ಬೆಂಗಳೂರು, ಏಪ್ರಿಲ್ 7: ಥಣಿಸಂದ್ರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಶಾಲೆಯ ಸೇವಾ ಪ್ರಕಲ್ಪದ ಅಡಿಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಆಯೋಜಿಸಲಾಗಿರುವ ಉಚಿತ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಲಾಯಿತು. ಶಿಬಿರದ ಉದ್ಘಾಟನೆಯನ್ನು ರಾಷ್ಟ್ರೋತ್ಥಾನ ಪರಿಷತ್ತಿನ ಉಪಾಧ್ಯಕ್ಷ ಎ ಆರ್ ದ್ವಾರಕನಾಥ್‍, ರಾಜೇಶ್ ದೇಶ್‍ಮುಖ್, ಶಾಲೆಯ ಪ್ರಾಂಶುಪಾಲೆ ಮಂಜುಳಾ ಹಾಗೂ ದಾನಿಗಳಾದ ರವಿಶಂಕರ್ ನೆರವೇರಿಸಿದರು.

ಈ ಬೇಸಿಗೆ ಶಿಬಿರವನ್ನು 25 ಸರ್ಕಾರಿ ಶಾಲೆಗಳಿಂದ ಆಯ್ಕೆಯಾದ 50 ವಿದ್ಯಾರ್ಥಿಗಳಿಗೆ ಏಪ್ರಿಲ್ 7ರಿಂದ ಆರಂಭಿಸಿ ಏಪ್ರಿಲ್ 12ರ ವರೆಗೆ, ಒಟ್ಟು 5 ದಿನಗಳ ಕಾಲ ನಡೆಸಲಾಗುವುದು. ಶಿಬಿರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳು, ಪುಸ್ತಕ, ಲೇಖನಿ, ಸ್ಕೂಲ್ ಬ್ಯಾಗ್, ಟೀ ಶರ್ಟ್‍ಗಳನ್ನು ಉಚಿತವಾಗಿ ನೀಡಲಾಯಿತು.

ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಶಾಲಾ ಮಾತೃಭಾರತಿ ತಂಡದವರಿಂದ ಮಾತೃಭೋಜನಕ್ಕೂ ಯೋಜನೆ ಹಾಕಿಕೊಂಡಿದ್ದಾರೆ. ಉಳಿದಂತೆ 5 ದಿನಗಳಿಗಾಗಿ ಯೋಜನಾಬದ್ಧ ವೇಳಾಪಟ್ಟಿ ತಯಾರಿಸಲಾಗಿದ್ದು, ಸಂಪನ್ಮೂಲ ವ್ಯಕ್ತಿಗಳನ್ನು ಜೋಡಿಸಲಾಗಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.