿಯವರು ಹೇಳುತ್ತಿರುವ ರಾಷ್ಟ್ರೀಯತೆಯ ಚಿಂತನೆಗೆ ಪಾಶ್ಚಾತ್ಯ ಜಗತ್ತಿನಲ್ಲೂ ಮಾನ್ಯತೆ ದೊರೆಯುತ್ತಿದೆ. ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿದ್ದು, ಬ್ರೆಕ್ಸಿಟ್, ಫ್ರಾನ್ಸ್ , ಇಟಲಿಯಲ್ಲಾದ ಬದಲಾವಣೆಯಿರಬಹುದು ಇದೆಲ್ಲವೂ ಕೂಡ ವಿಭಿನ್ನ ಗುಣ ಧರ್ಮದ ಜನರಿದ್ದಾರೆ‌, ಅವರ ಬಗೆಗೂ ಯೋಚಿಸಬೇಕುವೆನ್ನುವುದು ಮುಖ್ಯ ಎನ್ನುವ ದೃಷ್ಟಿಕೋನಕ್ಕೆ ಇಂಬು ನೀಡಿರುವಂಥದ್ದು. Individualism, liberalism, ಇವೆರಡರ ಮಧ್ಯೆಯಿರುವ realist ಆಗಿರುವ ಮಧ್ಯದ ‘ನನಗಿಂತ ದೊಡ್ಡದು, ಜಗತ್ತಿನ ದೊಡ್ಡ ಪರಿಪೇಕ್ಷದ ನಡುವೆ ಕಲೆದಹೋಗದ’ ಪ್ರಾಕ್ಟಿಕಲ್ ಆಗಿರುವ ರಾಷ್ಟ್ರೀಯತೆ ಎನ್ನುವುದು ನಮ್ಮ ದೃಷ್ಟಿಯ operational base. Ethnic nationalism, tech nationalism ಎನ್ನುವ ಕಲ್ಪನೆಗಳೆಲ್ಲ ಈ ಪಾಶ್ಚಾತ್ಯ ಮೂಲವೇ. ರಾಷ್ಟ್ರೀಯತೆ ಎನ್ನುವುದು ಜಗತ್ತಿನ ಒಳಿತಿಗಾಗಿಯೇ ಎನ್ನುವುದು ನಮ್ಮ ಆದ್ಯತೆ.  ಅಮೆರಿಕದ ದೊಡ್ಡಣ್ಣನ ಮನಸ್ಥಿತಿಗಿಂತ ಭಿನ್ನವಾದದ್ದು.  ಮೌಲ್ಯಗಳಿಗಾಗಿ ಒಟ್ಟಾಗುವುದು, ಒಂದು ಜಗತ್ತಿನ ಒಳಿತಿಗಾಗಿ ಒಟ್ಟಾಗುವುದು ನಮ್ಮ ಆಶಯ.

ವಿ.ನಾಗರಾಜ ಅವರು ಮಾತನಾಡಿ, “ಸಾಧಾರಣವಾಗಿ ಮಹಾಪುರುಷರು, ಮಹಾಮಹಿಳೆಯರು ಎಂದು ಗುರುತಿಸುವುದು ಹೇಗೆ? ಕೆಲವರು ಅವತ್ತಿನ ಕಾಲಖಂಡಕ್ಕೆ ಬೇಕಾದ ಸಂಗತಿಗಳ ಕುರಿತು ಮಾತನಾಡುತ್ತಾರೆ – ಆ ಸಮಯ ಮುಗಿದ ಮೇಲೆ ಅದರ ಅಗತ್ಯವಿರುವುದಿಲ್ಲ. ಆದರೆ ಕೆಲವರು ಹೇಳಿದ್ದು beyond time and space ಆ ರೀತಿಯವರನ್ನ ನಾವು ದೃಷ್ಟಾರರು ಅಂತ ಕರೆಯುತ್ತೇವೆ. ಚಾಣಕ್ಯ,ಶಂಕರ, ವಿವೇಕಾನಂದರ ಚಿಂತನೆಗಳು ಈ ರೀತಿಯಲ್ಲಿ ಭವಿಷ್ಯದ ಚಿಂತನೆಯನ್ನೂ ಜೋಡಿಸಿಕೊಂಡಿದೆ. ಆ ಸಾಲಿನವರು ಗುರೂಜಿಯವರು.ಅವರು ಬದುಕಿದ್ದಾಗ Turbulant ಎನ್ನುವ ಪರಿಸ್ಥಿತಿ ಇತ್ತು,ಆಗ ಹಿಂದೂ ಸಮಾಜದ ಮುಖವಾಣಿಯಾಗಿದ್ದ RSSನ ಮುಖ್ಯಸ್ಥರಾಗಿದ್ದರು. ಇದೊಂದು ತಾತ್ಕಾಲಿಕವಾಗಿ ಸಂಘಟನೆಗಳನ್ನು ನಡೆಸುವುದು ಮಾತ್ರವಲ್ಲ, ಇಡಿಯ ಸಮಾಜಕ್ಕೆ ಸರಿಯಾದ ದಿಕ್ಕು ನೀಡಬೇಕಿತ್ತು, ಗುರೂಜಿಯವರ ‘world peace is is our ultimate goal’ ಎಂದಿದ್ದರು. ಇತ್ತೀಚೆಗೆ ಜೀನ್ ಪಿರ್ರೆ ಎಂಬ ಸಮಾಜ ಶಾಸ್ತ್ರಜ್ಞ ಎಲ್ಲ ಸಮಸ್ಯೆಗಳನ್ನ ಚರ್ಚೆ ಮಾಡಿ, ನಮ್ಮ ಪ್ಲಾನೆಟ್ ಸರ್ವೈವ್ ಆಗಬೇಕಾದರೆ ಸಮಾಜದಲ್ಲಿ ಮೌಲ್ಯಗಳು, ಆಧ್ಯಾತ್ಮಿಕ ಕಲ್ಪನೆ, ಎಥಿಕಲ್ ಕಂಪಾಸ್ ಇರಬೇಕು ಎಂದಿದ್ದ. ಇವುಗಳನ್ನು ಗುರೂಜಿ ತಮ್ಮ ಕಾಲ ಖಂಡದಲ್ಲಿ ಚಿಂತನೆ ನಡೆಸಿದ್ದಲ್ಲದೆ, ಅದಕ್ಕೆ ಅಗತ್ಯವಾದುದನ್ನು ಮಾಡಿದರು” ಎಂದರು.

ಮಿಥಿಕ್ ಸೊಸೈಟಿಯ ಗೌರವ ಅಧ್ಯಕ್ಷರಾದ ಕೃ. ನರಹರಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹರಾದ ನಾ ತಿಪ್ಪೇಸ್ವಾಮಿ,ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ,ಹಿರಿಯ ಸಾಹಿತಿಗಳಾದ ಎಸ್‌.ಆರ್.ರಾಮಸ್ವಾಮಿಯವರು ಮುಂತಾದ ಹಿರಿಯರು ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.