ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಅಬಲಾಶ್ರಮದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಮೂವರು ಪದ್ಮಶ್ರೀ ಪುರಸ್ಕೃತ ಮಹಿಳೆಯರ ಆಗಮಿಸಿದ್ದರು.
ಸುಮಂಗಲಿ ಸೇವಾಶ್ರಮದ ಸಂಸ್ಥಾಪಕಿ ಹಾಗೂ 2026ರ ಪದ್ಮಶ್ರೀ ಪುರಸ್ಕೃತರಾದ ಶ್ರೀಮತಿ ಸುಶೀಲಮ್ಮ, ವಿಮಾನಯಾನ ವಿಜ್ಞಾನಿ ಹಾಗೂ 2026ರ ಪದ್ಮಶ್ರೀ ಪುರಸ್ಕೃತರಾದ ಡಾ. ಶುಭಾ ವಿ. ಐಯಂಗಾರ್ ಮತ್ತು ಅಬಲಾಶ್ರಮದ ಅಧ್ಯಕ್ಷೆಯೂ ಖ್ಯಾತ ಕ್ಯಾನ್ಸರ್ ತಜ್ಞೆಯೂ ಆಗಿರುವ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, 2026ರ ಶ್ರೀಮತಿ ಕೃಷ್ಣಮ್ಮ ಸ್ಮಾರಕ ಪ್ರಶಸ್ತಿಯನ್ನು ಇಬ್ಬರು ಸಾಧಕ ಮಹಿಳೆಯರಿಗೆ ಪ್ರದಾನಿಸಿದರು.
2026ರ ಶ್ರೀಮತಿ ಕೃಷ್ಣಮ್ಮ ಸ್ಮಾರಕ ಪ್ರಶಸ್ತಿಯನ್ನು NIRMAI ಸಂಸ್ಥಾಪಕಿ ಡಾ. ಗೀತಾ ಮಂಜುನಾಥ್ ಹಾಗೂ ಐಎಎಸ್ ಅಧಿಕಾರಿ ಅಪರ್ಣಾ ರಮೇಶ್ ಅವರಿಗೆ ಪ್ರದಾನಿಸಲಾಯಿತು.


ಈ ಸಂದರ್ಭದಲ್ಲಿ ಅಬಲಾಶ್ರಮದ ಗೌರವ ಕಾರ್ಯದರ್ಶಿ ಡಾ. ಆರ್.ಎಸ್. ಭಾರತೀಶ ರಾವ್ ಹಾಗೂ ಆಡಳಿತ ಸಮಿತಿಯ ಇತರೆ ಸದಸ್ಯರು ಉಪಸ್ಥಿತರಿದ್ದರು.