– ಶ್ರೀ. ಎಸ್.ಎಸ್.ನರೇಂದ್ರಕುಮಾರ್
ವಿಶ್ವ ಸಂವಾದ ಕೇಂದ್ರದ ವಿಶ್ವಸ್ಥ.

ಇತ್ತೀಚೆಗೆ ನಿಧನರಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರು, ವಿಶ್ವ ಸಂವಾದ ಕೇಂದ್ರ, ಕರ್ನಾಟಕದ ಸ್ಥಾಪಕರಾದ ಶ್ರೀ ಚಂದ್ರಶೇಖರ ಭಂಡಾರಿಗಳ ಕುರಿತು ವಿಶ್ವ ಸಂವಾದ ಕೇಂದ್ರದ ವಿಶ್ವಸ್ಥರು ಹಾಗು ಅವರ ಹತ್ತಿರದ ಒಡನಾಟವಿದ್ದ ಎಸ್‌.ಎಸ್.ನರೇಂದ್ರ ಕುಮಾರ್ ಅವರು ನುಡಿನಮನವನ್ನು ಸಲ್ಲಿಸಿದ್ದಾರೆ.

“ಮಾನ್ಯ ಚಂದ್ರು ಅವರೋಡನೆ ನಿಕಟವಾಗಿ ವ್ಯವಹರಿಸುವ ಸುಯೋಗ ಕಳೆದ ಎರಡು ದಶಕಗಳಿಂದ ಲಭಿಸಿತ್ತು. ಅವರನ್ನು ನಾನು ಶಾಲಾ ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಗಮನಿಸುತ್ತಿದ್ದೆ. ಅವರನ್ನು ಕಂಡರೆ ಅದೇನೋ ಒಂದು ರೀತಿಯ ವಿಶೇಷ ಗೌರವದ ಭಾವ ಮೂಡುತ್ತಿತ್ತು. ಅವರಿಗೂ ನನ್ನ ಕುರಿತು ವಿಶೇಷ ವಾತ್ಸಲ್ಯ. ಅವರ ಮಾರ್ಗದರ್ಶನದಲ್ಲಿ ನೂರಾರು ಲೇಖನಗಳನ್ನು ಬರೆಯುವ, ಅನುವಾದಿಸುವ ಅವಕಾಶ ಸಿಕ್ಕಿತು, ನಾನೂ ಬರೆಯುವುದನ್ನು ಕಲಿತೆ. ಅವರು ಗುಣಮಟ್ಟದ ಸಮಾಚಾರ ಸಮೀಕ್ಷೆಯನ್ನು ತಯಾರಿ ಮಾಡುವ ರೀತಿಯನ್ನು ಮುಂದೆ ನಿಂತು ಕಲಿಸಿದರು.”

“ನನ್ನ ಮದುವೆಯ ಮಂಗಳನಿಧಿ ಕಾರ್ಯಕ್ರಮಕ್ಕೆ ಅವರದೇ ಬೌದ್ಧಿಕ್. ಅವರೇನೂ ವಿದ್ಯಾರಣ್ಯ ಶೆಣೈ, ಸು.ರಾಮಣ್ಣನವರಂತೆ ಆಕರ್ಷಕ ಮಾತುಗಾರರಲ್ಲ. ಆದರೆ, ಅವರು ಉಪಯೋಗಿಸುವ ಪ್ರತಿಯೊಂದು ಪದವೂ ತೂಕ ನೋಡಿ, ಸಾಕಷ್ಟು ಯೋಚಿಸಿ ಬಳಸಿದ್ದು. ಮಾತು ಸುಲಭಕ್ಕೆ ಅರ್ಥವಾಗದು, ಆದರೆ ಬಹಳ ಆಳವಾದ ಚಿಂತನೆಗಳಿಂದ ಕೂಡಿದ್ದು. ಅವರ ಪ್ರತಿಯೊಂದು ಬರಹವೂ ನನಗೆ ಅಚ್ಚುಮೆಚ್ಚು ಮತ್ತು ಮಾರ್ಗದರ್ಶಿ.”

“ಅವರ ಸೂಚನೆಯಂತೆಯೇ ನಾನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮತ್ತು ವಿಶ್ವ ಸಂವಾದ ಕೇಂದ್ರಗಳಿಗೆ ಸೇರ್ಪಡೆಯಾದೆ. ಅವರು ಇಲ್ಲವೆಂಬ ಸುದ್ದಿ ಮನಸ್ಸನ್ನು ಕದಡಿದೆ, ಏನೋ ಖಾಲಿಯಾದಂತೆ ಅನ್ನಿಸುತ್ತಿದೆ. ನಾನಂತೂ ಒಬ್ಬರು ಮಾರ್ಗದರ್ಶಕರನ್ನು ಕಳೆದುಕೊಂಡಿರುವೆ.”

“ಅವರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಭಗವಂತನಲ್ಲಿ ಮನದಾಳದ ಪ್ರಾರ್ಥನೆ.”

(ಶ್ರೀ. ಎಸ್. ಎಸ್. ನರೇಂದ್ರಕುಮಾರ್ ಅವರು ತಂತ್ರಜ್ಞರು. ಸಾಫ್ಟ್ ವೇರ್ ಉದ್ಯೋಗಿ. ಹಲವಾರು ಪುಸ್ತಕಗಳ ಲೇಖಕರು. ಕೆಲವಾರು ಪುಸ್ತಕಗಳನ್ನು ಅನುವಾದಿಸಿದ್ದಾರೆ.  ಹಿಂದೆ ಕೆಲವರ್ಷಗಳ ಕಾಲ ಪ್ರಚಾರಕರಾಗಿ ಕರ್ನಾಟಕ ಪ್ರಾಂತದಲ್ಲಿ ಕಾರ್ಯ ನಿರ್ವಹಿಸಿದ್ದಾರೆ.)

Leave a Reply

Your email address will not be published.

This site uses Akismet to reduce spam. Learn how your comment data is processed.