ಭಗವೆ ನಿನ್ನಯ ಭಾಷೆ ಜಗಕೊಂದು ವಿಸ್ಮಯವು
ನಿನ್ನ ಸನ್ನಿಧಿಯಲ್ಲೇ ನನ್ನ ಅಧ್ಯಯನ
ತೆಗೆದಷ್ಟು ಮೊಗೆದಷ್ಟು ಹೊಚ್ಚ ಹೊಸ ಹೊಳಹುಗಳು
ಬರಹ, ಬಳಪಗಳಿಲ್ಲ ಮೌನ ಸಂವಹನ

ಕದನ ಕಲಿಗಳ ಶಕ್ತಿ , ತ್ಯಾಗಗುಣದಭಿವ್ಯಕ್ತಿ
ಜ್ಞಾನಗಳಿಕೆಗೆ ಸ್ಫೂರ್ತಿ, ಸಂಘ ಶಕ್ತಿ,
ಧ್ಯೇಯಯಾತ್ರಿಯ ದೀಪ್ತಿ, ಭಾರತಾಂಬೆಯ ಕೀರ್ತಿ
ಏಕತೆಯ ಅನುಭೂತಿ, ರಾಷ್ಟ್ರ ಭಕ್ತಿ!

ಜನನದಿನದರಿವಿಲ್ಲ, ಭಗವೆ ನಿನಗಳಿವಿಲ್ಲ
ಮನದಳಲ ಪರಿಹರಿಪ  ಆತ್ಮಬಲ ನೀನು,
ದೇಶ,ಧರ್ಮದ ಒಲವು, ಸ್ವತ್ವ- ಸತ್ಯದ ಗೆಲುವು
ಭಾರತದಿ ಕುಡಿಯೊಡೆದ ಛಲವು ನೀನು!

ನನ್ನಿರವ ಮರೆತಿಹೆನು ನಿನ್ನೊಳಗೆ ಬೆರೆತಿಹೆನು
ನಿನ್ನೊಡನೆ ಉನ್ನಯನವೆನ್ನ ಬಯಕೆ
ಸನ್ಮತಿಯು ಸಾಮಿಪ್ಯ ಸಾನ್ನಿಧ್ಯ ಗಳಿಸಿರುವೆ
ಸಾಯುಜ್ಯಗಳಿಕೆಯದು ಬಾಳ ಹರಕೆ!

-ಕೃಷ್ಣ ಪ್ರಸಾದ ಬದಿ, ಲೇಖಕರು, ಪ್ರಚಾರಕರು

ಭಗವೆ= ಭಗವಾಧ್ವಜ
ಉನ್ನಯನ= ಉತ್ಕರ್ಷ

Leave a Reply

Your email address will not be published.

This site uses Akismet to reduce spam. Learn how your comment data is processed.